ʼLPG ಸಿಲಿಂಡರ್ʼ ಈಗ ₹634ಕ್ಕೆ ಲಭ್ಯ : ಅದ್ಹೇಗೆ? ಅನ್ನೋ ಮಾಹಿತಿ ಇಲ್ಲಿದೆ..!

ನವದೆಹಲಿ : 

            ದೇಶೀಯ ಅನಿಲ ಕಂಪನಿಗಳೂ ಕಾಲಕ್ಕೆ ತಕ್ಕಂತೆ ಬದಲಾಗತೊಡಗಿವೆ. ಕಂಪನಿಗಳು ಈಗ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳಲ್ಲೂ ಬದಲಾವಣೆ ಮಾಡಲು ಆರಂಭಿಸಿವೆ.

     ಅದ್ರಂತೆ, ಸಧ್ಯ ಸಾಮಾನ್ಯ ಗ್ಯಾಸ್ ಸಿಲಿಂಡರ್ ಹೊರತುಪಡಿಸಿ, ಈಗ ಅವರು ಕಾಂಪೋಸಿಟ್ ಗ್ಯಾಸ್ ಸಿಲಿಂಡರ್  ನೀಡಲು ಪ್ರಾರಂಭಿಸಿದ್ದಾರೆ.

      ಕಡಿಮೆ ತೂಕದ ಈ ಸಿಲಿಂಡರ್ʼನ್ನ ದೆಹಲಿಯಲ್ಲಿ 634 ರೂ.ಗೆ ಖರೀದಿಸಬಹುದು. ಜೈಪುರದ ಗ್ರಾಹಕರು ಇದಕ್ಕಾಗಿ 637 ರೂ. ಪಾವತಿಸಬೇಕಾಗುತ್ತೆ.

ಅಂದ್ಹಾಗೆ, ಈ ಕಾಂಪೋಸಿಟ್ ಗ್ಯಾಸ್ ಸಿಲಿಂಡರ್ 10 ಕೆಜಿ ಅನಿಲವನ್ನ ಹೊಂದಿರುತ್ತದೆ. ಇನ್ನೀದು ಪಾರದರ್ಶಕವಾಗಿರುತ್ತದೆ. ಕಡಿಮೆ ತೂಕದ ಕಾರಣ, ಅದನ್ನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ಸುಲಭವಾಗಿದೆ.

ಹಾಗಾಗಿ ಕಡಿಮೆ ಬೆಲೆಯಿರುವ ಈ ಗ್ಯಾಸ್ ಸಿಲಿಂಡರ್ ಮನೆಗೆ ತುಂಬಾ ಉಪಯುಕ್ತವಾಗಿದೆ.

ಕಾಂಪೋಸಿಟ್ ಗ್ಯಾಸ್ ಸಿಲಿಂಡರ್ ಎಂದರೇನು?

ಸಂಯೋಜಿತ ಸಿಲಿಂಡರ್ ಕಬ್ಬಿಣದ ಸಿಲಿಂಡರ್ಗಿಂತ 7ಕೆಜಿ ಹಗುರವಾಗಿರುತ್ತದೆ. ಕಾಂಪೋಸಿಟ್ ಗ್ಯಾಸ್ ಸಿಲಿಂಡರ್ ಹಗುರವಾಗಿರುತ್ತದೆ. ಆದ್ರೆ, ಅದು ಬಲವಾಗಿರುತ್ತದೆ. ಇದು ಮೂರು ಪದರಗಳನ್ನ ಹೊಂದಿದೆ.

ಈಗ 10 ಕೆಜಿ ಕಾಂಪೋಸಿಟ್ ಸಿಲಿಂಡರ್ ಕೇವಲ 10 ಕೆಜಿ ಅನಿಲವನ್ನು ಹೊಂದಿರುತ್ತದೆ. ಈ ರೀತಿಯಾಗಿ ಅದರ ಒಟ್ಟು ತೂಕ 20 ಕೆ.ಜಿ. ಮತ್ತೊಂದೆಡೆ, ಸಾಮಾನ್ಯ ಕಬ್ಬಿಣದ ಸಿಲಿಂಡರ್ ತೂಕದಲ್ಲಿ 30 ಕೆಜಿಗಿಂತ ಹೆಚ್ಚಾಗಿರುತ್ತದೆ.

ವಿವಿಧ ನಗರಗಳಲ್ಲಿನ ಕಾಂಪೋಸಿಟ್ ಗ್ಯಾಸ್ ಸಿಲಿಂಡರ್ ದರ ಇಂತಿದೆ..!

ಇಂಡಿಯನ್ ಆಯಿಲ್ ಪ್ರಕಾರ, 10 ಕೆಜಿ ಗ್ಯಾಸ್ ಹೊಂದಿರುವ ಕಾಂಪೋಸಿಟ್ ಗ್ಯಾಸ್ ಸಿಲಿಂಡರ್ʼನ್ನ ಮುಂಬೈನಲ್ಲಿ 634ಕ್ಕೆ ಖರೀದಿಸಬಹುದು. ಕೋಲ್ಕತ್ತಾದಲ್ಲಿ ಇದರ ದರ 652 ಮತ್ತು ಚೆನ್ನೈನಲ್ಲಿ 645 ರೂ. ಇನ್ನು ಇದಕ್ಕಾಗಿ ಲಕ್ನೋದಲ್ಲಿ ಗ್ರಾಹಕರು 660 ರೂ. ಪಾವತಿಸಬೇಕು.

ಪಾಟ್ನಾದಲ್ಲಿ ಇದರ ಬೆಲೆ ಸುಮಾರು 697 ರೂ. ಇದನ್ನು ಇಂದೋರ್‌ನಲ್ಲಿ 653 ರೂ.ಗೆ ಖರೀದಿಸಬಹುದು. ಕಾಂಪೋಸಿಟ್ ಗ್ಯಾಸ್ ಸಿಲಿಂಡರ್ ಭೋಪಾಲ್ʼನಲ್ಲಿ 638 ರೂ.ಗೆ ಲಭ್ಯವಾಗಲಿದೆ. ಗೋರಖ್‌ಪುರದಲ್ಲಿ ಇದರ ಬೆಲೆ 677 ರೂಪಾಯಿ ಆಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link