ಬೆಂಗಳೂರು:
ಈಗಾಗಲೇ ರಾಜ್ಯ ಸರ್ಕಾರ ಆಟೋ ಮೀಟರ್ ದರ ಏರಿಕೆಯ ಪ್ರಸ್ತಾವನೆಗೆ ಅನುಮತಿ ನೀಡಿ, ಗುಡ್ ನ್ಯೂಸ್ ನೀಡಿತ್ತು. ಈ ಬೆನ್ನಲ್ಲೇ, ಈಗ ಮಾರ್ಚ್ 1ರಿಂದ ಟು-ಸ್ಟ್ರೋಕ್ ಆಟೋ ರಿಕ್ಷಾಗಳನ್ನು ರಸ್ತೆಗೆ ಇಳಿಸುವಂತಿಲ್ಲ ಎಂಬುದಾಗಿ ಹೇಳುವ ಮೂಲಕ, ಆಟೋ ರಿಕ್ಷಾ ಮಾಲೀಕರಿಗೆ ಬಿಗ್ ಶಾಕ್ ನೀಡಿದೆ.
ರಾಜ್ಯ ಸರ್ಕಾರದಿಂದ ಟು-ಸ್ಟ್ರೋಕ್ ಆಟೋ ರಿಕ್ಷಾಗಳನ್ನು ಸ್ಕ್ರ್ಯಾಫ್ ಮಾಡಿ 4 ಸ್ಟ್ರೋಕ್ ಆಟೋಗಳನ್ನು ಖರೀದಿಸುವಂತೆ ಈ ಹಿಂದೆ ಆದೇಶಿಸಿತ್ತು. ಆದ್ರೇ ಕೋವಿಡ್ ತಂದಿಟ್ಟಂತ ಆರ್ಥಿಕ ಸಂಕಷ್ಟದಿಂದಾಗಿ ಇದು ಅನೇಕ ಆಟೋ ಮಾಲೀಕರಿಗೆ ಸಾಧ್ಯವಾಗಿರಲಿಲ್ಲ.
ಇದೀಗ ಟು-ಸ್ಟ್ರೋಕ್ ಆಟೋಗಳ ಫಿಟ್ನೆಸ್ ಸರ್ಟಿಫಿಕೇಟ್ ನವೀಕರಣವನ್ನು ಏಪ್ರಿಲ್ 1ರಿಂದ ನಿಷೇಧಿಸಲಾಗುತ್ತಿದೆ. ಹೀಗಾಗಿ ಮಾರ್ಚ್ 31ರಿಂದ ಟು-ಸ್ಟ್ರೋಕ್ ಆಟೋಗಳನ್ನು ರಸ್ತೆಗೆ ಇಳಿಸುವಂತಿಲ್ಲ.
ಇದರಿಂದಾಗಿ ಸಾವಿರಾರು ಟು-ಸ್ಟ್ರೋಕ್ ಆಟೋ ಮಾಲೀಕರಿಗೆ ಬಿಗ್ ಶಾಕ್ ನೀಡಿದಂತೆ ಆಗಿದೆ. ಅಲ್ಲದೇ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವಂತೆ ಆಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ