
ಯಾವುದೇ ಹೊಸ ಧಾರಾವಾಹಿ ಆರಂಭ ಆದಾಗ ಅದರ ಬಗ್ಗೆ ವೀಕ್ಷಕರು ಆಸಕ್ತಿ ತೋರಿಸುವುದು ಸಹಜ. ಹಾಗೆಯೇ ‘ಪುಟ್ಟಕ್ಕನ ಮಕ್ಕಳು’ ಕೂಡ ಜನಮೆಚ್ಚುಗೆ ಪಡೆದುಕೊಂಡಿದೆ. ಈ ಸೀರಿಯಲ್ ಗಿಟ್ಟಿಸಿಕೊಂಡಿರುವ ಟಿಆರ್ ಪಿ ಕಂಡು ಅನೇಕರು ಅಚ್ಚರಿ ಪಟ್ಟಿದ್ದಾರೆ.
ಬರೋಬ್ಬರಿ 13.5 ಟಿವಿಆರ್ ಪಡೆದುಕೊಂಡಿರುವುದು ಈ ಧಾರಾವಾಹಿಯ ಹೆಚ್ಚುಗಾರಿಕೆ. ಕಿರುತೆರೆಗೆ ಕಮ್ಬ್ಯಾಕ್ ಮಾಡಿರುವ ಉಮಾಶ್ರೀ ಅವರಿಗೆ ಈ ಮೂಲಕ ಅಭೂತಪೂರ್ವ ಸ್ವಾಗತ ಸಿಕ್ಕಂತಾಗಿದೆ.
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಉಮಾಶ್ರೀ ಜತೆ ಮಂಜುಭಾಷಿಣಿ, ರಮೇಶ್ ಪಂಡಿತ್, ಕಾರ್ತಿಕ್ ಮಹೇಶ್, ಹಂಸ, ಸಾರಿಕಾ ರಾಜ್, ರೇಣುಕಾ, ಗುರು ಹೆಗಡೆ, ಸುನಂದಾ ಹೊಸಪೇಟೆ, ಹೊಸ ಕಲಾವಿದರಾದ ಸಂಜನಾ, ಅಕ್ಷರ, ಶಿಲ್ಪಾ, ನಿಶಾ, ಧನುಷ್ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್ ಮತ್ತು ಗಜೇಂದ್ರ ಅಭಿನಯಿಸಿದ್ದಾರೆ.
ಈ ಧಾರಾವಾಹಿಯ ನಿರ್ಮಾಣದ ಹೊಣೆಯನ್ನು ಜೆಎಸ್ ಪ್ರೊಡಕ್ಷನ್ಸ್ ಸಂಸ್ಥೆ ಹೊತ್ತಿದೆ. ಸಹ ನಿರ್ಮಾಪಕರಾಗಿ ಪ್ರದೀಪ್ ಆಜ್ರಿ ಮತ್ತು ಪರೀಕ್ಷಿತ್ ಎಂ.ಎಸ್. ಕೈ ಜೋಡಿಸಿದ್ದಾರೆ. ಜೀ ಕನ್ನಡ ತಂಡದ ಕಥೆಗೆ ಸತ್ಯಕಿ ಚಿತ್ರಕತೆ ಮತ್ತು ಸಂಭಾಷಣೆ ಬರೆದಿದ್ದಾರೆ.
ಇದರ ಶೀರ್ಷಿಕೆ ಗೀತೆ ಕೂಡ ಫೇಮಸ್ ಆಗಿದೆ. ಹರ್ಷಪ್ರಿಯ ಅವರ ಸಾಹಿತ್ಯಕ್ಕೆ, ಖ್ಯಾತ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ರಾಗ ಸಂಯೋಜನೆ ಮಾಡಿದ್ದಾರೆ. ಈ ಹಾಡಿಗೆ ಪಂಚಮ ಜೀವ ಧ್ವನಿ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
