ತುಮಕೂರು:
ಕೈಗೆಟಕುತ್ತಿವೆ ತರಕಾರಿ | ಚಿಕನ್ ಬೆಲೆ ಯಥಾಸ್ಥಿತಿ | ಮೊಟ್ಟೆ ಕೊಂಚ ಏರಿಕೆ
ಸದ್ಯ ಸೊಪ್ಪು-ತರಕಾರಿ ಬೆಲೆಗಳು ಕೈಗೆ ಎಟಕುತ್ತಿದ್ದು ಗ್ರಾಹಕರು ಕಾಯಿಪಲ್ಲೆಗಳನ್ನು ಹೇರಳವಾಗಿಯೆ ಕೊಳ್ಳುತ್ತಿದ್ದಾರೆ. ಈ ವಾರ ಕ್ಯಾರೆಟ್, ನುಗ್ಗೆಕಾಯಿ, ಹಸಿ ಮೆಣಸಿನಕಾಯಿ ದರಗಳು ಕೊಂಚ ಏರಿಕೆಯಾಗಿದ್ದು ಜನರು ಈ ತರಕಾರಿಗಳನ್ನು ಕೊಳ್ಳಲು ಹಿಂದೇಟು ಹಾಜುತ್ತಿದ್ದಾರೆ. ದಿನೆ ದಿನೆ ಬಿಸಿಲು ಏರಿಕೆಯಾಗುತ್ತಿರುವುದರಿಂದ ಗ್ರಾಹಕರು ದೇಹಕ್ಕೆ ತಂಪು ನೀಡುವ ಸೊಪ್ಪುಗಳ ಮೊರೆ ಹೋಗಿದ್ದಾರೆ.
ಸದ್ಯ ಎಲ್ಲಾ ಸೊಪ್ಪುಗಳ ಬೆಲೆ ಇಳಿದಿದ್ದು ಸೊಪ್ಪಿಗೆ ಡಿಮ್ಯಾಂಡ್ ಹೆಚ್ಚಿದೆ. ಬಿಸಿಲಿನ ಕಾರಣದಿಂದ ಜನರು ತಂಪು ಪಾನೀಯಗಳ ಮೊರೆ ಹೋಗಿದ್ದು ಹಣ್ಣುಗಳಿಗೆ ಬೇಡಿಕೆ ಹೆಚ್ಚಿ ದರವೂ ತುಟ್ಟಿಯಾಗಿದೆ. ಮಟನ್, ಚಿಕನ್ ಧಾರಣೆ ಯಥಾಸ್ಥಿತಿ ಮುಂದುವರಿದಿದ್ದು ಮೊಟ್ಟೆ ಧಾರಣೆ ಕೊಂಚ ಇಳಿಕೆಯಾಗಿದೆ.
ಇಳಿಯದ ಮೆಣಸಿನಕಾಯಿ :
ಕಳೆದ ವಾರ 80 ರೂ. ಇದ್ದ ಹಸಿ ಮೆಣಸಿನಕಾಯಿ ಬೆಲೆ ಈ ವಾರ 10 ರೂ. ಇಳಿದು ಕೆಜಿಗೆ 70 ರೂ. ಧಾರಣೆ ಕುಸಿತ ಕಂಡಿದ್ದರೂ ಒಟ್ಟಾರೇ ಮೊದಲಿನ ಬೆಲೆಗೆ ಧಾರಣೆ ಇಳಿದಿಲ್ಲ. ಪಟ್ಲಿಕಾಯಿ-30 ರೂ., ಹೀರೆಕಾಯಿ-40 ರೂ., ಬೆಂಡೆಕಾಯಿ-50 ರೂ., ಗೋರಿಕಾಯಿ-40 ರೂ. ಅವರೆಕಾಯಿ 40-50 ರೂ., ಹಸಿ ಬಟಾಣಿ 60-150 ರೂ.,
ಹಾಗೂ ನಾಟಿ ಕೊತ್ತಂಬರಿ-30 ರೂ., ಫಾರಮ್ ಕೊತ್ತಂಬರಿ-20 ರೂ., ಸಬ್ಸಿಗೆ-40 ರೂ., ದಂಟು-40 ರೂ., ಪಾಲಕ್-40 ರೂ., ಪುದೀನಾ-30 ರೂ., ಚಕ್ಕೊತ-40 ರೂ., ಮೆಂತ್ಯೆ ಸೊಪ್ಪು-40 ರೂ. ನಂತೆ ಮಾರಾಟವಾಗುತ್ತಿವೆ. ಮಾರುಕಟ್ಟೆಗೆ ಹೇರಳ ಸೊಪ್ಪು ಬರುತ್ತಿದೆ, ಬಿಸಿಲಿನ ಕಾರಣದಿಂದ ಸೊಪ್ಪಿಗೆ ಹೆಚ್ಚು ಬೇಡಿಕೆ ಇದ್ದರೂ ಸಹ ಬೆಲೆಗಳು ಏರಿಲ್ಲ ಎನ್ನುತ್ತಾರೆ ಅಂತರಸನಹಳ್ಳಿ ಮಾರುಕಟ್ಟೆಯ ತರಕಾರಿ ಸಗಟು ವ್ಯಾಪಾರಿ ವಾಸು.
ಕರಬೂಜ ದುಬಾರಿ :
ಬಿಸಿಲಿನ ಝಳಕ್ಕೆ ಗ್ರಾಹಕ ಹಣ್ಣಿನ ಪಾನೀಯದ ಮೊರೆ ಹೋಗಿದ್ದು, ಹಣ್ಣುಗಳಿಗೆ ಬೇಡಿಕೆ ಹಚ್ಚಿ ಬೆಲೆಯೂ ಏರಿದೆ. ಸೇಬು, ದಾಳಿಂಬೆ, ಮೋಸಂಬಿ, ಕಿತ್ತಳೆ, ಕಲ್ಲಂಗಡಿ, ಕರಬೂಜ ಬೆಲೆಗಳು ಈ ವಾರ ಏರಿಕೆ ಕಂಡಿವೆ. ಸದ್ಯ ದ್ರಾಕ್ಷಿ ಸೀಸನ್ ಇದ್ದು, ಹಸಿರು ಬಣ್ಣದ ಸೀಡ್ಲೆಸ್ ದ್ರಾಕ್ಷಿ ಕೆಜಿ ರೂ. 80 ಕ್ಕೆ ಮಾರಾಟವಾಗುತ್ತಿದೆ.
ಪಚ್ಚೆ ಬಾಳೆ, ಪುಟ್ಟ ಬಾಳೆ ಬೆಲೆ ಯಥಾಸ್ಥಿತಿ ಇದೆ. ಕಳೆದ ವಾರ 40 ರೂ. ಇದ್ದ ಕರಬೂಜ ಬೆಲೆ ಕೆಜಿಗೆ ಈ ವಾರ 50-60 ರೂ.ಗೆ ಏರಿದೆ. ಸ್ಥಳೀಯವಾಗಿ ಕರಬೂಜ ಬರುತ್ತಿಲ್ಲ, ಸದ್ಯ ಆಂಧ್ರದಿಂದ ಮಾಲು ಬರುತ್ತಿದ್ದು, ಸದ್ಯ ಬೇಸಿಗೆ ಕಾರಣದಿಂದ ಜ್ಯಾಸ್ ಅಂಗಡಿಯವರು ಹೆಚ್ಚು ಖರೀದಿಸುವುದರಿಂದ ಕರಬೂಜ ಬೆಲೆ ಹೆಚ್ಚಿದೆ ಎನ್ನುತ್ತಾರೆ ಅಂತರಸನಹಳ್ಳಿ ಮಾರುಕಟ್ಟೆಯ ಟಿಕೆಪಿ ಫ್ರೂಟ್ಸ್ ಸ್ಟಾಲ್ನ ಮಾಲೀಕ ವೆಂಕಟೇಶ್.
ಕೋಳಿ ಯಥಾಸ್ಥಿತಿ : ಮೊಟ್ಟೆ ಏರಿಕೆ :
ಕೋಳಿ ಮಾಂಸದ ಬೆಲೆ ಈ ವಾರ ಯಥಾಸ್ಥಿತಿ ಇದ್ದು, ಫಾರಂ ಕೋಳಿ ಮಾಂಸದ ಬೆಲೆ ಕೆ.ಜಿ.ಗೆ 120 ರೂ. ಹಾಗೂ ಬ್ರಾಯ್ಲರ್ ಕೋಳಿ ಮಾಂಸ ಕೆ.ಜಿ.ಗೆ 130 ರೂ. ದರದಲ್ಲಿ ಮಾರಾಟವಾಗುತ್ತಿದೆ. ಮೊಟ್ಟೆ 1 ಡಜನ್ ಗೆ 62 ರೂ. ನಿಂದ 65 ರೂ.ಗೆ ಏರಿದೆ.
ಸದ್ಯ ಬಿಸಿಲು ಇರುವುದರಿಂದ ಜನರು ಕೋಳಿ ಮಾಂಸ ಹೀಟ್ ಎಂದು ಖರೀದಿಗೆ ಆಸಕ್ತಿ ತೋರುತ್ತಿಲ್ಲ ಹಾಗಾಗಿ ದರ ಏರದೇ ಯಥಾಸ್ಥಿತಿ ಇದೆ. ಮುಂದಿನ ದಿನಗಳಲ್ಲಿ ಊರ ಭಾನಗಳು ಇರುವುದರಿಂದ ಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚಿ ಧಾರಣೆ ಏರಿಕೆ ಆದರೂ ಆಗಬಹುದು ಎನ್ನುತ್ತಾರೆ ಹುಳಿಯಾರಿನ ಕೋಳಿ ವರ್ತಕ ಕರವೇ ಶ್ರೀನಿವಾಸ್.
ಹಣ್ಣುಗಳ ಧಾರಣೆ
(ಬೆಲೆ ಕೆ.ಜಿ ರೂ.)
(ಅಂತರಸನಹಳ್ಳಿ ಮಾರುಕÀಟ್ಟೆ)
ಸೇಬು 120-150
ದಾಳಿಂಬೆ 160-180
ಮೊಸಂಬಿ 60-70
ನಾಟಿ ಕಿತ್ತಳೆ 60-80
ಸಪೋಟ 40-60
ಏಲಕ್ಕಿ ಬಾಳೆ 40-50
ಪಚ್ಚ ಬಾಳೆ 20
ಪಪ್ಪಾಯ 30
ಕಲ್ಲಂಗಡಿ 30
ಕರಬೂಜ 50-60
ಸೀಬೆ 60
ಪೈನಾಪಲ್ 50
ದ್ರಾಕ್ಷಿ 80
ತರಕಾರಿ (ಬೆಲೆ ಕೆ.ಜಿ ರೂ.)
(ಅಂತರಸನಹಳ್ಳಿ ಮಾರುಕಟ್ಟೆ)
ಟೊಮೆಟೊ 05-20
ಈರುಳ್ಳಿ 28-35
ಆಲೂಗಡ್ಡೆ 25-30
ಬೀನ್ಸ್ 30
ಕ್ಯಾರೆಟ್ 60
ಬೀಟ್ರೂಟ್ 35
ಮೂಲಂಗಿ 10
ಗಡ್ಡೆಕೋಸು 20-30
ನುಗ್ಗೆಕಾಯಿ 250
ಬದನೆಕಾಯಿ 20-30
ಎಲೆಕೋಸು 40
ಹೂಕೋಸು 25-30
ಹಸಿ ಮೆಣಸಿನಕಾಯಿ 70
ಕ್ಯಾಪ್ಸಿಕಂ 50
ಮೊಟ್ಟೆ/ಮಾಂಸ ಬೆಲೆ (ಕೆ.ಜಿಗೆ)
ಬ್ರಾಯ್ಲರ್ 130
ಫಾರಂ 120
ನಾಟಿ ಕೋಳಿ ಮಾಂಸ 250-300
ಮಟನ್ 600-650
ಮೀನು (ಸಾಮಾನ್ಯ) 120-150
ಮೊಟ್ಟೆ
(1 ಡಜನ್) 65
ಕೊಬ್ಬರಿ ಧಾರಣೆ
(ತಿಪಟೂರು)
ಪ್ರತಿ ಕ್ವಿಂಟಾಲ್
ಕನಿಷ್ಠ 16,500
ಗರಿಷ್ಠ 17,707
ಮಾದರಿ 16800
ಒಟ್ಟು ಆವಕ–1351.49 ಕ್ವಿಂಟಾಲ್
(3143 ಚೀಲ)
-ಚಿದಾನಂದ್ ಹುಳಿಯಾರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ