ಸಹಕಾರ ಸಂಘದಲ್ಲಿ  ಕೋಟ್ಯಂತರ ಅವ್ಯವಹಾರ ವಿವಾದ 

ತಿಪಟೂರು:

  ಸಿಇಓ ಮೇಲೆ ದರ್ಜನ್ಯ-ಕಿರುಕುಳ | ತಮಗೆ ಬೇಕಾದವರಿಗೆ ಸಾಲಕೊಡುವಂತೆ ಧಮಕಿ

 ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಸಾರ್ಥವಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೋಟ್ಯಾಂತ ರೂ. ಗಳ ಅವ್ಯಾವಹಾರವಾಗಿದೆ ಎಂದು ಸಹಕಾರ ಇಲಾಖೆಗೆ ದೂರು ಸಲ್ಲಿಸಿರುವುದು ಸತ್ಯಕ್ಕೆ ದೂರವಾದ ವಿಚಾರ ಎಂದು ಸಂಘದ ಅಧ್ಯಕ್ಷ ಅಮರ್‍ಸಿಂಗ್ ತಿಳಿಸಿದರು.

ನಗರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಅಭಿವೃದ್ಧಿಯನ್ನು ಸಹಿಸದೆ ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆಯ ಆಕಾಂಕ್ಷಿಗಳಾಗಿರುವ ಪ್ರಕಾಶ್ ಮತ್ತು ನಾಗರಾಜ್ ಎಂಬುವವರು ಮಾಡುತ್ತಿರುವ ರಾಜಕೀಯ ಪಿತೂರಿ ಇದೆಂದು ಅವರು ತಿಳಿಸಿದರು.

ಸುಳ್ಳು ದಾಖಲೆ ತೋರಿಸಿ ಸಾಲ :

ಪ್ರಕಾಶ್ ಮತ್ತು ಅವರ ತಂದೆ ಸಂಘದಲ್ಲಿ ಸಾಲ ಪಡೆದಿದ್ದಾರೆ. ಜೊತೆಗೆ ನಾಗರಾಜ್ ಎನ್ನುವ ನಿರ್ದೇಶಕರು ಆಧಾರ್ ಕಾರ್ಡ್ ವಿಳಾಸವನ್ನು ಬದಲಿಸಿ ಕೇರ್ ಆಫ್ ವಿಳಾಸದೊಂದಿಗೆ ಸದಸ್ಯರಾಗಿದ್ದು, ಈಗ ಬೆಂಗಳೂರಿನ ವಿಳಾಸವನ್ನು ತೋರಿಸಿ ಸಾಲ ಪಡೆದಿದ್ದಾರೆ. ಇವರೆಲ್ಲಾ ಒಟ್ಟಾಗಿ ಸಾರ್ಥವಳ್ಳಿಯಲ್ಲಿ ಒಂದು ಸಭೆಗಳು ನಡೆಯದಂತೆ ಕಿತಾಪತಿ ಮಾಡುತ್ತಾರೆಂದು ಅಮರ್‍ಸಿಂಗ್ ಆರೋಪಿಸಿದರು.

ಅವ್ಯವಹಾರಕ್ಕೆ ಈಗಿನ ಸಿಇಓ ಹೊಣೆಯಲ್ಲ :

ಸಂಘದಲ್ಲಿ 95 ಲಕ್ಷ ರೂ. ಗಳ ಅವ್ಯವಹಾರ ನಡೆದಿದೆ. ಆದರೆ ಈ ಅವ್ಯವಹಾರಕ್ಕೂ ಈಗಿನ ಸಿಇಓ ಪಲ್ಲವಿಹೊನ್ನಪ್ಪ ಅವರಿಗೂ ಸಂಬಂಧÀವಿಲ್ಲ, ಹೊನ್ನಪ್ಪ ಅವರು ಮರಣ ಹೊಂದಿದ್ದು, ಅವರು ತಮ್ಮ ತಂದೆ ಮಾಡಿದ ಅವ್ಯವಹಾರಕ್ಕೆ ಪಲ್ಲವಿಯವರು ತಮ್ಮ ಜಮೀನನನ್ನು ಜಾಮೀನು ನೀಡಿ ನ್ಯಾಯಾಲಯದಲ್ಲಿ ಪ್ರಕರಣ ನಡೆಸುತ್ತಿದ್ದಾರೆ.

ಅಲ್ಲದೇ ಒಬ್ಬ ಹೆಣ್ಣು ಮಗಳು ಎಂದೂ ನೋಡದೆ ಆಕೆಗೆ ಗೌರವ ನೀಡದೆ ದಬ್ಬಾಳಿಕೆ ಮಾಡಿ ತನಗೆ ಬೇಕಾದವರಿಗೆ ಸಾಲ ನೀಡು ಎನ್ನುತ್ತಾರೆ ಹಾಗೂ ಟಿಎಪಿಸಿಎಸ್ ಚುನಾವಣೆ ಸಂದರ್ಭದಲ್ಲಿ ಸಿಇಓ ಪಲ್ಲವಿ ಅವರನ್ನು ಬೆಂಗಳೂರಿನಲ್ಲಿ ಕೂಡಿ ಹಾಕಿದ್ದರು ಎಂದು ಅಮರ್‍ಸಿಂಗ್ ಆರೋಪಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಸಾರ್ಥವಳ್ಳಿ ಗ್ರಾಮದ ಪಿಎಸಿಎಸ್ ನಿರ್ದೇಶಕರಾದ ಲಕ್ಷ್ಮೀಬಾಯಿ, ನೂರುಲ್ಲಾ ಸಾಬ್, ಚಂದ್ರಪ್ಪ, ಶಿವಕುಮಾರ್, ಪುಟ್ಟನಾಯ್ಕ, ಅಭೀಷೇಕ್ ಮತ್ತಿತರರು ಹಾಜರಿದ್ದರು.

ರೈತರ ಸಾಲದ ಹಣವನ್ನು ಚೆಕ್‍ನಲ್ಲಿ ಕೊಡದೆ ತಿಪಟೂರು ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ರೈತರಿಂದ ಓಚರ್‍ಗೆ ಸಹಿ ಪಡೆದು ಹಣ ಕೊಡುತ್ತಾರೆ ಹಾಗೂ ಸಿಇಓ ತಾವು ತೆಗೆದುಕೊಲ್ಳುವ ಸಂಬಳಕ್ಕಾದರೂ ಸಂಘಕ್ಕೆ ಸರಿಯಾದ ಸಮಯಕ್ಕೆ ಬರುವುದಿಲ್ಲ.

ಅದಕ್ಕಾಗಿ ಕಚೇರಿಯನ್ನು ಕಂಪ್ಯೂಟರೀಕರಣಗೊಳಿಸಿ ಸಿ.ಸಿ ಟಿ.ವಿ ಹಾಕಿಸಿದರೆ ಎಲ್ಲವನ್ನು ಹಾಳುಮಾಡಿ ಕಂಪ್ಯೂಟರ್‍ಗಳನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಇವೆಲ್ಲವನ್ನು ಪ್ರಶ್ನಿಸಿದ್ದಕ್ಕೆ ನನ್ನುನ್ನು ದೌರ್ಜನ್ಯ ಮಾಡುತ್ತಾನೆ ಎನ್ನುತ್ತಾರೆ ಇದಕ್ಕೆ ಸೂಕ್ತ ದಾಖಲೆಗಳಿದ್ದರೆ ಸಿಇಓ ಕೊಡಲಿ.

-ಪ್ರಕಾಶ್ ಯಾದವ್, ಪಿಎಸಿಎಸ್ ಸಾರ್ಥವಳ್ಳಿ ನಿರ್ದೇಶಕ

ನಾನು ಸುಳ್ಳು ಆಧಾರ್ ಕಾರ್ಡ್ ನೀಡಿ ಸಾಲ ಪಡೆದಿಲ್ಲ, ಅವರೇ ನನ್ನ ಆಧಾರ್ ಕಾರ್ಡ್ ಅನ್ನು ನಕಲು ಮಾಡಿದ್ದಾರೆ, ನಾನು ಸಮಾಜ ಸೇವೆ ಮಾಡಲು ಗ್ರಾಮಕ್ಕೆ ಬಂದವನು. ನನ್ನ ಕಣ್ಣ ಮುಂದೆಯೇ ರೈತರಿಗೆ ಅನ್ಯಾಯವಾಗುವುದನ್ನು ನಾನು ಹೇಗೆ ಸಹಿಸಲಿ. ಇದರಲ್ಲಿ ನನ್ನ ಅಥವಾ ಸಿಇಓ ಯಾರದೇ ತಪ್ಪಿರಲಿ ಅವರಿಗೆ ಸೂಕ್ತ ಶಿಕ್ಷೆಯಾಗಲೇಬೇಕು ಹಾಗಾಗಿ ಈ ಕುರಿತು ತನಖೆ ನಡೆಯಲಿ.

ನಾಗರಾಜು, ಪಿಎಸಿಎಸ್ ಸಾರ್ಥವಳ್ಳಿ ನಿರ್ದೇಶಕ

 

 ಇವರಿಂದ ನೆಮ್ಮದಿಯೇ ಇಲ್ಲವಾಗಿದೆ :

ಸಿಇಓ ಪಲ್ಲವಿ ಮಾತನಾಡಿ, ರಾತ್ರಿ ಹೊತ್ತಿನಲ್ಲಿ ಅನ್ಯರಿಂದ ಕರೆ ಮಾಡಿಸಿ ನನಗೆ ಕಿರುಕುಳ ನೀಡುತ್ತಾರೆ, ರಾಜಕೀಯ ಪ್ರಭಾವ ಬಳಸಿ ದೌರ್ಜನ್ಯ ಎಸಗುತ್ತಾರೆ, ಗ್ರಾಪಂ ಸದಸ್ಯರಾಗಿರುವ ಪ್ರಕಾಶ್ ಅವರು ನನಗೆ ಚುನಾವಣೆಯಲ್ಲಿ ಮತಹಾಕಿಲ್ಲ ಇವರಿಗೆ ಸಾಲ ನೀಡಬೇಡ, ಇವರು ಮತ ಹಾಕಿದ್ದಾರೆ ಇವರಿಗೆ ಸಾಲ ನೀಡಲೇಬೇಕೆಂದು ಧಮಕಿ ಹಾಕುತ್ತಾರೆ.

ಇವರಿಂದ ನನಗೆ ನೆಮ್ಮದಿಯೇ ಇಲ್ಲದಂತಾಗಿದೆ. ಈ ಬಗ್ಗೆ ನಾನು ಸಂಘದ ಸಭೆಯಲ್ಲಿ ತಿಳಿಸಿದಾಗ ನಮ್ಮ ಸಂಘದ ಘನತೆಗೆ ಕುಂದು ಬರುತ್ತದೆ, ನಾವೇ ಸಮಸ್ಯೆ ಸರಿ ಮಾಡುತ್ತವೆಂದು ಸಂಘದ ನಿರ್ದೇಶಕರುಗಳು ಹೇಳಿದ್ದರಿಂದ ನಾನು ಪೊಲೀಸ್ ಠಾಣೆಯ ಮೆಟ್ಟಿಲೇರಲಿಲ್ಲ ಹಾಗೂ ಇವರುಗಳು ಮಾಡುವ ಆರೋಪ ಸಾಬೀತಾದರೆ ನಾನು ಶಿಕ್ಷೆ ಎದುರಿಸಲು ಸಿದ್ದವೆಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link