
ನ್ಯಾಟೋ ಪಡೆ ದಾಳಿ ನಡೆಸಬಹುದು, ಸನ್ನದ್ಧರಾಗಿರಿ ಎಂದು ಪರಮಾಣು ಪ್ರತಿಬಂಧಕ ಪಡೆಗೆ ವ್ಲಾಡಿಮಿರ್ ಪುಟಿನ್ ಹೈ ಅಲರ್ಟ್ ಘೋಷಿಸಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆಸಿದ್ದು, ಈ ಹಿನ್ನೆಲೆ ಅಮೆರಿಕಾ, ಯುಕೆ ಸೇರಿದಂತೆ ನ್ಯಾಟೋ ರಾಷ್ಟ್ರಗಳ ಒಕ್ಕೂಟ ಪರಮಾಣು ಯುದ್ಧ ಘೋಷಿಸೋ ಸಾಧ್ಯತೆಯಿದೆ.
ರಷ್ಯಾ ಅಧ್ಯಕ್ಷ ಪುಟಿನ್ ರಕ್ಷಣಾ ಸಚಿವ ಹಾಗೂ ಮಿಲಿಟರಿಯ ಜನರಲ್ ಸ್ಟಾಫ್ ಮುಖ್ಯಸ್ಥರಿಗೆ ಎಚ್ಚರಿಕೆಯಿಂದರಲು ಸೂಚಿಸಿದ್ದಾರೆ. ಪಾಶ್ಚಿಮಾತ್ಯ ದೇಶಗಳು ಆರ್ಥಿಕ ಕ್ಷೇತ್ರದಲ್ಲಿ ನಮ್ಮ ದೇಶದ ವಿರುದ್ಧ ಸ್ನೇಹಿಯಲ್ಲದ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ.
ಈಗಾಗಲೇ ನಮ್ಮ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಿದ್ದಾರೆ. ನ್ಯಾಟೋ ಸದಸ್ಯರ ಉನ್ನತ ಅಧಿಕಾರಿಗಳು ನಮ್ಮ ದೇಶದ ಬಗ್ಗೆ ಆಕ್ರಮಣಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಹೀಗಾಗಿ ತಮ್ಮ ಪರಮಾಣು ನಿರೋಧಕ ಪಡೆಗಳು ಅಲರ್ಟ್ ಆಗುವಂತೆ ಆದೇಶಿಸಿದ್ದು, ಜಾಗತಿಕ ಮಟ್ಟದಲ್ಲಿ ತಲ್ಲಣ ಮೂಡಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
