ರಾಜ್ಯಾದ್ಯಂತ ಜ.31ರವರೆಗೆ ನೈಟ್ ಕರ್ಪ್ಯೂ

ಬೆಂಗಳೂರು:

          ರಾಜ್ಯ ಸರ್ಕಾರದಿಂದ ಈಗಾಗಲೇ ಜಾರಿಗೊಳಿಸಿರುವಂತ ಕೊರೋನಾ ಮಾರ್ಗಸೂಚಿ ಕ್ರಮಗಳನ್ನು ಮತ್ತೆ ದಿನಾಂಕ 31-01-2022ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ಈ ಕುರಿತಂತೆ ಪರಿಷ್ಕೃತ ವಿಸ್ತರಣಾ ಮಾರ್ಗಸೂಚಿ ಪ್ರಕಟಿಸಿರುವಂತ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್ ಅವರು, ದಿನಾಂಕ 04-01-2022ರ ಮಾರ್ಗಸೂಚಿಗಳನ್ನು ದಿನಾಂಕ 31-01-2022ರವರೆಗೆ ವಿಸ್ತರಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.

          ನೂತನ ಪರಿಷ್ಕೃತ ಕೊರೋನಾ ಮಾರ್ಗಸೂಚಿಯಂತೆ ಶಾಲಾ-ಕಾಲೇಜುಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆಯನ್ನು ಆಧರಿಸಿ ಬೆಂಗಳೂರಿನಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಶಾಲಾ-ಕಾಲೇಜು ಸ್ಥಗಿತಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದದಾರೆ.

ಯಾವುದೇ ಪ್ರತಿಭಟನೆ, ಧರಣಿ, Rallyಗಳಿಗೆ ಅನುಮತಿ ನಿಷೇಧ ಮುಂದುವರಿಸಲಾಗಿದೆ. ಆದ್ರೇ ಕೊವೀಡ್ ನಿಯಮಗಳನ್ನು ಪಾಲಿಸಿ ಮದುವೆಗಳನ್ನು ನಡೆಸೋದಕ್ಕೆ ಅನುಮತಿಸಲಾಗಿದೆ. ಹೊರಾಂಗಣದಲ್ಲಿ 200 ಜನರೊಂದಿಗೆ, ಒಳಾಂಗಣದಲ್ಲಿ 100 ಜನರ ಮಿತಿಯೊಂದಿಗೆ ವಿವಾಹಗಳಿಗೆ ಅವಕಾಶ ನೀಡಲಾಗಿದೆ.

ಮೆಟ್ರೋ ರೈಲು ಸಂಚಾರ, ಸಾರ್ವಜನಿಕ ಸಾರಿಗೆಗಳಿಗೆ ಅವಕಾಶ ನೀಡಿಕೆ ಮುಂದುವರೆಸಲಾಗಿದೆ. ಗಡಿ ಭಾಗದಲ್ಲಿ ಕೊರೋನಾ ಮಾರ್ಗಸೂಚಿ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ತಿಳಿಸಿಲಾಗಿದೆ. ಕೊರೋನಾ ನಿಯಮಗಳನ್ನು ಮೀರಿದ್ರೇ.. ಅಂತವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಅನುಸಾರ ಕ್ರಮ ಕೈಗೊಳ್ಳೋದಾಗಿ ಎಚ್ಚರಿಕೆ ನೀಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link