ತುಮಕೂರು:

ಮತದಾರರ ವಿಶ್ವಾಸ ಕಾಂಗ್ರೆಸ್ ಪರ ಇದೆ: ಕೆ.ಎನ್.ರಾಜಣ್ಣ
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್.ರಾಜೇಂದ್ರ ಅವರ ಗೆಲುವಿಗೆ ಜಿಲ್ಲೆಯ ಕೈ ನಾಯಕರ ಒಗ್ಗಟ್ಟು ಪೂರಕವಾಗಿದ್ದು, ಸ್ಥಳೀಯ ಅಭ್ಯರ್ಥಿಯಾಗಿರುವ ಕಾರಣದಿಂದ ಪಕ್ಷಾತೀತವಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲವ್ಯಕ್ತವಾಗುತ್ತಿದೆ. ನಮ್ಮ ಅಭ್ಯರ್ಥಿ ಗೆಲ್ಲುವುದು ನಿಶ್ಚಿತವಾಗಿದೆ ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯೊಂದಿಗೆ ಮಾತನಾಡಿದ ಅವರು ಜಿಲ್ಲೆಯ ಎಲ್ಲಾ ಕಾಂಗ್ರೆಸ್ ನಾಯಕರು, ಕೆಪಿಸಿಸಿ ಅಧ್ಯಕ್ಷರು, ವಿಪಕ್ಷನಾಯಕರು ಎಲ್ಲರೂ ಕಾಂಗ್ರೆಸ್ ಅಭ್ಯರ್ಥಿ ಪರ ಸಂಘಟಿತರಾಗಿ ಮತಯಾಚಿಸಿದ್ದು, ರಾಜೇಂದ್ರ ಕಳೆದ ಬಾರಿ ಸೋತರೂ ಜಿಲ್ಲೆಯ ಜನರೊಂದಿಗೆ ನಿರಂತರ ಒಡನಾಟ, ಕೋವಿಡ್ ಸಂದರ್ಭದಲ್ಲಿ ನಿಸ್ಪøಹವಾಗಿ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದು ಮತದಾರರಲ್ಲಿ ಒಳ್ಳೆಯ ಅಭ್ಯರ್ಥಿ ಎಂಬ ಭಾವನೆ ಮೂಡಿದೆ. ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳು ಚುನಾವಣೆ ಸಮಯಕ್ಕೆ ಜಿಲ್ಲೆಗೆ ಎಂಟ್ರಿ ಕೊಟ್ಟವರಾಗಿದ್ದು, ಪ್ರಜ್ಞಾವಂತರಾಗಿರುವ ಸ್ಥಳೀಯ ಸಂಸ್ಥೆ ಮತದಾರರು ಇವನ್ನೆಲ್ಲ ಗಮನಿಸಿ ಸ್ಥಳೀಯ ಅಭ್ಯರ್ಥಿಯಾಗಿರುವವರನ್ನೇ ಗೆಲ್ಲಿಸುತ್ತಾರೆಂಬ ವಿಶ್ವಾಸವಿದೆ ಎಂದರು.
ಮೇಲ್ಮನೆ ಚುನಾವಣೆ,ಮನಿ ಚುನಾವಣೆಯಾಗುತ್ತಿದೆ:ನಾನು ಸಹ ಮೇಲ್ಮನೆ ಸದಸ್ಯನಾಗಿ ಆಯ್ಕೆಯಾಗಿದ್ದೆ ಆದರೆ ಅಂದಿಗೂ ಇಂದಿಗೂ ಅಜಗಜಾಂತರ ವ್ಯತ್ಯಾಸವಿದ್ದು, ಮೇಲ್ಮನೆ ಚುನಾವಣೆ ಮನಿ ಮನೆ ಚುನಾವಣೆಯಾಗಿ ಬದಲಾಗುತ್ತಿರುವ ಬಗ್ಗೆ ಮತದಾರರು, ಪ್ರಜ್ಞಾವಂತ ವಲಯದಲ್ಲಿ ಅಸಮಾಧಾನವಿದೆ. ಹಣವೇ ಪ್ರಾಮುಖ್ಯವಾದರೆ ಗ್ರಾಮಗಳ ಅಭಿವೃದ್ಧಿಯನ್ನು ಮರೆಯಬೇಕಾಗುತ್ತದೆ ಎಂದರು.
ಜೆಡಿಎಸ್ ಅಭ್ಯರ್ಥಿ ಕಣದಲ್ಲಿದ್ದಾರೆ:
ಜೆಡಿಎಸ್ ಅಭ್ಯರ್ಥಿ ಕಣದಲ್ಲಿಲ್ಲ ಕಾಣಿಸುತ್ತಿಲ್ಲ ಎಂಬ ವದಂತಿ ನಮಗೂ ಬಂತೂ. ಆದರೆ ಅವರು ಕ್ಷೇತ್ರದಲ್ಲಿ ಮತದಾರರ ಸಂಪರ್ಕದಲ್ಲಿರುವ ಬಗ್ಗೆ ತಿಳಿಯಿತು ಎಂದ ರಾಜಣ್ಣ ಅವರು ಎದುರಾಳಿ ಅಭ್ಯರ್ಥಿಗಳು ಅವರವರ ಪರ ಕೆಲಸಮಾಡುತ್ತಿದ್ದಾರೆ. ಯಾರು ಎಷ್ಟೇ ಹಣ ಆಮಿಷ ಒಡ್ಡಲಿ. ಪ್ರಜಾಪ್ರಭುತ್ವದ ಉಳಿವಿಗೆ ಯೋಗ್ಯ ಅಭ್ಯರ್ಥಿಯನ್ನೇ ಮತದಾರರು ಆಯ್ಕೆ ಮಾಡುತ್ತಾರೆಂದರು.
ಅನೈತಿಕ ಒಪ್ಪಂದಗಳಿಗೆ ಮಾನ್ಯತೆ ಇಲ್ಲ
ಬಿಜೆಪಿ -ಜೆಡಿಎಸ್‍ನವರು ಒಳ ಒಪ್ಪಂದವಾದರೂ ಮಾಡಿಕೊಳ್ಳಲಿ. ಹೊರ ಒಪ್ಪಂದವಾದರೂ ಮಾಡಿಕೊಳ್ಳಲಿ ಮತದಾರರು ರಾಜೇಂದ್ರ ರಾಜಣ್ಣ ಪರವಾಗಿದ್ದಾರೆ. ಅವರಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಾರೆ. ಅನೈತಿಕ ಒಪ್ಪಂದಗಳಿಗೆ ಯಾವುದೇ ಮಾನ್ಯತೆ ಇಲ್ಲಎಂದು ಕೆ.ಎನ್.ರಾಜಣ್ಣ ನುಡಿದರು.
ರಾಜೇಂದ್ರ ನನ್ನ ಪುತ್ರನೆಂದು ಮತ ಕೇಳುತ್ತಿಲ್ಲ. ಕಳೆದ ಬಾರಿ ಸೋತರೂ ಜಿಲ್ಲೆಯ ಜನರ ಕಷ್ಟಸುಖಕ್ಕೆ ನಿರಂತರ ಸ್ಪಂದಿಸುತ್ತಾ ಬಂದಿದ್ದು, ಯಾರು ಕೆಲಸಮಾಡುತ್ತಾರೆ. ಯಾರು ನಿಮ್ಮ ಕಷ್ಟ ಸುಖದಲ್ಲಿ ಹಿಂದಿನಿಂದ ಭಾಗಿಯಾಗುತ್ತಾ ಬಂದಿದ್ದಾರೆ. ಅಂತಹವರಿಗೆ ಈ ಬಾರಿ ಒಂದು ಅವಕಾಶ ಕಲ್ಪಿಸಿ.
-ಕೆ.ಎನ್.ರಾಜಣ್ಣ, ಮಾಜಿ ಶಾಸಕರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








