ಬೆಂಗಳೂರು:
ಮೊದಲ ಹಂತದಲ್ಲಿ 10 ದಿನ ಲಾಕ್.?
ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿವೆ. ಈ ಮೊದಲು 500 ಒಳಗೆ ಹೊಸ ಕೊರೋನಾ ಕೇಸ್ ಪತ್ತೆಯಾಗುತ್ತಿದ್ದದ್ದು, ಈಗ 10 ಸಾವಿರ ಗಡಿಯನ್ನು ದಾಟಿದೆ.
ಈ ಕಾರಣದಿಂದಾಗಿಯೇ ಕೊರೋನಾ ಕಟ್ಟಿಹಾಕೋದಕ್ಕಾಗಿ ರಾಜ್ಯದಲ್ಲಿ ಮತ್ತೆ ಸಂಪೂರ್ಣ ಲಾಕ್ ಡೌನ್ ಫಿಕ್ಸ್ ಎಂದು ಹೇಳಲಾಗುತ್ತಿದೆ.
ಕರ್ನಾಟಕದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಜನವರಿ 1ರಂದು 10,292 ಪತ್ತೆಯಾಗಿದ್ದಂತ ರಾಜ್ಯದಲ್ಲಿ ಕೊರೋನಾ ಕೇಸ್, ದಿನೇ ದಿನೇ ಏಕಿಕೆಯನ್ನು ಕಂಡು, ಈಗ 11 ಸಾವಿರ ಗಡಿಯನ್ನು ದಾಟಿವೆ. ಬೆಂಗಳೂರಿನಲ್ಲಿಯಂತೂ ಕರ್ನಾಟಕ ಮುಕ್ಕಾಲು ಪಾಲು ಕೋವಿಡ್ ಪ್ರಕರಣಗಳ ಸಂಖ್ಯೆ ಪತ್ತೆಯಾಗುತ್ತಿವೆ.
ಫೆಬ್ರವರಿ ವೇಳೆಗೆ ಕೊರೋನಾ ಮತ್ತಷ್ಟು ಹೆಚ್ಚಳ ಆಗೋ ಸಾಧ್ಯತೆ ಇರೋ ಕಾರಣದಿಂದಾಗಿ, ಲಾಕ್ ಡೌನ್ ಒಂದೇ ಕೊರೋನಾ ನಿಯಂತ್ರಣಕ್ಕೆ ಇರೋ ಮಾರ್ಗ ಎಂದು ಹೇಳಲಾಗುತ್ತಿದೆ.
ಈ ಎಲ್ಲಾ ಕಾರಣದಿಂದಾಗಿ ರಾಜ್ಯದಲ್ಲಿನ ಕೊರೋನಾ ನಿಯಂತ್ರಣಕ್ಕಾಗಿ ಸಿಎಂ ಬಸವರಾಜ ಬೊಮ್ಮಾಯಿಯವರು ಇಂದು ಮಹತ್ವದ ಸಚಿವರ ಸಭೆಯನ್ನು ಕರೆದಿದ್ದಾರೆ.
ವೀಡಿಯೋ ಸಂವಾದದ ಮೂಲಕ ಸಭೆ ನಡೆಸುತ್ತಿರುವಂತ ಅವರು ವೀಕೆಂಡ್ ಕರ್ಪ್ಯೂ, ನೈಟ್ ಕರ್ಪ್ಯೂ ಗೂ ಜಗ್ಗದೆ ಸಾಗುತ್ತಿರುವಂಕ ಕೊರೋನಾ ಕಟ್ಟಿ ಹಾಕೋದಕ್ಕೆ ಲಾಕ್ ಡೌನ್ ನಂತರ ನಿರ್ಧಾರದ ಕ್ರಮವನ್ನು ಕೈಗೊಳ್ಳುತ್ತಿದ್ದಾರೆ ಎನ್ನಲಾಗಿದೆ. ಮತ್ತೆ ರಾಜ್ಯದಲ್ಲಿ ಪ್ರಾರಂಭಿಕವಾಗಿ 10 ದಿನ ಲಾಕ್ ಡೌನ್ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಬಗ್ಗೆ ಕಾದು ನೋಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ