ಅರಣ್ಯ ಸಚಿವ ಉಮೇಶ ಕತ್ತಿ ಮನೆಯಲ್ಲಿ ನಡೆದ ಬೆಳಗಾವಿ ಜಿಲ್ಲೆಯ ಬಿಜೆಪಿ ಪ್ರಮುಖ ಮುಖಂಡರ ರಹಸ್ಯ ಸಭೆ ಬಗ್ಗೆ ಬಿಜೆಪಿ ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸೋಮವಾರ ಪ್ರತಿಕ್ರಿಯೆ ನೀಡಿದ್ದು, ನಾನು ಅಂತಹ ಸಭೆಗೆ ಹೋಗುವುದಿಲ್ಲ,ಪ್ರೀತಿ ಇರುವ ಸಭೆಗೆ ಮಾತ್ರ ಹೋಗುತ್ತೇನೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಹೈಕಮಾಂಡ್ ಬಹಳ ಬುದ್ದಿವಂತ ಇದೆ.ಯಾರು ಎನ್ ಮಾಡ್ತಾರೆ ಅವರಿಗೆ ಗೊತ್ತಿದೆ.ಆವತ್ತಿನ ಸಭೆಗೆ ಕುಮಟಳ್ಳಿಗೆ ಆಹ್ವಾನ ಇತ್ತು.ಅವರು ಬೆಂಗಳೂರಿನ ಲ್ಲಿ ಇದ್ದರು.ಹಾಗಾಗಿ ಹೋಗಿರಲಿಲ್ಲ ಎಂದರು.
ಸಂಪುಟ ಪುನಾರಚನೆ ಬಗ್ಗೆ ಸಿಎಂ ನಿರ್ಧಾರ ಒಪ್ಪುತ್ತೇವೆ. ಜಾರಕಿಹೊಳಿ ಬ್ರದರ್ಸ್ ಬಿಟ್ಟು ಸಭೆ ಮಾಡಿದ ವಿಚಾರ ಮಾಧ್ಯಮದ ಮೂಲಕ ಸಭೆಮಾಹಿತಿ ಬಂದಿದೆ.ಅಲ್ಲಿ ಎನು ನಡೆದಿದೆ ಅಂತ ಗೊತ್ತಿಲ್ಲದೇ ಮಾತಾಡೋದು ಸರಿಯಲ್ಲ.
ಅವರು ಪಕ್ಷದ ಸಂಘಟನೆ, ಪಕ್ಷಕ್ಕೆ ಒಳ್ಳೆಯದಾಗಲಿ ಅಂತ ಸೇರಿದ್ದರೆ? ಅವರು ಹಿರಿಯರಿದ್ದಾರೆ.ನಮ್ಮ ವರಿಷ್ಠ ರು ಬಹಳ ಬುದ್ಧಿವಂತರಿದ್ದಾರೆ.ಊಹೆ ಮೇಲೆ ನಾನು ಮಾತಾಡೋದು ತಪ್ಪಲ್ಲವೇ ಎಂದರು.
ಇವತ್ತು ನಾನು ಮತ್ತು ಬಸವನ ಗೌಡ ಪಾಟೀಲ್ ಯತ್ನಾಳ್ ನೀರಾವರಿ ಬಗ್ಗೆ ಚರ್ಚೆಗೆ ಸೇರಿದ್ದೇವು.ಸಂಪುಟ ಪುನಾರಚನೆ ಬಗ್ಗೆ ವೈಯಕ್ತಿಕ ಅಭಿಪ್ರಾಯ ಇಲ್ಲ. ಸಿಎಂ ಭೇಟಿ ಮಾಡಿ ಅಭಿವೃದ್ಧಿ ಕುರಿತು ಮಾತಾಡಿದ್ದೆ. ಕ್ಷೇತ್ರದ ಶಾಸಕನಾಗಿ ಭೇಟಿ ಮಾಡೋದು ನನ್ನ ಕರ್ತವ್ಯ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ