ಇದುವರೆಗೆ ರಸ್ತೆಯಲ್ಲಿ ಬೇಕಾಬಿಟ್ಟಿ ವಾಹನ ಚಲಾಯಿಸೋ, ಸಿಗ್ನಲ್ ಜಂಪ್ ಮಾಡೋ ವಾಹನ ಸವಾರರಿಗೆ ಮಾತ್ರ ಟ್ರಾಫಿಕ್ ಪೊಲೀಸರು ದಂಡ ವಸೂಲಿ ಮಾಡ್ತಿದ್ರು. ಇಲ್ವಾ ಗಾಡಿ ಸೀಜ್ ಮಾಡ್ತಿದ್ರು. ಆದ್ರೆ ಇನ್ಮುಂದೆ ಇದು ರಸ್ತೆ ದಾಟೋ ಪಾದಚಾರಿಗಳಿಗೂ ಫೈನ್ ಬೀಳುತ್ತೆ..
ಝೀಬ್ರಾ ಕ್ರಾಸ್, ಪಾದಚಾರಿಗಳು ರಸ್ತೆ ದಾಟಲೆಂದೇ ಇರೋ ವ್ಯವಸ್ಥೆ. ಸಾಮಾನ್ಯವಾಗಿ ಇಷ್ಟು ದಿನ ಸಂಚಾರಿ ನಿಯಮಗಳನ್ನ ಉಲ್ಲಂಘಿಸುವ ವಾಹನ ಸವಾರರಿಗೆ ಮಾತ್ರ ಸಂಚಾರಿ ಪೊಲೀಸ್ರು ಫೈನ್ ಹಾಕ್ತಿದ್ರು. ಆದ್ರೆ ಇನ್ಮುಂದೆ ಪಾದಚಾರಿಗಳಿಗೂ ಫೈನ್ ಹಾಕಲು ಬೆಂಗಳೂರು ಸಂಚಾರಿ ಪೊಲೀಸ್ರು ಪ್ಲಾನ್ ಮಾಡಿದ್ದಾರೆ.
ಝೀಬ್ರಾ ಕ್ರಾಸ್ ಬಿಟ್ಟು ಎಲ್ಲೆಂದ್ರಲ್ಲಿ ರಸ್ತೆ ಕ್ರಾಸ್ ಮಾಡುವ ಪಾದಚಾರಿಗಳಿಗೂ ಫೈನ್ ಹಾಕಲು ಬೆಂಗಳೂರು ಸಂಚಾರಿ ಪೊಲೀಸ್ರು ಸಿದ್ಧತೆ ಮಾಡಿಕೊಂಡಿದ್ದಾರೆ. ಅದು ಕೂಡ ಶೀಘ್ರದಲ್ಲೆ ಈ ರೂಲ್ಸ್ ಜಾರಿಗೆ ಬರಲಿದೆಯಂತೆ.
ಯಶಸ್ವಿಯಾಗುತ್ತಾ ಸಂಚಾರಿ ಪೊಲೀಸರ ಹೊಸ ಐಡಿಯಾ!?
ಕಳೆದ ವರ್ಷ ಝೀಬ್ರಾ ಕ್ರಾಸ್ ಬಿಟ್ಟು ಬೇರೆಡೆ ರಸ್ತೆ ದಾಟುತ್ತಿದ್ದ 69 ಪಾದಚಾರಿಗಳು ಅಪಘಾತಗಳಿಗೆ ಬಲಿಯಾಗಿದ್ದಾರೆ. ಹೀಗಾಗಿ ಸಂಚಾರಿ ಪೊಲೀಸರು ಝೀಬ್ರಾ ಕ್ರಾಸ್ ಬಿಟ್ಟು ಎಲ್ಲಂದರಲ್ಲಿ ರಸ್ತೆ ದಾಟುವ ಪಾದಚಾರಿಗಳಿಗೆ 10 ರೂಪಾಯಿ ದಂಡ ವಿಧಿಸುವ ಯೋಜನೆಯನ್ನ ಜಾರಿ ಮಾಡಲು ಮುಂದಾಗಿದ್ದಾರೆ.
ಆದ್ರೆ ನಗರದ ಎಷ್ಟೋ ರಸ್ತೆಗಳಲ್ಲಿ ಸರಿಯಾದ ಝೀಬ್ರಾ ಕ್ರಾಸಿಂಗ್ ವ್ಯವಸ್ಥೆನೇ ಇಲ್ಲ. ಪಾದಚಾರಿ ಮಾರ್ಗಗಳು ಕೂಡ ಸರಿಯಾಗಿಲ್ಲ. ಹೀಗಿರುವಾಗ ಪಾದಾಚಾರಿಗಳಿಗೆ ಫೈನ್ ಹಾಕುವ ಕಾರ್ಯ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಅನ್ನೋದು ಸದ್ಯದ ಪ್ರಶ್ನಾರ್ಥಕ ಕುತೂಹಲ.
ಸದ್ಯ ಪಾದಾಚಾರಿಗಳ ಅಪಘಾತವನ್ನು ತಡೆಯಲು ತರುತ್ತಿರುವ ಸಂಚಾರಿ ಪೊಲೀಸರ ಈ ಹೊಸ ಐಡಿಯಾ ಏನೋ ಚೆನ್ನಾಗಿದೆ. ಆದ್ರೆ ಝೀಬ್ರಾ ಕ್ರಾಸ್ಗಳೇ ಇಲ್ಲದ ಕಡೆ ಇದನ್ನ ಹೇಗೆ ಅಳವಡಿಸ್ತಾರೆ ಅನ್ನೋ ಡೌಟ್ ಇದ್ದೇ ಇದೆ. ಒಂದು ವೇಳೆ ಈ ನಿಯಮ ಜಾರಿಯಾದ್ರೆ ನೀವು ಎಲ್ಲಂದ್ರಲ್ಲಿ ರಸ್ತೆ ದಾಟಿದ್ರೆ ಫೈನ್ ಬೀಳೋದ್ ಗ್ಯಾರೆಂಟಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ