ಬಲವಂತವಾಗಿ ಬಟ್ಟೆ ಬಿಚ್ಚಿ ನಗ್ನ ವಿಡಿಯೋ ರೆಕಾರ್ಡ್.! ಸೋಶಿಯಲ್​ ಮೀಡಿಯಾದಲ್ಲಿ ನಗ್ನ ವಿಡಿಯೋ ಹರಿಬಿಡುವುದಾಗಿ ಬ್ಲಾಕ್​​ಮೇಲ್.!

ಶಿರಸಿ (ಉತ್ತರ ಕನ್ನಡ):ಉಪನ್ಯಾಸಕನ ಹುದ್ದೆ ಕೊಡಿಸ್ತೇನೆಂದು ಯುವಕನ ಬಟ್ಟೆ ಬಿಚ್ಚಿ ಯುವತಿ ಜತೆ ಮಲಗಿಸಿದರು! ಶಿರಸಿಯಲ್ಲೊಂದು ಭಯಾನಕ ಕೃತ್ಯ

   ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ ಮೂವರನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪೊಲೀಸರು ಬಂಧಿಸಿದ್ದಾರೆ.

ಅಜಿತ್ ಶ್ರೀಕಾಂತ ನಾಡಿಗ್ (25), ಧನುಷ್ಯ ದಿಲೀಪ್ ಕುಮಾರ ಶೆಟ್ಟಿ ಶಿರಸಿ (25) ಹಾಗೂ ಪದ್ಮಜಾ ಡಿ.ಎನ್.

 ಶಿವಮೊಗ್ಗ (50) ಬಂಧಿತರು.

ಕಾಯಂ ಉಪನ್ಯಾಸಕ ಹುದ್ದೆ ಕೊಡಿಸೋದಾಗಿ ಯುವಕನ್ನು ಶಿವಮೊಗ್ಗಕ್ಕೆ ಕರೆಸಿಕೊಂಡಿದ್ದ ಇವರು, ಕೋಣೆಯೊಂದರಲ್ಲಿ ನಗ್ನಗೊಳಿಸಿ ಮಹಿಳೆಯ ಜೊತೆ ಲೈಂಗಿಕ ಕ್ರಿಯೆ ನಡೆಸುವ ವಿಡಿಯೋ ಚಿತ್ರಿಕರಿಸಿ ಬ್ಲ್ಯಾಕ್ ಮೇಲ್ ಮಾಡಿದ್ದರು.

ನಂತರ ವಿಡಿಯೋ ತೋರಿಸಿ 15 ಲಕ್ಷ ನೀಡುವಂತೆ ಒತ್ತಾಯಿಸಿದ್ದರು. ಹಣ ನೀಡದಿದ್ದರೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡುವ ಬೆದರಿಕೆ ಹಾಕಿದ್ದರು. ಈ ಸಂಬಂಧ ದೂರು ದಾಖಲಾಗಿತ್ತು.

ಶಿರಸಿ ಡಿ.ಎಸ್.ಪಿ. ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿ.ಪಿ.ಐ. ರಾಮಚಂದ್ರ ನಾಯಕ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ಇನ್ನೋರ್ವ ಆರೋಪಿಗಾಗಿ ಶೋಧ ಕಾರ್ಯ ನಡೆದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link