ಕುಣಿಗಲ್:
ನಾನು ಇರುವವರೆಗೂ ಯಾವುದೇ ಬದಲಾವಣೆ ಇಲ್ಲ. ಶಾಸಕ ರಂಗನಾಥ್ ನೇತೃಥ್ವದಲ್ಲಿ ಪಕ್ಷ ಸಂಘಟನೆ ಮಾಡಲಾಗುತ್ತಿದ್ದು ಮುಂದಿನ 2023ರ ಚುನಾವಣೆಯಲ್ಲಿ ಅವರೇ ಅಭ್ಯರ್ಥಿ ಅನುಮಾನ ಬೇಡ.
ಯಾರೋ ಟಿಕೇಟ್ ಕೊಡುವುದಾಗಿ ಹೇಳಿದ್ದರೆ ಅವರ ಹತ್ತಿರವೇ ಪಡೆಯಲಿ ಸದಾ ಸಂಘಟನೆ ಮಾಡುವರಿಗೆ ಮಾತ್ರ ಕಾಂಗ್ರೆಸ್ ಪಕ್ಷ ಗುರ್ತಿಸುತ್ತದೆ ಎಂದು ಪರೋಕ್ಷವಾಗಿ ಎಸ್.ಪಿ. ಎಂ.ಗೆ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಟಾಂಗ್ ನೀಡಿದರು.
ಅವರು ಶನಿವಾರ ತಾಲ್ಲೂಕಿನ ಎಡೆಯೂರಿನಲ್ಲಿ ಕಾಂಗ್ರಸ್ ಪಕ್ಷ ಏರ್ಪಡಿಸಿದ್ದ ವಿಧಾನಪರಿಷತ್ ಚುನಾವಣೆಯ ಪ್ರಚಾರದ ವೇಳೆ ತಿಪಟೂರು ಮಾಜಿ ಶಾಸಕ ಷಡಾಕ್ಷರಿ ಮಾತನಾಡಿ ಯಾಕೋ ಕುಣಿಗಲ್ ಮತ್ತು ನನ್ನ ಕ್ಷೇತ್ರದ ಮೇಲೂ ಬಾರಿ ಜನಕ್ಕೆ ಕಣ್ಣಿದೆ ಖಾಲಿ ಇಲ್ಲದಿದ್ದರೂ ಬೇಕು ಎನ್ನುತ್ತಿದ್ದಾರೆ ಎಂದು ವ್ಯಂಗ್ಯ ವಾಡಿದ ಬೆನ್ನಲ್ಲೇ ಡಿ.ಕೆ.ಸುರೇಶ್ ಭಾಷಣ ಮಾಡುತ್ತ ಇದೇ ವಿಷಯವನ್ನು ಮುಂದುವರೆಸಿ ಯಾರೋ ಕರ್ಕೊಂಡು ಬಂದು ಹೋದ ಮಾತ್ರಕ್ಕೇ ಏನೋ ಸಾಧನೆ ಮಾಡಿದೆ ಎನ್ನುವುದು ಸುಳ್ಳು ಸ್ವಾರ್ಥಕ್ಕಾಗಿ ಮಾಡದೇ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯ ಬೇಕು, ಇಲ್ಲಿ ಕೆಲವರು ಪಕ್ಷದಲ್ಲಿ ಗೊಂದಲ ಮೂಡಿಸುತ್ತಿದ್ದಾರೆ , ನನಗೆ ಎಲ್ಲರ ಮೇಲೂ ಗೌರವ ಇದೆ.
ಆದ್ರೆ ಪಕ್ಷದಲ್ಲಿ ಗೊಂದಲ ಸೃಷ್ಠಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ. ಕಾಂಗ್ರೆಸ್ ಪಕ್ಷವನ್ನು ಕುಣಿಗಲ್ ನಲ್ಲಿ ಕಟ್ಟುವ ಕೆಲಸ ಶಾಸಕರಾದ ರಂಗನಾಥ್ ನೇತೃತ್ವದಲ್ಲಿ ಮಾಡಲಾಗುತ್ತಿದ್ದು, ಮುಂದಿನ 2023ಕ್ಕೂ ನಡೆಯುವ ಚುನಾವಣೆ ಅವರೇ ಇಲ್ಲಿ ಅಭ್ಯರ್ಥಿಯಾಗಲಿದ್ದು ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ಖಂಡಿತವಾಗಿ ಕಾಂಗ್ರೆಸ್ ಸರ್ಕಾರ ಬಂದೇ ಬರುತ್ತದೆ ಯಾರೂ ಕೂಡ ಅದನ್ನು ಅಂಡರ್ ಅಸ್ಟಮೇಟ್ ಮಾಡಬೇಡಿ ಎಂದು ಕಾರವಾಗಿ ನುಡಿದರು.
ವಲಸೆ ಬರುವವರ ಸಂಖ್ಯೆ ಹೆಚ್ಚಿದೆ :
ಈಗಾಗಲೇ ವಲಸೆ ಬರುವವರ ಪೈಕಿ ಜೆಡಿಎಸ್ ನಿಂದ ಜಿ.ಟಿ.ದೇವೇಗೌಡರು, ಸಿದ್ದರಾಮಯ್ಯನವರ ವಿರೋಧಿಯಾಗಿ ಗೆದ್ದವರೇ ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ದಾರೆ , ಮಾಲೂರೂ ಶ್ರೀನಿವಾಸ್ , ಮನೋಹರ್, ಗುಬ್ಬಿ ಶ್ರೀನಿವಾಸ್, ಬೆಮೆಲ್ ಕಾಂತರಾಜ್ ಸೇರಿದ್ದು , ಉತ್ತರ ಕರ್ನಾಟಕದ ಬಿಜೆಪಿ ಪಕ್ಷದ ನಾಯಕರು, ಶಾಸಕರುಗಳು ಕಾಂಗ್ರಸ್ ಪಕ್ಷ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ, ಈಗಿರುವವಾಗ ಪಕ್ಷದಲ್ಲಿ ಗೊಂದಲ ಮೂಡಿಸುವುದು ಸರಿಯಲ್ಲ ಯಾರೋ ಟಿಕೇಟ್ ಕೊಡುತ್ತೇವೆ ಎಂದಿದ್ದರೆ ಅವರ ಹತ್ತಿರವೇ ಟಿಕೇಟ್ ಪಡೆಯಲಿ ಆದ್ರೆ ಕಾಂಗ್ರೆಸ್ ಪಕ್ಷ ನಿತ್ಯ ಸಂಘಟನೆ ಮಾಡುವರಿಗೆ ಮಾತ್ರ ಗುರುತಿಸುತ್ತದೆ ಎಂದು ಒಂದು ಎಚ್ಚರಿಕೆ ನೀಡಿದರು.
ಕಾಂಗ್ರಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ : ಹೇಮಾವತಿ ಲಿಂಕ್ ಕೆನಾಲ್ ಜಾರಿಗೆ ತಂದು ಇವರು ಮಾಡದೇ ಇದ್ದರೆ ಮೇಕೇ ದಾಟು ಯೋಜನೆ ಕೈಗೆತ್ತಿ ಕೊಳ್ಳಲಾಗುತ್ತದೆ ಎಂದ ಅವರು,
ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಲೆ ಎದ್ದಿದ್ದು ಇದೀಗ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಜನರು ಬಿಜೆಪಿಯ ಬದಲಾವಣೆಯನ್ನು ಬಯಸಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳದೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಖಾಸಗೀಕರಣದ ಹೆಸರಿನಲ್ಲಿ ದೇಶವನ್ನು ಮಾರಲು ಹೊರಟಿದ್ದಾರೆ ಎಂದು ಟೀಕಿಸಿದರು.
ಉದ್ಯೋಗ ಖಾತ್ರಿ ಯೋಜನೆ ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದೆ ಅಲ್ಲದೆ ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಮನಕ್ಕೆ ತರುವುದು ಜನವರಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಪಾದಯಾತ್ರೆ ಕೈಗೊಳ್ಳಲಾಗುವುದು ತಾಲೂಕಿನ ಹೇಮಾವತಿ ಲಿಂಕ್ ಕೆನಾಲ್ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ತರುವುದು ಸಹ ಸಿದ್ಧ ಎಂದು ತಿಳಿಸಿದರು.
ಹಿಡಿದು ಸಮಾರಂಭದಲ್ಲಿ ಕೇಂದ್ರ ಮಾಜಿ ಸಚಿವಕೆ .ಹೆಚ್. ಮುನಿಯಪ್ಪ .ಮಾಜಿ ಮಂತ್ರಿ ಟಿ.ಬಿ.ಜಯಚಂದ್ರ .ಮಾಜಿ ಶಾಸಕ ಷಡಕ್ಷರಿ. ಶಾಸಕ ಡಾ.ಎಚ್. ಡಿ. ರಂಗನಾಥ್ ಮಾತನಾಡಿ ಒಗ್ಗಟ್ಟಿನಿಂದ ಇದ್ದು ಎಲ್ಲರೂ ರಾಜೇಂದ್ರ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ. ಉಪಾಧ್ಯಕ್ಷ ಹನುಮಂತಪ್ಪ.
ಕೆಂಪೀರೇಗೌಡ , ನಂಜೇಗೌಡ .ಬ್ಲಾಕ್ ಅಧ್ಯಕ್ಷ ರಂಗಣ್ಣ ಗೌಡ. ವೆಂಕಟರಾಮು. ಪುರಸಭಾ ಅಧ್ಯಕ್ಷ ನಾಗೇಂದ್ರ, ಉಪಾಧ್ಯಕ್ಷೆ ಮಂಜುಳರಂಗಪ್ಪ, ಸದಸ್ಯ ರಂಗಸ್ವಾಮಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ