ಜ್ಞಾನ ಗಳಿಕೆ ಸಾಧಕರ ಸ್ವತ್ತು ಸೋಮಾರಿಗಳ ಸ್ವತ್ತಲ್ಲ

ತುಮಕೂರು:


ಜ್ಞಾನ ಗಳಿಕೆ ಸಾಧಕರ ಸ್ವತ್ತೇ ಹೊರತು ಸೊಮಾರಿಗಳ ಸ್ವತ್ತಲ್ಲ, ವಿದ್ಯಾರ್ಥಿನಿಯರು ವಿಜ್ಞಾನ ವಿಭಾಗದಲ್ಲಿ ಅದರಲ್ಲೂ ಗಣಿತ ಕಲಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ವೃತ್ತಿ, ಜೀವನ ಲೆಕ್ಕಾಚಾರಗಳೆರೆಡರಲ್ಲೂ ಸೈ ಎನಿಸಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸಮಿತಿ ಸದಸ್ಯ ಕ್ಯಾಲೆಂಡರ್ ಶಿವಕುಮಾರ್ ಸಲಹೆ ನೀಡಿದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಖ್ಯಾತ ಗಣಿತಜ್ಞ ರಾಮಾನುಜನ್ ಜನ್ಮದಿನಾಚರಣೆ ಪ್ರಯುಕ್ತ ನಡೆದ ರಾಷ್ಟ್ರೀಯ ಗಣಿತ ದಿನಾಚರಣೆ ಸಮಾರಂಭದಲ್ಲಿ ಕ್ಯಾಲೆಂಡರ್ ಗಣಿತ ವಿಯಷವಾಗಿ ಮಾತನಾಡಿ. ಜೀವನದಲ್ಲಿ ಲೆಕ್ಕಾಚಾರವಿಲ್ಲದಿದ್ದರೆ ಬದುಕು ಹಳಿ ತಪ್ಪುತ್ತದೆ. ಇಡುವ ಪ್ರತಿಹೆಜ್ಜೆಯು ಕರಾರುವಕ್ಕಾಗಿದ್ದರೆ ಬದುಕು ಸುಂದರವಾಗಿರುತ್ತದೆ ಎಂದರು.

ಅರ್ಥಶಾಸ್ತ್ರ ಗಣಿತಶಾಸ್ತ್ರಕ್ಕೂ ನೇರ ಸಂಬಂಧವಿದೆ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ. ಟಿ.ಆರ್ ಲೀಲಾವತಿಯವರು ಮಾತನಾಡಿ ಖ್ಯಾತ ಗಣಿತಜ್ಞ ರಾಮಾನುಜನ್ ವಿಶ್ವಕ್ಕೆ ನೀಡಿದ ಕೊಡುಗೆ ಅಗಣ್ಯವಾದದ್ದು. ಪ್ರತಿಯೊಂದು ವಿಭಾಗಕ್ಕೂ ಗಣಿತ ಮುಖ್ಯವಾದದ್ದು. ಅರ್ಥಶಾಸ್ತ್ರ ಮತ್ತು ಗಣಿತಶಾಸ್ತ್ರಕ್ಕೆ ನೇರವಾದ ಸಂಬಂಧವಿದ್ದು, ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ ತುಂಬೆನಾಡಿಗೆ ಶ್ರೇಷ್ಠರನ್ನು ನೀಡಿ ಎಂದರು.

ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಮಂಜುನಾಥ ಬಿ.ವಿ ಪ್ರಾಸ್ಥಾವಿಕ ನುಡಿಯಾಡಿದರು. ನುಸ್ರತ್ ಉಲ್ಲಾ ಶರೀಫ್ ವಂದಿಸಿದರು. ಜಯಪ್ರಕಾಶ್ ಅತಿಥಿಗಳನ್ನು ಸ್ವಾಗತಿಸಿದರು. ವಿಜ್ಞಾನ ವಿಭಾಗದ ಉಪನ್ಯಾಸಕರು ಪಾಲ್ಗೊಂಡರು. ವಿದ್ಯಾರ್ಥಿನಿ ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು.

ತುಮಕೂರಿನ ಶಂಕರಸೇವಾ ಸಮಿತಿ ಶೃಂಗೇರಿ ಶಂಕರಮಠದಲ್ಲಿ ಸಂಕಷ್ಟಹರ ಗಣಪತಿ ಪೂಜೆಯ ನಂತರ 2022 ನೇ ಸಾಲಿನ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಶಂಕರಸೇವಾ ಸಮಿತಿಯ ಪದಾಧಿಕಾರಿಗಳು ಮತ್ತು ಭಕ್ತರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link