ಹಿಜಾಬ್-ಕೇಸರಿ ಶಾಲು ಸಂಘರ್ಷ: ಹೈಕೋರ್ಟ್ ನಿಂದ ಮಧ್ಯಂತರ ಆದೇಶ ಪ್ರಕಟ

ಬೆಂಗಳೂರು:

    ರಾಜ್ಯದ ಕಾಲೇಜುಗಳಲ್ಲಿ ಎದ್ದಿರುವಂತ ಹಿಜಾಬ್  ಮತ್ತು ಕೇಸರಿ ಶಾಲು ಸಂಘರ್ಷ ವಿವಾದದ ಕುರಿತಂತೆ ಕರ್ನಾಟಕ ಹೈಕೋರ್ಟ್ತನ್ನ ಮಧ್ಯಂತರ ತೀರ್ಪನ್ನು ಪ್ರಕಟಿಸಿದೆ. ಈ ತೀರ್ಪಿನಲ್ಲಿ ಯಾವುದೇ ವ್ಯಕ್ತಿ ಇಂತಹ ಕೃತ್ಯ ನಡೆಸೋದಕ್ಕೆ ಅವಕಾಶವಿಲ್ಲ.ನಮ್ಮದು ನಾಗರೀಕ ಸಮಾಜ ಎಂಬುದಾಗಿ ಅಭಿಪ್ರಾಯ ಪಟ್ಟಿದೆ.

 

ನಿನ್ನೆ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಆವಸ್ತಿ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠವು, ಹಿಜಾಬ್ ಹಾಗೂ ಕೇಸರಿ ಶಾಲು ಸಂಘರ್ಷದ ಕುರಿತಂತೆ ಮೌಖಿಕವಾಗಿ ಆದೇಶ ಪ್ರಕಟಿಸೋವರೆಗೆ ಹಿಜಾಬ್, ಕೇಸರಿ ಶಾಲು ಧರಿಸದಂತೆ ಸೂಚನೆ ನೀಡಿತ್ತು.

ಇಂದು ತನ್ನ ಆದೇಶ ಪ್ರಕಟಿಸಿರುವಂತ ಹೈಕೋರ್ಟ್ ಪೂರ್ಣಪೀಠವು, ಯಾವುದೇ ವ್ಯಕ್ತಿ ಇಂತಹ ಕೃತ್ಯ ನಡೆಸಲು ಅವಕಾಶವಿಲ್ಲ. ನಮ್ಮದು ನಾಗರೀಕ ಸಮಾಜ. ಧರ್ಮ, ಸಂಸ್ಕೃತಿ ಹೆಸರಿನಲ್ಲಿ ಶಾಂತಿ ಸಾಮರಸ್ಯಕ್ಕೆ ಧಕ್ಕೆ ಸರಿಯಲ್ಲ. ಪ್ರತಿಭಟನೆಯಿಂದ ಶಾಲಾ-ಕಾಲೇಜು ಬಂದ್ ಆಗಬಾರದು. ಶಿಕ್ಷಣ ಸಂಸ್ಥೆಗಳನ್ನು ಅನಿರ್ಧಿಷ್ಟವಾಗಿ ಬಂದ್ ಮಾಡೋದು ಸಂತಸದ ಸಂಗತಿ ಅಲ್ಲ ಎಂಬುದಾಗಿ ಅಭಿಪ್ರಾಯಪಟ್ಟಿದೆ.

ಉನ್ನತ ಶಿಕ್ಷಣಕ್ಕೆ ಈಗಾಗಲೇ ಸಮಯ ನಿಗದಿಯಾಗಿರುತ್ತದೆ. ಶೈಕ್ಷಣಿಕ ವರ್ಷ ವಿಳಂಬವಾದ್ರೇ ವಿದ್ಯಾರ್ಥಿಗಳ ಹಿತಕ್ಕೆ ಧಕ್ಕೆ ಉಂಟಾಗಲಿದೆ. ಸಂಸ್ಕೃತಿ ಹೆಸರಿನಲ್ಲಿ ಸಾಮರಸ್ಯಕ್ಕೆ ಧಕ್ಕೆ ತರುವಂತದ್ದು ಸರಿಯಲ್ಲ. ಈ ಕೇಸ್ ತುರ್ತು ಆಧಾರದ ಮೇಲೆ ವಿಚಾರಣೆ ನಡೆಸಲಾಗುತ್ತಿದೆ ಎಂಬುದಾಗಿ ತನ್ನ ಮಧ್ಯಂತರ ಆದೇಶವನ್ನು ಹೈಕೋರ್ಟ್ ಪ್ರಕಟಿಸಿದೆ.

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link