ಕೊರೊನಾ ಸಂಕಷ್ಟದಲ್ಲೂ ಐಷಾರಾಮಿ ಕಾರು ಖರೀದಿಸಿದ ಸಿನಿಮಾ ತಾರೆಯರಿವರು!

ಕೊರೊನಾ ಸಂಕಷ್ಟದಲ್ಲೂ ಐಷಾರಾಮಿ ಕಾರು ಖರೀದಿಸಿದ ಸಿನಿಮಾ ತಾರೆಯರಿವರು!

          2020 ರಿಂದ ಕೊರೊನಾ ಮಹಾಮಾರಿ ಜನ ಜೀವನವನ್ನು ಹಿಂಡಿ ಇಪ್ಪೆ ಮಾಡಿದೆ. ಲಾಕ್‌ಡೌನ್‌ನಿಂದಾಗಿ ಕೆಲಸಗಳು ಇಲ್ಲದೇ ಎಷ್ಟು ಜನ ಸಿಟಿ ಬಿಟ್ಟು ಊರು ಸೇರಿದ್ದಾರೆ. ಲಾಕ್‌ಡೌನ್‌ ಪರಿಣಾಮ ನಾನಾ ಬ್ಯುಸಿನೆಸ್‌ಗಳ ಮೇಲೆ ನಾನಾ ರೀತಿಯ ಪರಿಣಾಮ ಬೀರಿದೆ. ಇದಕ್ಕೆ ಸಿನಿಮಾರಂಗವೇನು ಹೊರತಲ್ಲ.

        ಲಾಕ್‌ ಡೌನ್‌ ಆಗಿ ವರ್ಷಗಳ ಕಾಲ ಸರಿಯಾಗಿ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಇಲ್ಲದೇ, ಸಿನಿಮಾ ರಿಲೀಸ್ ಮಾಡಲಾಗಿದೆ ಸಿನಿಮಾ ಮಂದಿ ಒದ್ದಾಡಿದ್ದಾರೆ. ಈಗಲೂ ಕೂಡ ಸಿನಿಮಾಗಳ ರಿಲೀಸ್‌ಗೆ ಸರಿಯಾದ ದಿನಾಂಕ ಸಿಗದೇ ಹಲವು ಸಿನಿಮಾತಂಡಗಳು ನಲುಗಿ ಹೋಗಿವೆ.

2020, 2021 ರಲ್ಲಿ ಬಹುತೇಕ ಸಿನಿಮಾ ಶೂಟಿಂಗ್‌ಗಳು ನಿಂತು ಬಿಟ್ಟಿದ್ದವು. ಹಲವು ತಿಂಗಳುಗಳು ಸಿನಿಮಾರಂಗದಲ್ಲಿ ಯಾವುದೇ ಚಟುವಟಿಕೆಗಳು ಇರಲಿಲ್ಲ. ಆದರೆ ಅಚ್ಚರಿಯ ವಿಚಾರ ಅಂದರೆ ಇಂತಹ ಪರಿಸ್ಥಿತಿಯಲ್ಲೂ ಕೂಡ ಕನ್ನಡದ ಹಲವು ತಾರೆಯರು ಐಷಾರಾಮಿ ಕಾರುಗಳನ್ನು ಕೊಂಡುಕೊಂಡಿದ್ದಾರೆ. ಜೊತೆಗೆ ಈ ಬಗ್ಗೆ ದೊಡ್ಡದಾಗಿ ಸುದ್ದಿಯಾಗಿ ಸದ್ದು ಮಾಡಿದ್ದಾರೆ.

ಕಾರುಣ್ಯ ರಾಮ್ ಖರೀದಿಸಿದರು BMW 3!

           ಇತ್ತೀಚೆಗೆ ನಟಿ ಕಾರುಣ್ಯ ರಾಮ್‌ ಅವರು ಅಷ್ಟಾಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಹಲವು ಸಿನಿಮಾಗಳಲ್ಲಿ ಕೆಲವೊಂದು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಕಾರುಣ್ಯ ಎಲ್ಲಿ ಎಂದು ಹುಡುಕುತ್ತಿದ್ದ ಅಭಿಮಾನಿಗಳ ಮುಂದೆ ಅವರು ಪ್ರತ್ಯಕ್ಷ ಆಗಿದ್ದು ತಮ್ಮ ಹೊಸ ಕಾರಿನೊಂದಿಗೆ.

ಕಾರುಣ್ಯ ರಾಮ್‌ ಅವರು BMW 3 ಸೀರೀಸ್ ಕಾರನ್ನು ಖರೀದಿ ಮಾಡಿದ್ದಾರೆ. ಈ ಕಾರಿನ ಬೆಲೆ ಸುಮಾರು 55 ಲಕ್ಷ ರೂ. ಕಾರುಣ್ಯ ರಾಮ್‌ ಅವರು ಈ ಕಾರನ್ನು 2021 ಏಪ್ರಿಲ್‌ನಲ್ಲಿ ಖರೀದಿ ಮಾಡಿದ್ದಾರೆ.

ಜೊತೆ ಜೊತೆಯಲಿ ಧಾರಾವಾಹಿಯ ಮೇಘಾ ಶೆಟ್ಟಿಯ ಐಷಾರಾಮಿ ಕಾರು!

ಇನ್ನು 2021ರಲ್ಲೇ ಐಷಾರಾಮಿ ಕಾರು ಖರೀದಿ ಮಾಡಿದ ನಟಿಯರ ಸಾಲಿಗೆ, ಜೊತೆಗೆ ಜೊತೆಯಲಿ ಧಾರಾವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ಕೂಡ ಸೇರಿಕೊಳ್ಳುತ್ತಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಮೇಘಾ ಶೆಟ್ಟಿ BMW ಕಾರು ಖರೀದಿ ಮಾಡಿದ್ದಾರೆ.

ಈ ಐಷಾರಾಮಿ ಕಾರು 50 ಲಕ್ಷಕ್ಕೂ ಅಧಿಕ ಬೆಲೆಬಾಳುತ್ತದೆ. ಈ ವಿಚಾರವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮೇಘಾ ಅವರು ಹಂಚಿಕೊಂಡಿದ್ದರು. ಕಾರಿನ ಫೋಟೊ ಹಾಕಿ ವೆಲ್ಕಂ ಹೋಮ್ ಎಂದು ಬರೆದುಕೊಂಡಿದ್ದರು.

ಶಮಂತ್ ಬ್ರೋ ಗೌಡ ಬಳಿ BMW 5!

ಇನ್ನು ಈ ವರ್ಷ BMW ಐಷಾರಾಮಿ ಕಾರು ಕೊಂಡುಕೊಂಡವರಲ್ಲಿ ಶಮಂತ್ ಬ್ರೋ ಗೌಡ ಅವರು ಹೆಚ್ಚು ಗಮನ ಸೆಳೆದಿದ್ದಾರೆ. ರಿಯಾಲಿಟಿ ಶೋ ಕಾರ್ಯಕ್ರಮ ಮುಗಿದ ಬಳಿಕ ಶಮಂತ್ ಅವರು ಸಿನಿಮಾಗಳಲ್ಲಿ, ಬೇರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದು ಅತಿ ಅಪರೂಪ.

ಆದರೆ ಅವರು ಕೂಡ ತಮ್ಮ ಐಷಾರಾಮಿ ಕಾರಿನೊಂದಿಗೆ ಪ್ರತ್ಯಕ್ಷ ಆಗಿದ್ದಾರೆ. ಶಮಂತ್ BMW 5 ಸೀರೀಸ್‌ನ ಕಾರು ಖರೀದಿಸಿದ್ದಾರೆ. ಈ ಕಾರಿನ ಬೆಲೆ 55 ಲಕ್ಷ ರೂ. ಕಾರು ಖರೀದಿಯ ಬಳಿಕ ಅವರು ಸುದೀಪ್‌ ಅವರೊಂದಿಗೆ ರೈಡ್‌ ಮಾಡಿಸಿ, ಆಟೋಗ್ರಾಫ್ ಪಡೆದಿದ್ದಾರೆ.

ರವಿವರ್ಮಾ ಖರೀಸಿದರು ಮರ್ಸಿಡೀಸ್ ಬೆಂಜ್!

              ಈ ವರ್ಷ ಐಷಾರಾಮಿ ಕಾರು ಖರೀದಿಸಿದ ಮತ್ತೊಬ್ಬ ಸಿನಿಮಾ ವ್ಯಕ್ತಿ ಅಂದರೆ ಅದು ಫೈಟ್ ಮಾಸ್ಟರ್ ರವಿ ವರ್ಮಾ. ರವಿ ವರ್ಮಾ ಅವರು ಹಲವು ವರ್ಷಗಳಿಂದ ಸಿನಿಮಾರಂಗದಲ್ಲಿ ಸಕ್ರಿಯವಾಗಿದ್ದಾರೆ. ಅವರು ನಾನಾ ಚಿತ್ರರಂಗಳಲ್ಲಿ ಕೆಲಸ ಮಾಡಿದ್ದಾರೆ. ಈಗ ಅವರ ಕನಸು ಸಾಕಾರಗೊಂಡಿದೆ.

ಈ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡು, ತಾವು ಕಾರು ಖರೀದಿಸಿದ ಬಗ್ಗೆ ಹಂಚಿಕೊಂಡಿದ್ದರು. ರವಿ ವರ್ಮಾ ‘ಮರ್ಸಿಡೀಸ್ ಬೆಂಜ್ ಜಿಎಲ್‌ಎಸ್‌4 400 ಡಿ’ ಕಾರನ್ನು ಖರೀದಿಸಿದ್ದಾರೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ 1.15 ಕೋಟಿ ಇದೆ. ವಾಹನ ನೊಂದಣಿ, ವಿಮೆ, ಇತರೆ ಶುಲ್ಕಗಳನ್ನು ಸೇರಿಸಿದರೆ ಕಾರಿನ ಬೆಲೆ 1.50 ಕೋಟಿ ದಾಟುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link