ಕರ್ನೂಲ್ (ಆಂಧ್ರಪ್ರದೇಶ):
ಬೆಂಗಳೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಬಸ್ನಲ್ಲಿದ್ದ ಕಂಡಕ್ಟರ್ ಒಬ್ಬರು ಕರ್ತವ್ಯದಲ್ಲಿ ಇರುವಾಗಲೇ ಮೃತಪಟ್ಟಿರುವ ಘಟನೆ ನಡೆದಿದೆ.
ತುಮಕೂರಿನ ತಿಪ್ಪೇಸ್ವಾಮಿ ಎನ್ನುವವರು ಮೃತಪಟ್ಟವರು.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ತುಮಕೂರು ಡಿಪೋ-2ರಲ್ಲಿ ನಿರ್ವಾಹಕರಾಗಿದ್ದರು ತಿಪ್ಪೇಸ್ವಾಮಿ.
ಕರ್ನೂಲ್ನ ಢಾಣಾಪುರ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ, ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗಿತ್ತು. ಇನ್ನೇನು ಬಾಗಿಲು ಹಾಕಿಕೊಂಡು ಸೀಟಿನಲ್ಲಿ ಕುಳಿತುಕೊಳ್ಳುವಷ್ಟರಲ್ಲಿಯೇ ಹೃದಯಾಘಾತವಾಗಿದೆ. ದಿಢೀರ್ ಕುಸಿದು ಬಿದ್ದಿದ್ದಾರೆ. ಬಸ್ ಚಾಲಕ ತಕ್ಷಣ ಬಸ್ನಲ್ಲಿದ್ದ ಪ್ರಯಾಣಿಕರನ್ನು ಅಲ್ಲೇ ಇಳಿಸಿದರು. ತಿಪ್ಪೇಸ್ವಾಮಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಮೃತಪಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ