ಪಾವಗಡ:
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ 35 ಕೇಂದ್ರಗಳಲ್ಲಿ ಮತದಾನ ನಡೆದಿದ್ದು, ಶೇ. 99.83 ರಷ್ಟು ತಾಲ್ಲೂಕಿನಲ್ಲಿ ಮತದಾನವಾಗಿದೆ.
ಗಡಿನಾಡು ಪಾವಗಡ ತಾಲ್ಲೂಕಿನಲ್ಲಿ ವಿಧಾನ ಪರಿಷತ್ ಚುನಾವಣೆ ಈ ಬಾರಿ ರಂಗೇರಿತ್ತು. ಕಾಂಗ್ರೆಸ್ನ ಆರ್.ರಾಜೇಂದ್ರ, ಬಿಜೆಪಿಯ ಲೋಕೇಶ್ ಗೌಡ ಮತ್ತು ಜೆಡಿಎಸ್ನ ಅನಿಲ್ ಕುಮಾರ್ ಭವಿಷ್ಯವನ್ನು ತಾಲ್ಲೂಕಿನ 577 ಸದಸ್ಯ ಮತದಾರರು ಗೌಪ್ಯವಾಗಿ ್ಲ ಮತದಾನ ಮಾಡುವ ಮೂಲಕ ನಿರ್ಧರಿಸಿದ್ದಾರೆ. ಆರು ಹಿತವರು ನಿನಗೆ ಈ ಮೂವರೊಳಗೆ ಎಂಬಂತೆ, ಮೂವರಲ್ಲಿ ಯಾರು ಗೆಲ್ಲುತ್ತಾರೆ ಎನ್ನುವ ನಿರೀಕ್ಷೆ ಮೂರು ಪಕ್ಷಗಳ ಮುಖಂಡರಲ್ಲಿ ಶುಕ್ರವಾರ ಮಧ್ಯಾಹ್ನದಿಂದಲೇ ಸಮೀಕ್ಷೆ ಜೋರಾಗಿ ನಡೆದಿದೆ.
ಶಾಸಕ ವೆಂಕಟರವಣಪ್ಪ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಪಾವಗಡ ಪುರಸಭೆಯ ಆವರಣದಲ್ಲಿ ಏರ್ಪಡಿಸಿದ್ದ ಮತಗಟ್ಟೆಯಲ್ಲಿ ಮತದಾನ ಮಾಡಿದರೆ, ಶಾಸಕರ ಜೊತೆಯಲ್ಲಿ ಪುರಸಭೆಯ ಕಾಂಗ್ರೆಸ್ ಪಕ್ಷದ 20 ಸದಸ್ಯರು ಮತದಾನ ಮಾಡಿದ್ದು ವಿಶೇಷವಾಗಿತ್ತು.
ತಾಲ್ಲೂಕಿನಲ್ಲಿ ವಿಪ ಚುನಾವಣೆ ಹಿನ್ನೆಲೆಯಲ್ಲಿ 34 ಗ್ರಾಪಂಗಳು ಮತ್ತು ಪಾವಗಡ ಪುರಸಭೆ ಸೇರಿ 35 ಕೇಂದ್ರಗಳಲ್ಲಿ ಮತಗಟ್ಟೆಗಳನ್ನು ವ್ಯವಸ್ಥೆ ಮಾಡಲಾಗಿತ್ತು. 34 ಗ್ರಾಪಂಗಳ ಪೈಕಿ ಬಹುತೇಕ ಗ್ರಾಪಂಗಳಲ್ಲಿ 12 ಗಂಟೆ ಹೊತ್ತಿಗೆಲ್ಲ ಮತದಾನ ಮುಕ್ತಾಯವಾಗಿತ್ತು. ಉಳಿದಂತೆ ಕೆಲವೊಂದು ಗ್ರಾಪಂಗಳಲ್ಲಿ ಸ್ವಪಕ್ಷ ಬಿಟ್ಟು ಉಳಿದ ಪಕ್ಷಗಳ ಮುಖಂಡರು ಆಡಿದ ಮಾತಿನಂತೆ ನಡೆದುಕೊಳ್ಳದ ಹಿನ್ನೆಲೆಯಲ್ಲಿ ಗ್ರಾಪಂ ಸದಸ್ಯರು ಕಾದು ಕುಳಿತು, ಅವರಿಂದ ಬರಬೇಕಾದ್ದನ್ನು ಪಡೆದು, ಮಧ್ಯಾಹ್ನದ ನಂತರ ಮತದಾನ ಮಾಡಿದರು. ರೊಪ್ಪ ಗ್ರಾಪಂನಲ್ಲಿ 12 ಸದಸ್ಯರಿದ್ದು ಬೆಳಗ್ಗೆ 11 ಗಂಟೆಗೆ ಇಬ್ಬರು ಮತದಾನ ಮಾಡಿದರೆ, ಉಳಿದ 10 ಮಂದಿ ಗ್ರಾಪಂ ಸದಸ್ಯರು ಮಧ್ಯಾಹ್ನ ಮೂರು ಗಂಟೆ ನಂತರ ಮತದಾನ ಮಾಡಿದ್ದು ಸಾರ್ವಜನಿಕ ವಲಯದಲ್ಲೇ ವ್ಯಾಪಕ ಚರ್ಚೆಗೆ ಗುರಿಯಾಗಿದೆ.
ಪಾವಗಡ ಪುರಸಭೆ, ಕಾಮನದುರ್ಗ, ಬಿ.ಕೆಹಳ್ಳಿ, ಚಿಕ್ಕಹಳ್ಳಿ, ಪೋತ ಗಾನಹಳ್ಳಿ, ವೈ.ಎನ್.ಹೊಸಕೋಟೆ, ಸಿದ್ದಾಪುರ, ಮರಿದಾಸನ ಹಳ್ಳಿ, ಕನ್ನಮೇಡಿ, ರಾಜವಂತಿ, ವದನಕಲ್ಲು, ಪಳವಳ್ಳಿ, ವೆಂಕಟಾಪುರ, ಮಂಗಳವಾಡ, ರಂಗಸಮುದ್ರ, ಸಿ.ಕೆ.ಪುರ, ದೊಮ್ಮತಮರಿ ಗ್ರಾಪಂಗಳಲ್ಲಿ 12 ಗಂಟೆ ಹೊತ್ತಿಗೆ ಮತದಾನವೆ ಮುಕ್ತಾಯ ವಾಗಿರುವುದು ಈ ಬಾರಿ ವಿಪ ಚುನಾವಣೆಯ ವಿಶೇಷವಾಗಿತ್ತು.
ಮತದಾನಕ್ಕೆ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಗೈರು : ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಪಾವಗಡ ಪುರಸಭೆಯಲ್ಲಿ ಮತದಾನ ಮಾಡಬೇಕಿತ್ತು. ಸಂದಸರು ಮತದಾನ ಮಾಡಿದ್ದರೆ ಶೇ. 100 ರಷ್ಟು ್ಠ ಮತದಾನವಾಗುತ್ತಿತ್ತು. ಈಗ ಶೇ. 99.83 ರಷ್ಟು ಮತದಾನವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ