ರಾಜ್ಯಾಧ್ಯಂತ ತಾರಕ್ಕೇರಿದೆ ‘ಹಿಜಾಬ್-ಕೇಸರಿ ಶಾಲು’ ವಿವಾದ: ಹಲವೆಡೆ ಲಾಠಿ ಚಾರ್ಜ್, ಕಾಲೇಜುಗಳಿಗೆ ‘ರಜೆ ಘೋಷಣೆ’

ಬೆಂಗಳೂರು:

ರಾಜ್ಯಾಧ್ಯಂತ ಇಂದು ಮತ್ತೆ ಹಿಜಾಬ್  ಹಾಗೂ ಕೇಸರಿ ಶಾಲು ವಿವಾದ ತಾರಕಕ್ಕೇರಿದೆ. ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಕಾಲೇಜುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಅಲ್ಲದೇ ಕೆಲ ಕಡೆಯಲ್ಲಿ ಶಾಲಾ ಬಸ್ ಮೇಲೂ ಕಲ್ಲು ತೂರಾಟ ನಡೆಸಿರೋ ಘಟನೆ ನಡೆದಿದೆ. ಹೀಗಾಗಿ ಅನೇಕ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ.

ಇಂದು ಉಡುಪಿ ಜಿಲ್ಲೆಯ ಎಂಜಿಎಂ ಕಾಲೇಜಿನಲ್ಲಿ ಹಿಜಾಬ್ ವಿರೋಧಿಸಿ ವಿದ್ಯಾರ್ಥಿನಿಗಳು ಕೇಸರಿ ಶಾಲು ಜೊತೆಗೆ, ಕೇಸರಿ ಪೇಟ ಧರಿಸಿ ಬಂದು ಪ್ರತಿಭಟನೆ ನಡೆಸಿದರು. ಒಂದೇ ಮಾತರಂ, ಜೈ ಶ್ರೀರಾಂ ಘೋಷಣೆ ಕೂಡ ಕೂಗಿದರು. ವಿದ್ಯಾರ್ಥಿಗಳ ಪ್ರತಿಭಟನೆಯಿಂದಾಗಿ ಪ್ರಾಂಶುಪಾಲರು ಮುಂದಿನ ಆದೇಶದವರೆಗೆ ಕಾಲೇಜಿಗೆ ರಜೆಯನ್ನು ಘೋಷಿಸಿ, ವಿದ್ಯಾರ್ಥಿಗಳನ್ನು ಮನಗೆ ಹೋಗುವಂತೆ ಸೂಚಿಸಿದರು.

ಇತ್ತ ಶಿವಮೊಗ್ಗದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದು, ಹಿಜಾಬ್ ಗೆ ವಿರೋಧ ವ್ಯಕ್ತ ಪಡಿಸಿದರು. ಹಿಜಾಬ್ ಧರಿಸಿ ಬಂದಂತ ವಿದ್ಯಾರ್ಥಿನಿಯರು, ಈ ಹಿಂದಿನಿಂದಲೂ ನಾವು ಧರಿಸಿಕೊಂಡು ಬರ್ತಾ ಇದ್ದೇವೆ. ಈಗೇನು ಹೊಸದೇನಲ್ಲ. ಅವರು ಧರಿಸ್ತಾ ಇರೋ ಕೇಸರಿ ಶಾಲೇ ಹೊಸದು ಅಂತ ಕಿಡಿಕಾರಿದರು.

ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ ತಾರಕಕ್ಕೇರಿ ಕಾಲೇಜಿನ ಆವರಣದಲ್ಲಿನ ಧ್ವಜ ಸ್ತಂಬಕ್ಕೆ ಕೇಸರಿ ಭಾವುಟವನ್ನು ಹಾರಿಸಿದಾಗ, ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಲಾಠಿ ಚಾರ್ಜ್ ಕೂಡ ನಡೆಸುವಂತೆ ಆಯ್ತು. ಈ ವೇಳೆ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದ ಘಟನೆಯೂ ನಡೆದಿದೆ.

ಬಾಗಲಕೋಟೆಯ ಸಂಗಮೇಶ್ವರ ಕಾಲೇಜಿನಲ್ಲಿ ಹಿಜಾಬ್ ವಿರೋಧಿಸಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಕಾಲೇಜಿನಲ್ಲಿ ಅವಕಾಶ ನೀಡದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪ್ರಾಂಶುಪಾಲರ ನಡುವೆ ವಾಗ್ವಾದ ಕೂಡ ನಡೆದಿದೆ. ಈ ವೇಳೆ ತಾರಕ್ಕೇರಿದ ಕಾರಣ ಕಲ್ಲು ತೂರಾಟ ನಡೆದಿರೋದಾಗಿ ವರದಿಯಾಗಿದೆ.

ಈ ಹಿನ್ನಲೆಯಲ್ಲಿ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಶಿವಮೊಗ್ಗ ಕಾಲೇಜಿನಲ್ಲಿ ಡಿಸಿ ಮೊಕ್ಕಾಂ ಹೂಡಿ, ಪರಿಸ್ಥಿತಿ ನಿಯಂತ್ರಿಸುತ್ತಿದ್ದಾರೆ. ಜೊತೆಗೆ ಕಾಲೇಜಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಣೆ ಮಾಡಲಾಗಿದೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link