ಬೆಳೆ ವಿಮಾ ಪರಿಹಾರ ರೈತರಿಗೆ ವಂಚನೆ

ಕೊರಟಗೆರೆ:

ಬರಗಾಲದ ಬವಣೆಯಿಂದ ನಲುಗಿರುವ ರೈತರಿಗೆ ಬೆಳೆನಷ್ಟದ ವಿಮೆ ಹಣವನ್ನು ರೈತರಿಗೆ ನೀಡದೆ ಇರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.

ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರ ಸೇವಾ ಕೇಂದ್ರದಲ್ಲಿ ಈ ಭಾಗದ ರೈತರು 2015 ರಿಂದ 2021 ರ ವರೆಗೆ ಪ್ರತಿ ವರ್ಷವು ಬೆಳೆ ವಿಮಾ ಪ್ರೀಮಿಯಂ ಹಣ ಕಟ್ಟಿರುತ್ತಾರೆ. ಈ ವರ್ಷವು ಕೂಡ ರೈತರು ಬೆಳೆ ವಿಮಾ ಪ್ರೀಮಿಯಂ ಹಣವನ್ನು ದಾಖಲೆಗಳ ಸಮೇತ ಗ್ರಾಹಕ ಸೇವಾ ಸಿಬ್ಬಂದಿಗೆ ಪಾವತಿಸಿರುತ್ತಾರೆ. ಆದರೆ ರೈತರಿಂದ ಪಡೆದ ಹಣವನ್ನು ವಿಮಾ ಕಂಪನಿಗೆ ಕಟ್ಟದೆ, ಈಗ ರೈತರಿಗೆ ವಿಮಾ ಪರಿಹಾರದ ಹಣ ಬರುವ ಸಂದರ್ಭದಲ್ಲಿ ಹಣ ಕಟ್ಟದಿರುವುದು ಬೆಳಕಿಗೆ ಬಂದಿದೆ. ಇದರಿಂದ ರೈತರಿಗೆ ತುಂಬಾ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರ ಸೇವಾ ಕೇಂದ್ರದ ಮಾಲೀಕ ಶ್ರೀನಿವಾಸ್ ಮತ್ತು ವಿಜಯ್ ಕುಮಾರ್ ಎನ್ನುವರು ಹೊಳವನಹಳ್ಳಿ ಹೋಬಳಿಯ 1200 ರೈತರುಗಳಿಂದ ಒಟ್ಟು 10 ರಿಂದ 15 ಲಕ್ಷ ರೂ.ಗಳನ್ನು ವಸೂಲಿ ಮಾಡಿಕೊಂಡು ವಿಮಾ ಕಂಪನಿಗೆ ಜಮೆ ಮಾಡದೆ ಈ ಭಾಗದ ರೈತರುಗಳಿಗೆ ವಂಚನೆ ಮಾಡಿದೆ ಎನ್ನುತ್ತಾರೆ ಚಂದ್ರಶೇಖರ್.

ಸರ್ಕಾರವು ರೈತರಿಗೋಸ್ಕರ ನೂರಾರು ಯೋಜನೆಗಳನ್ನು ಅನುಷ್ಠಾನ ಮಾಡುತ್ತದೆ. ಆದರೆ ಸ್ಥಳೀಯ ಡಿಟಿಪಿ ಹಾಗೂ ಗ್ರಾಹಕರ ಸೇವಾ ಕೇಂದ್ರಗಳು ಏನೂ ತಿಳಿಯದ ರೈತರ ಜೊತೆ ಆಟವಾಡುತ್ತಾರೆ. ಕಳೆದ ಎರಡು ಮೂರು ವರ್ಷಗಳಿಂದ ವಿಮಾ ಪ್ರೀಮಿಯಂ ಹಣವನ್ನು ರೈತರಿಂದ ಕಟ್ಟಿಸಿಕೊಂಡರೂ ಸಹ, ವಿಮಾ ಕಂಪನಿಗೆ ಜಮೆ ಮಾಡಿರುವುದಿಲ್ಲ. ಕೃಷಿ ಇಲಾಖೆಗೂ ವಿಮಾ ಕಂಪನಿಗೂ ಸಂಬಂಧವಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಈ ಸಂದರ್ಭದಲ್ಲಿ ಚಂದ್ರಶೇಖರ, ನಾಗಭೂಷಣ, ರಾಮಕೃಷ್ಣ, ನಾಗರಾಜು, ಗೋವಿಂದಪ್ಪ ಕೃಷ್ಣಮೂರ್ತಿ ಇನ್ನು ಹಲವಾರು ರೈತರು ಪಾಳ್ಗೊಂಡಿದ್ದರು.

ಹೊಳವನಹಳ್ಳಿ ಗ್ರಾಹಕರ ಸೇವಾ ಕೇಂದ್ರದವರು ರೈತರಿಂದ ಇಂತಹ ಲಕ್ಷಾಂತರ ರೂ. ವಿಮೆ ಹಣವನ್ನು ಕಟ್ಟಿಸಿಕೊಂಡು ವಂಚಿಸಿ ಮೋಸ ಮಾಡಿರುತ್ತಾರೆ. ಹೊಳವನಹಳ್ಳಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ರೈತರು ತಮ್ಮ ಸಮಸ್ಯೆ ಹೇಳಲು ಹೋದರೆ ಏಕವಚನದಲ್ಲಿ ಮನಬಂದಂತೆ ಕೂಗಾಡುತ್ತಾರೆ. ದಯವಿಟ್ಟು ಸಂಬಂಧಿಸಿದ ಮೇಲಧಿಕಾರಿಗಳು ಇತ್ತ ಗಮನ ಹರಿಸಬೇಕೆಂದು ಕೋರುತ್ತೇನೆ.
-ರುದ್ರೇಶ್ ಗೌಡ, ಜಿಲ್ಲಾ ಕಾರ್ಯದರ್ಶಿ, ರೈತ ಸಂಘ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link