ಶಿವಮೊಗ್ಗ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ವರ್ಗಾವಣೆಗೆ ಮುಂದಾದ ರಾಜ್ಯ ಸರ್ಕಾರ..!?

ಬೆಂಗಳೂರು/ಶಿವಮೊಗ್ಗ:

ಬಜರಂಗ ದಳದ ಕಾರ್ಯಕರ್ತ ಹರ್ಷ ಕೊಲೆಯಾದ ಬಳಿಕ ನಡೆದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸ್ಥಳೀಯ ಜಿಲ್ಲಾಡಳಿತ ಸಂಪೂರ್ಣ ವೈಪಲ್ಯವಾಗಿದೆ ಎನ್ನುವ ಆರೋಪಗಳ ನಡುವೆ ರಾಜ್ಯ ಸರ್ಕಾರ ಇನ್ನೇರಡು ದಿನದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ವರ್ಗಾವಣೆ ಮಾಡಲಿದೆ ಎನ್ನಲಾಗಿದೆ.

ಬಜರಂಗ ದಳದ ಕಾರ್ಯಕರ್ತ ಹರ್ಷ ಕೊಲೆಯಾದ ಶಿವಮೊಗ್ಗದಲ್ಲಿ 144 ಸೆ ಜಾರಿ ಮಾಡಿದ್ದರು ಕೂಡ ಹರ್ಷ ಶವ ಸಂಸ್ಕಾರದ ಮೆರವಣಿಗೆ ಅನುಮತಿ ಕೊಟ್ಟಿದ್ದು ಯಾರು 144 ಸೆ ಇದ್ದರು ಕೂಡ ಸಾವಿರಾರು ಮಂದಿ ಹೇಗೆ ನಗರದಲ್ಲಿ ಸೇರಲು ಜಿಲ್ಲಾಧಿಕಾರಿ,

ಪೊಲೀಸ್ ವರಿಷ್ಠಾಧಿಕಾರಿ ಅವಕಾಶ ಮಾಡಿಕೊಟ್ಟರು ಎನ್ನುವ ಅನುಮಾನಗಳು ಕಾಡುತ್ತಿದ್ದು, ಹರ್ಷ ಕೊಲೆಯಾದ ಬಳಿಕ ಗಲಾಟೆ, ದೊಂಬಿಗೆ ಕಾರಣವನ್ನು ಖುದ್ದು ಇಬ್ಬರೇ ಹೊರಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎನ್ನಲಾಗಿದೆ.

ಇದಲ್ಲದೇ ಪೋಲಿಸರ ವೈಫಲ್ಯ ಕಾರಣವಾಗಿದೆ ಎನ್ನಲಾಗಿದೆ. ಜಿಲ್ಲಾಧಿಕಾರಿಗಳು ಕಳೆದ ಎರಡು ದಿನದ ಹಿಂದೆ ನಾವು ಹರ್ಷ ಶವ ಸಂಸ್ಕಾರದ ಮೆರವಣಿಗೆ ಅನುಮತಿ ಕೊಟ್ಟಿಲ್ಲ ಅಂತ ಹೇಳಿಕೆ ನೀಡಿದ್ದರು,

ಆದರೆ ಜಿಲ್ಲಾ ದಂಡಾಧಿಕಾರಿಗಳಿಗೆ ಹತ್ಯೆಯಾದ ಬಳಿಕ ನಡೆಯಬಹುದಾದ ಪರಿಸ್ಥಿತಿಯನ್ನು ಅವಲೋಕನ ಮಾಡದೇ ಇರೋದು ಎಷ್ಟು ಸರಿ ಅನ್ನೋದು ಈಗ ಶಿವಮೊಗ್ಗದ ಜನತೆಯ ಪ್ರಶ್ನೆಯಾಗಿದೆ.

ಪರಿಸ್ಥಿತಿ ಕೈ ಮೀರಿ ಹೋಗುತ್ತಿದ್ದರು ಕೂಡ ಖುದ್ದು ಪೋಲಿಸರೇ ಕೈ ಕಟ್ಟಿಕೊಂಡು ಸುಮ್ನೆ ಕುಳಿತುಕೊಂಡಿದ್ದರು ಅನ್ನೋ ಅನುಮಾನವನ್ನು ಕೂಡ ಜನತೆ ವ್ಯಕ್ತಪಡಿಸುತ್ತಿದ್ದಾರೆ. ಪೋಲಿಸರು ತಮ್ಮ ಕೆಲಸವನ್ನು ತಾವು ಮಾಡಿದ್ದರೆ,

ಗಲಭೆ ನಿರ್ಮಾಣವಾಗುತ್ತಿರಲಿಲ್ಲ, ಹತ್ತಾರು ವಾಹಗಳು, ಹಲವರಿಗೆ ಗಾಯಗಳು ಕೂಡ ಆಗುತ್ತಿರಲಿಲ್ಲ, 144 ಸೆ ಜಾರಿ ಮಾಡಿದ್ದರು ಕೂಡ ಸಾವಿರಾರು ಮಂದಿ ಹೇಗೆ ಸಾಧ್ಯವಾಯ್ತು? ಗುಪ್ತಚರ ಇಲಾಖೆ ವೈಪಲ್ಯ ಕಾರಣವಾಯ್ತೆ ಅನ್ನೋದು ಈಗ ಸದ್ಯದ ಪ್ರಶ್ನೆಯಾಗಿದೆ.

ಇವೆಲ್ಲದರ ನಡುವೆ ಶಿವಮೊಗ್ಗ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಯನ್ನು ವರ್ಗಾವಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಲಿದೆ ಎನ್ನಲಾಗಿದ್ದು, ಸದ್ಯ ಬಜೆಟ್ ಅಧಿವೇಶನದಲ್ಲಿ ವಿ.ಪಗಳ ಟೀಕೆಗಳಿಗೆ,

ಪ್ರಶ್ನೆಗಳಿಗೆ ಉತ್ತರ ನೀಡುವುದಕ್ಕೆ, ಮುಜುಗರದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಇಬ್ಬರನ್ನು ವರ್ಗಾವಣೆ ಮಾಡಿ ಬೀಸೋ ದೊಣ್ಣೆಯಿಂದ ಬಚಾವ್, ಆಗಲು ರಾಜ್ಯ ಸರ್ಕಾರ ಮುಂದಾಗಿದೆ. ಖುದ್ದು ಗೃಹ ಸಚಿವರ ತವರು ಜಿಲ್ಲೆಯಲ್ಲಿ ಘಟನೆ ನಡೆದಿರುವುದರಿಂದ ಸಹಜವಾಗಿ ಗೃಹ ಸಚಿವರ ಮೇಲೆ ಒತ್ತಡಗಳು ಇದ್ದೇ ಇರುತ್ತವೆ,

ಇದಲ್ಲದೇ ತಮ್ಮದೇ ಜಿಲ್ಲೆಯ ಗಲಭೆಯನ್ನು ನಿಯುಂತ್ರಣ ಮಾಡದೇ ಇರುವ ಸಚಿವರು ರಾಜ್ಯವನ್ನು ಹೇಗೆ ನಿಯಂತ್ರಣ ಮಾಡುತ್ತಾರೆ ಎನ್ನುವ ಪ್ರಶ್ನೆಗಳನ್ನು ಕೂಡ ಎದುರಿಸಬೇಕಾಗುತ್ತದೆ. ಹೀಗಾಗಿ ಸದ್ಯ ಶಿವಮೊಗ್ಗ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಯನ್ನು ಸದ್ಯ ವರ್ಗಾವಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link