ಸಂಸ್ಕೃತಿ ಬಿಂಬಿಸುವ ಜಾನಪದ ಕಲೆ ಬೆಳೆಯಲಿ

ತುಮಕೂರು:


ಜನಪರ ಉತ್ಸವ ಉದ್ಘಾಟಿಸಿ ಡಾ.ಲಕ್ಷ್ಮಣದಾಸ್ ಅಭಿಮತ

ನಮ್ಮ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಜಾನಪದ ಕಲೆಗಳು ಮುಂದಿನ ತಲೆಮಾರಿಗೂ ಉಳಿದು ಬೆಳೆಯುವಂತಾಗಬೇಕು ಎಂದು ಹಿರಿಯ ಕಲಾವಿದ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಡಾ.ಲಕ್ಷ್ಮಣದಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ನಗರದ ಕನ್ನಡ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಜನಪರ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈಗಿನ ಕಲಾವಿದರು ಜಾನಪದ ಕಲೆಯನ್ನು ಉಳಿಸುವಂತಹ ಮಹತ್ಕಾರ್ಯ ಮಾಡಬೇಕು. ಕಲೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು. ಈ ಜನಪರ ಉತ್ಸವ ಜನಪ್ರಿಯ ಉತ್ಸವವಾಗಬೇಕು ಎಂದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಶ್ರೀನಿವಾಸ್ ಸ್ವಾಗತಕೋರಿ, ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಕಲಾವಿದರನ್ನು ಪ್ರೋತ್ಸಾಹಿಸಿ ಅವರಲ್ಲಿನ ಕಲಾಪ್ರತಿಭೆಯನ್ನು ಪರಿಚಯಿಸಲು ಸರ್ಕಾರ ಪ್ರತಿ ವರ್ಷ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ. ಕಲಾವಿದರು ಇಂತಹ ಕಾರ್ಯಕ್ರಮಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಮಲ್ಲಿಕಾರ್ಜುನಕೆಂಕೆರೆ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಸದಾಶಿವಯ್ಯ, ನಿವೃತ್ತ ಪ್ರಾಚಾರ್ಯ ಜಿ.ಹೆಚ್.ಮಹದೇವಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮೇಲ್ವಿಚಾರಕ ಸುರೇಶ್‍ಕುಮಾರ್ ಮತ್ತಿತರರು ಭಾಗವಹಿಸಿದ್ದರು. ನಂತರ ವಿವಿಧ ಕಲಾವಿದರು ಕಲಾ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ರಂಜಿಸಿದರು.

ಯಾವುದೇ ಕಷ್ಟಗಳನ್ನು ಎದುರಿಸಿ ಕಲಾವಿದರು ತಮ್ಮ ಕಲಾ ಸೇವೆ ಮುಂದುವರೆಸಬೇಕು. ನೋವಿನಲ್ಲೂ ನಗು ಕಾಣುವ ಶಕ್ತಿ ಕಲಾವಿದರಿಗೆ ಇದೆ. ಜಾನಪದ ಕಲೆಗಳು ನಮ್ಮ ಸಂಸ್ಕøತಿಯ ಹಿರಿಮೆ. ಅವುಗಳನ್ನು ಉಳಿಸಿ ಮುಂದುವರೆಸುತ್ತಿರುವ ಕಲಾವಿದರ ಕಾರ್ಯ ಶ್ಲಾಘನೀಯ. ಇಂದಿನ ಮಕ್ಕಳು ಇಂತಹ ಕಲಾಪ್ರಕಾರಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಕಲೆಯನ್ನು ಉಳಿಸಲು ಪೋಷಕರು ಪ್ರೋತ್ಸಾಹ ನೀಡಬೇಕು.
ಡಾ.ಲಕ್ಷ್ಮಣದಾಸ್,ಹಿರಿಯ ಕಲಾವಿದರು

ಕಲೆ ಹಳ್ಳಿಗಳಲ್ಲಿ ಉಳಿದಿದೆ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ, ಕಲಾ ಪ್ರತಿಭೆ ಹೊರಹೊಮ್ಮಲು ಇಂತಹ ವೇದಿಕೆಗಳು ಕಲಾವಿದರಿಗೆ ಅನುಕೂಲವಾಗಿವೆ. ಇದನ್ನು ಬಳಸಿಕೊಂಡು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತಮ್ಮ ಪ್ರತಿಭೆ ಬೆಳಗಿಸಬೇಕು. ಹಳ್ಳಿಗಳಲ್ಲಿ ಜಾನಪದ ಕಲೆ ಉಳಿದಿದೆ. ವಂಶಪಾರಂಪರ್ಯವಾಗಿ, ಊರಿಂದಊರಿಗೆ ಹರಡಿ ಈ ಕಲೆಗಳು ಉಳಿದು ಬಂದಿವೆ. ಇದು ಮುಂದಿನ ಪೀಳಿಗೆಗೂ ಮುಂದುವರೆಸಲು ಕಲಾವಿದರು ಕಾಳಜಿವಹಿಸಬೇಕು ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap