ಜಮೀನು ಖಾತೆ ಮಾಡಿಕೊಡೋದಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟು, ಗ್ರಾಮ ಲೆಕ್ಕಾಧಿಕಾರಿ ( Village Accountant ) ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದಂತ ಸಂದರ್ಭದಲ್ಲಿಯೇ ಎಸಿಬಿ ದಾಳಿ ( ACB Raid ) ನಡೆಸಿ ಬಂಧಿಸಿರೋ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಮಾಡದಕೆರೆಯ ಲಕ್ಕಿಹಳ್ಳಿ ಗ್ರಾಮ ಪಂಚಾಯ್ತಿಯ ಗ್ರಾಮ ಲೆಕ್ಕಿಗ ವಿಜಯ್ ಸಿದ್ಧು ಬಣಕಾರ, ಜಮೀನು ಖಾತೆ ಮಾಡಿಕೊಡೋದಕ್ಕೆ ರೈತ ವಿಜಯ್ ಕುಮಾರ್ ಎಂಬುವರಿಂದ 5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ಎಸಿಬಿಗೆ ದೂರು ನೀಡಿದ್ದಂತ ರೈತ ವಿಜಯ್ ಕುಮಾರ್, ಇಂದು ಲಕ್ಕಿಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಗ್ರಾಮ ಲೆಕ್ಕಿಗ ಸಿದ್ಧು ಬಣಕಾರ್ ಗೆ ಹಣ ನೀಡೋದಾಗಿ ತಿಳಿಸಿದ್ದರು. ಲಂಚದ ಹಣವನ್ನು ಪಡೆಯೋದಕ್ಕೆ ಯಾರಿಗೂ ಗೊತ್ತಾಗದಂತೆ ವಿಎ ಪಂಚೆಯುಟ್ಟ ಲಕ್ಕಿಹಳ್ಳಿ ಗ್ರಾಮ ಪಂಚಾಯ್ತಿಗೆ ಆಗಮಿಸಿದ್ದರು.
ರೈತ ವಿಜಯ್ ಕುಮಾರ್ ತಿಳಿಸಿದಂತೆ ಲಂಚದ ಹಣವಾಗಿ ರೂ.5 ಸಾವಿರವನ್ನು ವಿಎ ಸಿದ್ಧು ಬಣಕಾರ್ ಗೆ ನೀಡುವಂತ ಸಂದರ್ಭದಲ್ಲಿ ಎಸಿಬಿ ಎಸ್‌ಐ ಪ್ರವೀಣ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ಮಾಡಿ, ರೆಡ್ ಹ್ಯಾಂಡ್ ಆಗೇ ಹಿಡಿದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವಂತ ಹೊಸದುರ್ಗ ಎಸಿಬಿ ಅಧಿಕಾರಿಗಳು, ತನಿಖೆ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ