ಬೆಂಗಳೂರು :
ಕರ್ಪ್ಯೂ ನಿಯಮ ಉಲ್ಲಂಘಿಸಿ ಕಿರಿಕ್
ರಾಜ್ಯದಲ್ಲಿ ಮೊದಲ ದಿನದ ನೈಟ್ ಕರ್ಪ್ಯೂ ಮುಕ್ತಾಯವಾಗಿದ್ದು, ಬಿಗ್‍ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಯಾಗಿದ್ದ ದಿವ್ಯ ಸುರೇಶ್ ಬ್ರಿಗೇಡ್ ರೋಡ್‍ನಲ್ಲಿ ರಂಪಾಟ ಮಾಡಿದ ಘಟನೆ ರಾತ್ರಿ ನಡೆದಿದೆ.
ಬ್ರಿಗೇಡ್ ರೋಡ್‍ನಲ್ಲಿ ಸ್ನೇಹಿತರೊಂದಿಗಿದ್ದ ದಿವ್ಯ ಸುರೇಶ್ ಕುಡಿದ ಅಮಲಿನಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ.ಕರ್ಪ್ಯೂ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನಿನ್ನೆ ರಾತ್ರಿ ಬ್ರಿಗ್ರೇಡ್ ರೋಡ್ ನಲ್ಲಿ ಸ್ನೇಹಿತರೊಂದಿಗೆ ಬಂದಿದ್ದ ದಿವ್ಯ ಸುರೇಶ್ ಗೆ ಪೊಲೀಸರು ನೈಟ್ ಕರ್ಪ್ಯೂ ಇದೆ ಮನೆ ಹೋಗಿ ಎಂದಿದ್ದಕ್ಕೆ ಪೊಲೀಸರೊಂದಿಗೆ ವಾಗ್ವಾದ ನಡೆಸಿ ರಂಪಾಟ ಮಾಡಿದ್ದಾರೆ.ದಿವ್ಯಾ ಸುರೇಶ್ ಅವರು ಬಿಗ್‍ಬಾಸ್ ಕನ್ನಡ ಸೀಸನ್ 8ರಲ್ಲಿ 6ನೇ ಸ್ಥಾನ ಪಡೆದುಕೊಂಡು ಮನೆಯಿಂದ ಹೊರ ಬಂದಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ