ಅಂಬೇಡ್ಕರ್ ರಚಿಸಿದ ಸಂವಿಧಾನ ಜಗತ್ತಿಗೇ ಮಾದರಿ

ಪಾವಗಡ:


ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ಹಿನ್ನೆಲೆಯಲ್ಲಿ ತಾ.ಆಡಳಿತ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಇಲಾಖೆಗಳ ವತಿಯಿಂದ ಪಟ್ಟಣದ ಟೋಲ್‍ಗೇಟ್ ಬಳಿಯ ಅಂಬೇಡ್ಕರ್ ವಿಗ್ರಹಕ್ಕೆ ಮಾಲಾರ್ಪಣೆ ಮಾಡಲಾಯಿತು.

ಅಂಬೇಡ್ಕರ್ ವಿಗ್ರಹಕ್ಕೆ ಮಾಲಾರ್ಪಣೆ ಮಾಡಿದ ತಹಸೀಲ್ದಾರ್ ಕೆ.ಆರ್.ನಾಗರಾಜು ಮಾತನಾಡಿ, ಮಹಾನ್ ಚೇತನ ಇಂದು ಕಣ್ಮರೆಯಾದ ದಿನವಾಗಿದ್ದು, ಅವರು ನಮ್ಮಿಂದ ದೂರವಾದರೂ ಪ್ರತಿ ಕ್ಷಣವೂ ಅವರನ್ನು ನೆನೆಯುವಂತಹ ಸಂವಿಧಾನವನ್ನು ರಾಷ್ಟ್ರಕ್ಕೆ ನೀಡಿದ್ದಾರೆ. ಅಂಬೇಡ್ಕರ್ ಭಾರತಕ್ಕೆ ನೀಡಿರುವ ಸಂವಿಧಾನವನ್ನು ಇಂದು ಇಡೀ ಜಗತ್ತೆ ಗೌರವಿಸಿ ಅದನ್ನು ಪಾಲಿಸುವಂತಹ ಶಕ್ತಿ ಅಂಬೇಡ್ಕರ್ ನಮ್ಮ ಸಂವಿಧಾನಕ್ಕೆ ನೀಡಿದ್ದಾರೆಂದರು.

ಸಮಾಜ ಸೇವಕ ನಾಗೇಂದ್ರ ಕುಮಾರ್ ಮಾತನಾಡಿ, ಅಂಬೇಡ್ಕರ್ ಡಿ. 6 ರಂದು ನಮ್ಮಿಂದ ದೂರವಾದರೂ, ಪ್ರತಿ ಸಂದರ್ಭದಲ್ಲೂ ಅವರದ್ದೆ ನೆನಪು ಉಳಿಯುವಂತಾಗಿ, ಸರ್ವ ಸಮುದಾಯಗಳಿಗೂ ಸಂವಿಧಾನದಲ್ಲಿ ಮೀಸಲಾತಿ, ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲವೂ ಸಂವಿಧಾನದಿಂದಲೆ ಪಡೆಯುವಂತಹ ಶಕ್ತಿ ನಮ್ಮ ದೇಶದ ಜನತೆಗೆ ಅಂಬೇಡ್ಕರ್ ನೀಡಿದ್ದಾರೆಂದರು.

ಈ ಸಂದರ್ಭದಲ್ಲಿ ತಾಪಂ ಎಡಿ ರಂಗನಾಥ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಮೂರ್ತಿ, ತೋಟಗಾರಿಕೆಯ ಶಂಕರ್ ಮೂರ್ತಿ, ಪಶು ವೈದ್ಯಕೀಯ ಇಲಾಖೆಯ ಸಿದ್ದಗಂಗಯ್ಯ, ಸಮಾಜ ಕಲ್ಯಾಣ ಇಲಾಖೆಯ ಶಿವಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಿದ್ದರಾಜು, ಮುಖಂಡರಾದ ಮಂಜುನಾಥ್, ಕೃಷ್ಣಮೂರ್ತಿ ಉಪಸ್ಥಿತರಿದ್ದರು.

 

Recent Articles

spot_img

Related Stories

Share via
Copy link