ಕೊರೋನಾ 3ನೇ ಅಲೆಯ ಭೀತಿ: ನಾಳೆ ಲಾಕ್​ಡೌನ್ ಭವಿಷ್ಯ!

ಬೆಂಗಳೂರು:

               ರಾಜ್ಯದಲ್ಲಿ ಕೊರೋನಾ ಕೇಸಸ್​ ಹೆಚ್ಚಾಗ್ತಿರೋ ಹಿನ್ನೆಲೆ ನಾಳೆ ಸಂಜೆ ಸಿಎಂ ಬಸವರಾಜ ಬೊಮ್ಮಾಯಿ ತಜ್ಞರ ಜೊತೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಯಾವ ನಿರ್ಬಂಧಗಳನ್ನ ಜಾರಿಗೆ ತರಬೇಕು ಅನ್ನೋ ಬಗ್ಗೆ ಚರ್ಚೆ ನಡೆಯಲಿದೆ.

           ನಂತ್ರ ಗುರುವಾರ ನಡೆಯಲಿರೋ ಸಚಿವ ಸಂಪುಟದಲ್ಲಿ ತಜ್ಞರ ಸಲಹೆ ಬಗ್ಗೆ ಚರ್ಚೆ ನಡೆಸಿ, ದೀರ್ಘಾವಧಿ ಕ್ರಮಗಳನ್ನ ಕೈಗೊಳ್ತೀವಿ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರಾಜ್ಯದಲ್ಲಿ ಜನವರಿ 2ನೇ ತಾರೀಖು 10 ಒಮೈಕ್ರಾನ್​ ಪ್ರಕರಣಗಳು ದೃಢಪಟ್ಟಿವೆ. 8 ಬೆಂಗಳೂರಿನಲ್ಲಿ, 2 ಧಾರವಾಡದಲ್ಲಿ. ಈ ಮೂಲಕ ರಾಜ್ಯದ ಒಮೈಕ್ರಾನ್​ ಕೊರೋನಾ ಪ್ರಕರಣಗಳ ಸಂಖ್ಯೆ 76ಕ್ಕೆ ಏರಿಕೆಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link