Covid-19: ಮೂರನೇ ಅಲೆ‌ ಭಯದ ನಡುವೆ 3 ಸ್ವದೇಶಿ ಡೋಸ್​​ಗಳಿಗೆ CDSCO ಒಪ್ಪಿಗೆ

ನವದೆಹಲಿ:

     
                             ಕೊರೋನಾ ಮೂರನೇ ಅಲೆ (Corona Third Wave) ಬರಬಹುದು ಎಂಬ ದಟ್ಟ ವದಂತಿಯ ಹಿನ್ನೆಲೆಯಲ್ಲಿ ಕೋವಿಡ್ 19 ತಡೆಗೆ ಸಹಕಾರಿ ಆಗಲು ಕೇಂದ್ರ ಔಷಧ ಪ್ರಮಾಣಿತ ನಿಯಂತ್ರಣ ಸಂಸ್ಥೆಯು (Central Drugs Standard Control Organisation – CDSCO) ಕೋವೊವಾಕ್ಸ್, ಕಾರ್ಬೆವಾಕ್ಸ್, ಕೋವಿಡ್ ವಿರೋಧಿ ಮಾತ್ರೆ ಮೊಲ್ನುಪಿರಾವಿರ್ (Covid-19 vaccines Covovax, Corbevax, anti-Covid pill molnupiravir) ತುರ್ತು ಬಳಕೆಗಾಗಿ ಒಪ್ಪಿಗೆ ‌ಸೂಚಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಮುನ್ಸುಖ್ ಮಾಂಡೋವಿಯಾ (Dr. Munusuk Mandovia) ಟ್ವೀಟ್ ಮಾಡಿ ತಿಳಿಸಿದ್ದಾರೆ.

ಸದ್ಯ ಕೋವೊವಾಕ್ಸ್, ಕಾರ್ಬೆವಾಕ್ಸ್, ಕೋವಿಡ್ ವಿರೋಧಿ ಮಾತ್ರೆ ಮೊಲ್ನುಪಿರಾವಿರ್ ಲಸಿಕೆಗಳ ತುರ್ತು ಬಳಕೆಗಾಗಿ ‌ಕೇಂದ್ರ ಔಷಧ ಪ್ರಮಾಣಿತ ನಿಯಂತ್ರಣ ಸಂಸ್ಥೆಯು ಒಪ್ಪಿಗೆ ‌ಸೂಚಿಸಿದ್ದು ಭಾರತೀಯ ಔಷಧ ನಿಯಂತ್ರಕ ಜನರಲ್ (DCGI)ಯು ಅಂತಿಮವಾದ ಅನುಮೋದನೆ ನೀಡಬೇಕಾಗಿದೆ.

   ಶೀಘ್ರವೇ ಡಿಸಿಜಿಐ ವತಿಯಿಂದ ಅನುಮೋದನೆ ಸಿಗುವ ಸಾಧ್ಯತೆ ಕೂಡ‌ ಕಂಡುಬರುತ್ತಿದ್ದು ಆಗ ಭಾರತದಲ್ಲಿ ಕೋವಿಡ್-19 ವಿರುದ್ಧ ಹೋರಾಡಲು 8 ಲಸಿಕೆಗಳು ಲಭ್ಯವಾದಂತಾಗುತ್ತದೆ.

ಇಂದು ಕೇಂದ್ರ ಔಷಧ ಪ್ರಮಾಣಿತ ನಿಯಂತ್ರಣ ಸಂಸ್ಥೆಯು ಅನುಮೋದನೆ ನೀಡಿರುವ ಕೋವೊವಾಕ್ಸ್ ಲಸಿಕೆಯನ್ನು ಪುಣೆ ಮೂಲದ ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿದೆ.‌

    ಕಾರ್ಬೆವಾಕ್ಸ್ ಲಸಿಕೆಯನ್ನು ಹೈದ್ರಾಬಾದ್ ಮೂಲದ ಬಯೋಲಾಜಿಕಲ್ ಇ ಉತ್ಪಾದಿಸುತ್ತಿದೆ. ಮೊಲ್ನುಪಿರಾವಿರ್ ಎಂಬ ಆಂಟಿವೈರಲ್ ಔಷಧವನ್ನು 13 ವಿವಿಧ ಕಂಪನಿಗಳು ಉತ್ಪಾದಿಸುತ್ತಿವೆ ಎಂಬುದಾಗಿ ಕೇಂದ್ರ ಆರೋಗ್ಯ ಸಚಿವ ಡಾ. ಮುನ್ಸುಖ್ ಮಾಂಡೋವಿಯಾ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಫೆಬ್ರವರಿಗೆ‌ ಕಾದಿದೆಯಾ ಅಪಾಯ?

ಫೆಬ್ರವರಿ 3, 2022 ಗುರುವಾರದಂದು ಮೂರನೇ ಅಲೆ ಅಪ್ಪಳಿಸಲಿದೆ ಎಂದು IIT ಕಾನ್​ಪುರದ ತಜ್ಞರ ತಂಡ ತಿಳಿಸಿದೆ. ಗಣಿತ ಶಾಸ್ತ್ರಜ್ಞರು ಮತ್ತಿತರ ತಜ್ಞರ ತಂಡ ಈ ಲೆಕ್ಕಾಚಾರ ಮಾಡಿದೆ.
           ವಿಶ್ವದಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬಂದ 10 ದೇಶಗಳನ್ನು ಆಯ್ಕೆ ಮಾಡಿ ಆ ದೇಶಗಳಲ್ಲಿ ಪ್ರತಿದಿನ ಎಷ್ಟು ಪ್ರಕರಣಗಳು ವರದಿಯಾಗಿದ್ದವು. ಒಂದು ಮಿಲಿಯನ್​ನಲ್ಲಿ ಎಷ್ಟು ಪ್ರಕರಣ ಎನ್ನುವ ಅಂಕಿ ಅಂಶಗಳನ್ನೆಲ್ಲಾ ಗುಡ್ಡೆ ಹಾಕಿಕೊಂಡು ಈ ತಂಡ ಫೆಬ್ರವರಿ 3ರ ದಿನಾಂಕವನ್ನು ನಿರ್ಧರಿಸಿದೆ.

ಸದ್ಯ ಕರ್ನಾಟಕವೂ ಸೇರಿದಂತೆ ನಾನಾ ರಾಜ್ಯಗಳಲ್ಲಿ ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗುತ್ತಿವೆ. ಅದೃಷ್ಟವಶಾತ್ ಓಮೈಕ್ರಾನ್ ಸೋಂಕು ಡೆಲ್ಟಾದಷ್ಟು ಜೀವಹಾನಿ ಮಾಡುವ ರೂಪಾಂತರ ಅಲ್ಲ ಎನ್ನುವ ವಿಚಾರ ತಿಳಿದುಬಂದಿದೆ.

   ಇದು ಜೀವ ತೆಗೆಯುವಷ್ಟು ತೀವ್ರವಲ್ಲ ನಿಜ, ಆದರೆ ಖಂಡಿತವಾಗಿಯೂ ಈ ಹಿಂದಿನ ಎಲ್ಲಾ ರೂಪಾಂತರಿಗಳಿಗಿಂತ ಬಹಳ ವೇಗವಾಗಿ ಹರಡುತ್ತದೆ ಎನ್ನುವ ಎಚ್ಚರಿಕೆಯನ್ನು ಖುದ್ದು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ.

ಲಸಿಕೆಯ ವಿಚಾರ ಏನು ?

ಆದ್ದರಿಂದ ಇಲ್ಲಿ ಲಸಿಕೆ, ಅದರ ಶಕ್ತಿ ಮುಂತಾದ ವಿಚಾರಗಳ ಬಗ್ಗೆ ಆಲೋಚಿಸುವ ಬದಲು ಸೋಂಕು ಬೇಗ ಹರಡದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮವೇ ಮುಖ್ಯ. ಫೆಬ್ರವರಿಯಲ್ಲಿ ಬರುತ್ತದೆ ಎನ್ನಲಾದ ಮೂರನೇ ಅಲೆ ಅತೀ ಹೆಚ್ಚು ಜನರನ್ನು ಬಾಧಿಸುವ ಸಾಧ್ಯತೆ ಇದೆ. ಆದರೆ ಅದೃಷ್ಟವಶಾತ್ ಸಾವಿನ ಸಂಖ್ಯೆ ಜಾಸ್ತಿ ಇರುವುದಿಲ್ಲ ಎನ್ನುವುದೇ ಸಮಾಧಾನಕರ ಸಂಗತಿಯಾಗಿದೆ.

ಓಮೈಕ್ರಾನ್ ಕೂಡಾ ಬೇರೆ ಕೋವಿಡ್ ನಂತೆ ರೂಪಾಂತರಗೊಳ್ಳಲು ಸಾಧ್ಯವಿದೆ. ಹಾಗಾಗಿ ಒಂದು ವೇಳೆ ಎಲ್ಲಾ ಲೆಕ್ಕಾಚಾರ ತಲೆಕೆಳಗಾಗುವಂತೆ ಅದು ಕೂಡಾ ಬಗೆಬಗೆಯ ರೂಪ ತಾಳಿ ಮತ್ತಷ್ಟು ಹೊಸಾ ಸಮಸ್ಯೆಗಳನ್ನು ತಂದೊಡ್ಡುವ ಅಪಾಯವನ್ನು ಸಂಪೂರ್ಣವಾಗಿ ತಳ್ಳಿಹಾಕುವಂತಿಲ್ಲ.

             ಅಲ್ಲಿಗೆ ಈಗ ಸದ್ಯ ಚುರುಕುಗೊಂಡಿರುವ ಓಮೈಕ್ರಾನ್ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚುವುದು ಶತಸಿದ್ಧ ಎಂದು ಅಂದಾಜಿಸಲಾಗಿದೆ. ಆದ್ದರಿಂದಲೇ ಬೂಸ್ಟರ್ ಡೋಸ್ ಮತ್ತು ಮಕ್ಕಳಿಗೆ ಲಸಿಕೆ ನೀಡುವ ಕುರಿತಾಗಿಯೂ ಸರ್ಕಾರಗಳು ಬಹಳ ವೇಗವಾಗಿ ಕೆಲಸ ಆರಂಭಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link