ಶಿರಾ:
ಪ್ರತಿಯೊಬ್ಬ ವಕೀಲರಲ್ಲೂ ಕೂಡಾ ಅವರದೇ ಆದಂತಹ ಆತ್ಮಸ್ಥೈರ್ಯವಿರಬೇಕಲ್ಲದೆ ನ್ಯಾಯಾಂಗ ಇಲಾಖೆಯು ವಕೀಲರ ಮೇಲೆ ಇಟ್ಟಿರುವ ಭರವಸೆಗಳು ಈಡೇರುವಂತಾಗಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಹಾಗೂ ತಾ. ಕಾನೂನು ಸೇವಾ ಸಮಿತಿ ಅಧ್ಯಕ್ಷರು ಆದ ಎಸ್.ಮಹೇಶ್ ತಿಳಿಸಿದರು.
ನಗರದ ವಕೀಲರ ಭವನದಲ್ಲಿ ಶುಕ್ರವಾರ ನಡೆದ ವಕೀಲರ ದಿನಾಚರಣೆ ಹಾಗೂ ರಾಜೇಂದ್ರ ಪ್ರಸಾದ್ ಅವರ ಜನ್ಮ ದಿನಾಚರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನ್ಯಾಯಾಂಗ ಇಲಾಖೆ ಅತ್ಯಂತ ಸುಭದ್ರಗೊಳ್ಳಲು ಸಕ್ರೀಯ ವಕೀಲರು ಮುಂದಾಗಬೇಕು. ಕಾನೂನು ಪೆÇ್ರೀತ್ಸಾಹಿಸುವ ಜವಾಬ್ದಾರಿ ವಕೀಲರ ಮೇಲಿದ್ದು ಸಮಾಜದ ಜ್ವಲಂತ ಸಮಸ್ಯೆಗಳ ನಿವಾರಣೆಗೆ ವಕೀಲರು ಪ್ರಮುಖ ಪಾತ್ರವಹಿಸಬೇಕು. ಪ್ರತಿಯೊಬ್ಬ ವಕೀಲರು ಕೂಡಾ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಕರ್ತವ್ಯ ನಿರ್ವಹಿಸಬೇಕು ಎಂದರು.
ನ್ಯಾಯಾಲಯದಲ್ಲಿ ಬಾಕಿ ಉಳಿದ ಪ್ರಕರಣಗಳ ಬಗ್ಗೆ ಹೆಚ್ಚಿನ ಗಮನಹರಿಸಿ ಅವುಗಳನ್ನು ಇಯರ್ಥಪರಿಸುವ ಕೆಲಸಗಳಾಗಬೇಕು. ಹಿರಿಯ ವಕೀಲರುಗಳು ಕಿರಿಯ ವಕೀಲರುಗಳಿಗೆ ಪ್ರಕರಣಗಳ ಸಂಬಂಧ ಅವರನ್ನು ಕೂಡಾ ಕ್ರಿಯಾಶೀಲರಾಗಿಸಬೇಕು ಎಂದು ಹಿರಿಯ ಶ್ರೇಣಿ ಸಿವಿಲ್
ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾ. ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಕು.ಕೆ.ಎಸ್.ಆಶಾ ಅವರು ಮಾತನಾಡಿ ಭಾರತದ ನ್ಯಾಯಾಂಗ ವ್ಯವಸ್ಥೆಯು ಅತ್ಯಂತ ಸದೃಢವಾಗಿದ್ದು ಸಶಕ್ತ ಸಮಾಜ ನಿರ್ಮಾಣದ ಕೆಲಸ ವಕೀಲರದ್ದಾಗಬೇಕು. ಕಾನೂನುಗಳ ಸಮಗ್ರ ಮಾಹಿತಿಗಳನ್ನು ಓದಿ ಅರಿಯುವ ಮೂಲಕ ಸಾರ್ವಜನಿಕರಿಗೆ ನ್ಯಾಯ ಲಭಿಸುವಂತಾಗಬೇಕು ಎಂದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಗೀತಾ ಅವರು ಮಾತನಾಡಿ ವಕೀಲರು ಸಂವಿಧಾನದ ರಕ್ಷಕರು ಕೂಡಾ ಆಗಿದ್ದು ವಕೀಲರು ನ್ಯಾಯಾಲಯಗಳಿಗೆ ತೆರಳುವ ಮುನ್ನ ಪ್ರಕರಣಗಳ ಬಗ್ಗೆ ವಿದ್ಯಾರ್ಥಿಗಳಂತೆ ಅಭ್ಯಾಸ ಕೈಗೊಳ್ಳುವುದು ಅಗತ್ಯ ಎಂದರು.
ವಕೀಲರ ದಿನಾಚರಣೆಯ ಸಂಬಂಧವಾಗಿ 25 ವರ್ಷಗಳವರೆಗೆ ನಿರಂತರವಾಗಿ ವೃತ್ತಿಯಲ್ಲಿ ತೊಡಗಿದ ವಕೀಲರುಗಳನ್ನು ಹಾಗೂ ವಕೀಲರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಂಘದ ವತಿಯಿಂದ ಅಭಿನಂಧಿಸಲಾಯಿತು.
ವಿಶೇಷ ಅಥಿತಿಗಳಾಗಿ ನಿ.ಪ್ರಾಂಶುಪಾಲ ಡಾ.ಪಿ.ಹೆಚ್.ಮಹೇಂದ್ರಪ್ಪ ಪಾಲ್ಗೊಂಡು ಮಾತನಾಡಿದರು. ಸಂಘದ ಅಧ್ಯಕ್ಷ ಧರಣೇಶ್ಗೌಡ, ಉಪಾಧ್ಯಕ್ಷರಾದ ವೈ.ಟಿ.ರಾಮಚಂದ್ರಪ್ಪ, ಪ್ರ. ಕಾರ್ಯದರ್ಶಿ ಕಂಬದೂರಪ್ಪ, ಖಜಾಂಚಿ ಹೆಚ್.ಗುರುಮೂರ್ತಿ, ಜೆಂಟಿ ಕಾರ್ಯದರ್ಶಿಬಿ.ಆರ್.ರಾಮಕೃಷ್ಣಪ್ಪ ಸೇರಿದಂತೆ ಅನೇಕ ಹಿರಿಯ ವಕೀಲರುಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಶಿರಾ ನಗರದ ವಕೀಲರ ಭವನದಲ್ಲಿ ಶುಕ್ರವಾರ ನಡೆದ ವಕೀಲರ ದಿನಾಚರಣೆ ಹಾಗೂ ರಾಜೇಂದ್ರ ಪ್ರಸಾದ್ ಅವರ ಜನ್ಮ ದಿನಾಚರಣಾ ಕಾರ್ಯಕ್ರಮವನ್ನು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎಸ್.ಮಹೇಶ್ ಉದ್ಘಾಟಿಸಿದರು. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಆಶಾ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಗೀತಾ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
