ಎಲೆಕ್ಟ್ರಾನಿಕ್ ಉಪಕರಣ ಬೆಲೆ ಶೇ.10ರಷ್ಟು ಏರಿಕೆ

ನವದೆಹಲಿ:

ಹೊಸ ವರ್ಷದಲ್ಲಿ ಏರ್ ಕಂಡೀಷನರ್ ಗಳು ಮತ್ತು ರೆಫ್ರಿಜರೇಟರ್ ಗಳ  ಬೆಲೆಗಳು ಏರಿಕೆಯಾಗಿವೆ. ಏಕೆಂದರೆ ಕಚ್ಚಾ ವಸ್ತುಗಳ ವೆಚ್ಚಗಳು ಮತ್ತು ಹೆಚ್ಚಿನ ಸರಕು ಶುಲ್ಕಗಳ  ಪರಿಣಾಮದಿಂದಾಗಿದೆ.

          ಇದರ ಎಫೆಕ್ಟ್ ನಿಂದಾಗಿ ಗ್ರಾಹಕರಿಗೆ ಬೆಲೆ ಎರಿಕೆಯ ಹೊರೆಯನ್ನು ಹೊರಿಸುತ್ತಿದ್ದಾರೆ. ಏಲೆಕ್ಟ್ರಾನಿಕ್ ವಸ್ತುಗಳ ಬೆಲೆ ಶೇ.5 ರಿಂದ 10ರಷ್ಟು ಏರಿಕೆಯಾಗುತ್ತಿದೆ.

ಹೌದು.. ನೀವು ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸೋ ಯೋಚನೆಯಲ್ಲಿದ್ದರೇ, ಬೆಲೆ ಏರಿಕೆಯ ಬಿಸಿ ಮುಟ್ಟಲಿದೆ. ವಾಷಿಂಗ್ ಮಷಿನ್ ಗಳಂತಹ ಗೃಹೋಪಯೋಗಿ ವಸ್ತುಗಳು ಈ ತಿಂಗಳ ಕೊನೆಯಲ್ಲಿ ಅಥವಾ ಮಾರ್ಚ್ ವೇಳೆಗೆ ಶೇಕಡಾ 5ರಷ್ಟು ಬೆಲೆ ಏರಿಕೆಗೆ ಸಾಕ್ಷಿಯಾಗಬಹುದು.

ಪ್ಯಾನಸೋನಿಕ್, ಎಲ್ ಜಿ, ಹೈಯರ್ ಸೇರಿದಂತೆ ಕಂಪನಿಗಳು ಈಗಾಗಲೇ ಬೆಲೆಗಳು ಸಹ ಹೆಚ್ಚಳವಾಗಲಿವೆ. ಆದರೆ ಸೋನಿ, ಹಿಟಾಚಿ, ಗೋದ್ರೇಜ್ ಅಪ್ಲೈಯನ್ಸ್ ನಂತಹ ಇತರ ತಯಾರಕರು ಈ ತ್ರೈಮಾಸಿಕದ ಅಂತ್ಯದ ವೇಳೆಗೆ ಬೆಲೆ ಏರಿಕೆಯ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಗ್ರಾಹಕ ಎಲೆಕ್ಟ್ರಾನಿಕ್ಸ್ ( Consumer Electronics ) ಮತ್ತು ಉಪಕರಣಗಳ ತಯಾರಕರ ಸಂಘ (ಸಿಇಎಎಂಎ) ಪ್ರಕಾರ, ಉದ್ಯಮವು ಜನವರಿಯಿಂದ ಮಾರ್ಚ್ ವರೆಗೆ ಶೇಕಡಾ 5 ರಿಂದ 7ರ ವ್ಯಾಪ್ತಿಯಲ್ಲಿ ದರಗಳನ್ನು ಹೆಚ್ಚಿಸುತ್ತದೆ.

 

ಸರಕುಗಳು, ಜಾಗತಿಕ ಸರಕು ಮತ್ತು ಕಚ್ಚಾ ವಸ್ತುಗಳ ಬೆಲೆಯಲ್ಲಿ ಏರಿಕೆಯಾದ ಕಾರಣದಿಂದಾಗಿ, ಎಲೆಕ್ಟ್ರಾನಿಕ್ ವಸ್ತುಗಳಾದಂತ ರೆಫ್ರಿಜರೇಟರ್, ವಾಷಿಂಗ್ ಮಷಿನ್ ಗಳು ಮತ್ತು ಏರ್ ಕಂಡೀಷನರ್ ಗಳನ್ನು ಶೇಕಡಾ 3 ರಿಂದ 5 ರಷ್ಟು ಹೆಚ್ಚಿಸಲು ನಾವು ಕ್ರಮ ಕೈಗೊಂಡಿದ್ದೇವೆ ಎಂದು ಹೈರ್ ಅಪ್ಲೈಯನ್ಸ್ ಇಂಡಿಯಾ ಅಧ್ಯಕ್ಷ ಸತೀಶ್ ಎನ್.ಎಸ್.ಅವರು ಪಿ.ಟಿ.ಐ.ಗೆ ತಿಳಿಸಿದರು.

ಎಸಿಗಳಿಗೆ ಈಗಾಗಲೇ ಶೇಕಡಾ 8 ರವರೆಗೆ ಬೆಲೆಗಳನ್ನು ಹೆಚ್ಚಿಸಿರುವ ಪ್ಯಾನಸೋನಿಕ್, ಮತ್ತಷ್ಟು ಏರಿಕೆಗಳನ್ನು ಪರಿಗಣಿಸುತ್ತಿದೆ. ಇದು ಗೃಹೋಪಯೋಗಿ ಉಪಕರಣಗಳಿಗೆ ಇದೇ ರೀತಿಯ ಏರಿಕೆ ಮಾಡೋ ಯೋಚನೆಯಲ್ಲಿದೆ.

ಏರ್ ಕಂಡೀಷನರ್ ಗಳು ಈಗಾಗಲೇ ಸುಮಾರು ಶೇಕಡಾ 8ರಷ್ಟು ಬೆಲೆ ಏರಿಕೆಯನ್ನು ಕಂಡಿವೆ. ಸರಕುಗಳು ಮತ್ತು ಪೂರೈಕೆ ಸರಪಳಿಯ ಹೆಚ್ಚುತ್ತಿರುವ ವೆಚ್ಚಗಳನ್ನು ಅವಲಂಬಿಸಿ ಇದು ಮತ್ತಷ್ಟು ಹೆಚ್ಚಾಗಬಹುದು.

ಮುಂದಿನ ದಿನಗಳಲ್ಲಿ ಗೃಹೋಪಯೋಗಿ ವಸ್ತುಗಳ ಬೆಲೆ ಏರಿಕೆಯನ್ನು ಮಾಡುವ ಯೋಚನೆಯಲ್ಲಿರೋದಾಗಿ ಪ್ಯಾನಸೋನಿಕ್ ಇಂಡಿಯಾ ವಿಭಾಗೀಯ ನಿರ್ದೇಶಕ, ಗ್ರಾಹಕ ಎಲೆಕ್ಟ್ರಾನಿಕ್ಸ್ ಫುಮಿಯಾಸು ಫ್ಯುಜಿಮೊರಿ ಹೇಳಿದರು.

ಒಟ್ಟಾರೆಯಾಗಿ ಇದೇ ಮಾದರಿಯಲ್ಲಿ ವಿವಿಧ ಎಲೆಕ್ಟ್ರಾನಿಕ್ ಕಂಪನಿಗಳು ಕಚ್ಚಾ ವಸ್ತುಗಳ ಬೆಲೆ ಹೆಚ್ಚಳ, ಸರಕು ಸಾಗಾಟದ ವೆಚ್ಚ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಶೇ.5 ರಿಂದ 10ರಷ್ಟು ಎಲೆಕ್ಟ್ರಾನಿಕ್ ವಸ್ತುಗಳ ಬೆಲೆಯನ್ನು ಹೆಚ್ಚಳ ಮಾಡಲಿದೆ. ಈ ಮೂಲಕ ಖರೀದಿದಾರರಿಗೆ ಬಿಗ್ ಶಾಕ್ ನೀಡಲಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap