ವಿಜಯವಾಡ:
ಆಂಧ್ರ ಪ್ರದೇಶದ ವಿಶಾಖಪಟ್ಟಣ ಮೂಲದ ಯುವಕನೊಬ್ಬ ಟೆಕ್ ದೈತ್ಯ ಗೂಗಲ್ ಕಂಪನಿಯಲ್ಲಿ ಸಾಫ್ಟ್ವೇರ್ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಗೂಗಲ್ ಇಂಡಿಯಾದ ಬೆಂಗಳೂರು ಕಂಪನಿಯಲ್ಲಿ ಕೆಲಸ ಪಡೆದುಕೊಂಡಿದ್ದಾರೆ.
ಯುವಕನ ಹೆಸರು ಜಯಂತಿ ವಿಷ್ಣು ಯಶ್
ಈತ ವಾರ್ಷಿಕ 8.50 ಲಕ್ಷ ರೂ. ಸಂಬಳದೊಂದಿಗೆ ಬಹುರಾಷ್ಟ್ರೀಯ ಆಕ್ಸೆಂಚರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಗೂಗಲ್ನಲ್ಲಿ ವಾರ್ಷಿಕ 47.50 ಲಕ್ಷ ರೂ. ಸಂಬಳದ ಉದ್ಯೋಗ ಗಿಟ್ಟಿಸಿದ್ದಾರೆ. ಒಂದೇ ಬಾರಿಗೆ ಬರೋಬ್ಬರಿ 40 ಲಕ್ಷ ರೂ. ಹೆಚ್ಚಿನ ಸಂಬಳದ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.
ಯಶ್, ಹಿಮಾಚಲ ಪ್ರದೇಶದ ಹಮೀರ್ಪುರದ ಎನ್ಐಟಿಯ ಇಸಿಇಯಲ್ಲಿ ಇಂಜಿನಿಯರಿಂಗ್ ಪೂರ್ಣಗೊಳಿಸಿದರು. ಕೋರ್ಸ್ ಮುಗಿದ ನಂತರ ಅವರು ಮೊದಲ ಬಾರಿಗೆ ಆಕ್ಸೆಂಚರ್ನಲ್ಲಿ ಸ್ಥಾನ ಪಡೆದರು. ಇತ್ತೀಚೆಗಷ್ಟೇ ಗೂಗಲ್ನಲ್ಲಿ ನಡೆದ ಸಂದರ್ಶನಕ್ಕೆ ಹಾಜರಾಗಿ ಲೆವೆಲ್-4 ಸೀನಿಯರ್ ಇಂಜಿನಿಯರ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಮಾರ್ಚ್ 7 ರಂದು ಬೆಂಗಳೂರಿನ ಗೂಗಲ್ ಕಂಪನಿಯಲ್ಲಿ ಯಶ್ ಕೆಲಸ ಶುರು ಮಾಡಲಿದ್ದಾರೆ.
ಯಶ್ ಅವರ ತಂದೆ ಸತ್ಯನಾರಾಯಣ ಮೂರ್ತಿ ನಿವೃತ್ತ ಉದ್ಯೋಗಿ ಮತ್ತು ಅವರ ತಾಯಿ ವೇದವಲ್ಲಿ ಗೃಹಿಣಿ ಮತ್ತು ಅವರು ವಿಶಾಖಪಟ್ಟಣಂ ಸಮೀಪದ ನರಸೀಪಟ್ಟಣಂ ಪಟ್ಟಣದ ವೇಲಮಾ ವೀಧಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಯಶ್ಗೆ ಗೂಗಲ್ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ಅವರ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
