ಶಿರಾ ನಗರಸಭಾ ಚುನಾವಣೆ ಸಜ್ಜು

ಶಿರಾ:

      ಅರ್ಹ ಅಭ್ಯರ್ಥಿಗಳ ಹುಡುಕಾಟದಲ್ಲಿ ರಾಜಕೀಯ ಪಕ್ಷಗಳು    

             ಯಾವುದೇ ನಗರ, ಪಟ್ಟಣದ ಸಮಗ್ರ ಅಭಿವೃದ್ಧಿಗೆ ಅಲ್ಲಿನ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳ ಅಗತ್ಯತೆ ಸಾಕಷ್ಠಿರುತ್ತದೆ ಆದರೆ ಶಿರಾ ನಗರಸಭೆಗೆ ಕಳೆದ ಮೂರು ವರ್ಷಗಳಿಂದಲೂ ಅವಧಿ ಮುಗಿದಿದ್ದರೂ ಜನಪ್ರತಿನಿಧಿಗಳಿಲ್ಲದೆ ಬಣಗುಡುತ್ತಿದ್ದ ಪರಿಣಾಮ ನಗರಸಭೆಯ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿರುವುದು ಸರಿಯಷ್ಟೆ.

ಕಳೆದ ಮೂರು ವರ್ಷದ ಹಿಂದೆಯೇ ನಗರಸಭೆಯ ಅವಧಿ ಮುಗಿದಾಗ ಚುನಾವಣಾ ಆಯೋಗ ಮೀಸಲಾತಿ ಪ್ರಕಟಿಸುತ್ತಿದ್ದಂತೆಯೇ ಪ್ರಕಟಗೊಂಡ ಮೀಸಲಾತಿಯನ್ನು ಪ್ರಶ್ನಿಸಿ ಕೆಲ ಆಕಾಂಕ್ಷಿಗಳು ನ್ಯಾಯಾಲಯದ ಮೊರೆ ಹೋದ ನಂತರ ಪದೇ ಪದೇ ಮೀಸಲಾತಿಯನ್ನು ಪ್ರಶ್ನಿಸಿ ಹೋದ ಪ್ರಕರಣಗಳು ನೆನೆಗುದಿಗೆ ಬಿದ್ದ ಪರಿಣಾಮ ನಗರಸಭಾ ಚುನಾವಣೆಯು ಪದೇ ಪದೇ ನೆನೆಗುದಿಗೆ ಬೀಳಲು ಕಾರಣವಾಯಿತು.

ಮೀಸಲಾತಿ ಪ್ರಶ್ನಿಸಿ ಹೋಗಿದ್ದ ಪ್ರಕರಣಗಳು ಇತ್ಯರ್ಥಗೊಂಡ ನಂತರ ನ:29 ರಂದು ಇಲ್ಲಿನ ನಗರಸಭೆಯ ಚುನಾವಣೆಗೆ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿತು. ವೇಳಾಪಟ್ಟಿ ಪ್ರಕಟಗೊಂಡ ನಂತರವೂ ಮೀಸಲಾತಿ ಪ್ರಶ್ನಿಸಿ ಹೋಗಿದ್ದ ಪ್ರಕರಣಗಳನ್ನು ನ್ಯಾಯಾಲಯವು ವಜಾ ಮಾಡಿದ ಪರಿಣಾಮ ಚುನಾವಣೆಗೆ ಹಸಿರು ನಿಶಾನೆ ಲಭ್ಯವಾಗಲು ಕಾರಣವಾಯಿತು.
ಡಿ:8 ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಿರುವ ಆಯೋಗವು 8ರಿಂದಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಗೆ ದಿನಾಂಕ ಗೊತ್ತುಪಡಿಸಿ ಡಿ:15 ನಾಮಪತ್ರ ಸಲ್ಲಿಕೆಯ ಅಂತಿಮ ದಿನಾಂಕ ನಿಗಧಿ ಮಾಡಿತು. ಡಿ:16 ರಂದು ನಾಮಪತ್ರ ಪರಿಶೀಲನೆಯಾಗಿದ್ದು ಡಿ:18 ನಾಮಪತ್ರ ವಾಪಸ್ ಪಡೆಯುವ ಅಂತಿಮ ದಿನವಾಗಿದೆ. ಡಿ:27 ರಂದು ಚುನಾವಣೆ ನಡೆಯಲಿದ್ದು ಡಿ:30 ರಂದು ಮತ ಎಣಿಕೆ ನಡೆಯಲಿದೆ.

ಚುನಾವಣಾ ದಿನಾಂಕ ಪ್ರಕಟಗೊಂಡು ಹಲವು ದಿನಗಳೇ ಕಳೆದರೂ ಇನ್ನೂ ಗರಿಗೆದರಿಕೊಳ್ಳದಿದ್ದ ಚುನಾವಣೆ ಕಳೆದ ಎರಡು ದಿನಗಳಿಂದ ಗರಿಗೆದರಿಕೊಳ್ಳತೊಡಗಿದೆ. ಕಾಂಗ್ರೆಸ್, ಬಿ.ಜೆ.ಪಿ, ಜೆ.ಡಿ.ಎಸ್. ಸೇರಿದಂತೆ ವಿವಿಧ ಪಕ್ಷಗಳ ರಾಜಕೀಯ ದುರೀಣರು ಪಕ್ಷದಿಂದ ಕಣಕ್ಕೆ ಇಳಿಸಲು ಅರ್ಹ ಅಭ್ಯರ್ಥಿಯ ಹುಡುಕಾಟದಲ್ಲಿದ್ದಾರೆ.

ಪಕ್ಷದ ಕಛೇರಿಗಳಲ್ಲಿ ಪಕ್ಷದ ಕಾರ್ಯಕರ್ತ-ಮುಖಂಡರ ಸಭೆಗಳನ್ನು ಕರೆಯವುದೂ ಸೇರಿದಂತೆ ಪಕ್ಷದಿಂದ ಟಿಕೇಟ್ ಬಯಸುವವರಿಂದ ಅರ್ಜಿಗಳನ್ನು ಆಹ್ವಾನಿಸುವ ಪ್ರಕ್ರಿಯೆಗಳು ನಡೆಯುತ್ತಿವೆ. ಹೇಗಾದರೂ ಸರಿ ಪಕ್ಷದಿಂದಲೇ ಟಿಕೇಟ್ ಪಡೆಯುವ ಹಂಬಲ ಹಲವರದ್ದಾಗಿದ್ದು ಟಿಕೇಟ್ ನೀಡದಿದ್ದರೆ ಪಕ್ಷೇತರವಾಗಿಯಾದರೂ ಕಣಕ್ಕಿಳಿಯುವ ತಂತ್ರವನ್ನು ಕೆಲ ಅಭ್ಯರ್ಥಿಗಳು ಹೆಣೆಯುತ್ತಿದ್ದಾರೆ.

ಡಿ:10 ರಂದು ವಿಧಾನ ಪರಿಷತ್ ಚುನಾವಣೆ ನಡೆಯುತ್ತಿರುವುದರಿಂದ ನಗರಸಭೆಯ ಚುನಾವಣೆಯತ್ತ ಹೆಚ್ಚು ಗಮನಹರಿಸಲು ಸಾದ್ಯವಾಗದ ಪಕ್ಷಗಳ ದುರೀಣರು ವಿಧಾನಪರಿಷತ್ ಚುನಾವಣೆಯ ಜೊತೆ ಜೊತೆಯಲ್ಲಿಯೇ ನಗರಸಭೆಯ ಚುನಾವಣೆಯ ಬಗ್ಗೆಯೂ ಕಾರ್ಯ ತಂತ್ರ ಹೆಣೆಯುತ್ತಿದ್ದಾರೆ.

ನಗರಸಭೆಯ ವ್ಯಾಪ್ತಿಯಲ್ಲಿ 31 ವಾರ್ಡುಗಳಿದ್ದು ಎಲ್ಲಾ ವಾರ್ಡುಗಳಲ್ಲೂ ವಿವಿಧ ಪಕ್ಷಗಳಿಂದ ಟಿಕೇಟ್ ಪಡೆಯಲು ಅಭ್ಯರ್ಥಿಗಳು ತುದಿಗಾಲಲ್ಲಿದ್ದು ಟಿಕೇಟ್ ಬಯಸುವವರ ಕಾಲೆಳುಯುವ ರಣತಂತ್ರವೂ ಇದೀಗ ಆರಂಭಗೊಂಡಿದೆ. ಈ ಎಲ್ಲಾ ಪ್ರಕ್ರಿಯೆಗಳ ನಡುವೆ ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಲು ಅಗತ್ಯವಾದ ಸದಸ್ಯರ ಆಯ್ಕೆಗೂ ಪ್ರತಿತಂತ್ರವನ್ನು ಪಕ್ಷದ ದುರೀಣರು ಮಾಡುತ್ತಿದ್ದಾರೆ.

  (ಬರಗೂರು ವಿರೂಪಾಕ್ಷ)

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link