ಕೀವ್:
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆಸಿದದ್ದು, ಉಭಯ ದೇಶಗಳ ನಿಯೋಗದಿಂದ ನಿನ್ನೆ ಶಾಂತಿ ಸಭೆ ನಡೆಸಲಾಗಿದೆ.
ಶಾಂತಿ ಸಭೆಯಲ್ಲಿ ಪರಸ್ಪರ ಷರತ್ತುಗಳನ್ನು ಎರಡು ದೇಶಗಳು ಮುಂದಿಟ್ಟಿವೆ. ಉಕ್ರೇನ್ ದೇಶದ ಸೇನೆ ಶಸ್ತ್ರಾಸ್ತ್ರ ತ್ಯಜಿಸಬೇಕು.
ಸಶಸ್ತ್ರೀಕರಣದ ಸಮಸ್ಯೆ ಪರಿಹರಿಸುವ ಬಗ್ಗೆ ಮಾತುಕತೆಗೆ ಮುಂದಾಗಬೇಕು. ತಟಸ್ಥ ಸ್ಥಿತಿ ಖಾತ್ರಿಪಡಿಸಬೇಕೆಂದು ರಷ್ಯಾ ಅಧ್ಯಕ್ಷ ಪುಟಿನ್ ಷರತ್ತು ವಿಧಿಸಿದ್ದಾರೆ.
ರಷ್ಯಾಗೂ ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಷರತ್ತು ವಿಧಿಸಿದ್ದಾರೆ. ರಷ್ಯಾ ಕೂಡಲೇ ಕದನ ವಿರಾಮ ಘೋಷಿಸಬೇಕು. ತಕ್ಷಣ ತನ್ನ ಸೇನೆಯನ್ನು ಉಕ್ರೇನ್ ನಿಂದ ವಾಪಸ್ ಕರೆಸಿಕೊಳ್ಳಬೇಕು ಎಂದು ಷರತ್ತು ವಿಧಿಸಿದ್ದಾರೆ.
ಇದರಿಂದಾಗಿ ನಿಯೋಗಗಳ ನಡುವೆ ಬೆಲಾರಸ್ ನಲ್ಲಿ ನಡೆದ ಶಾಂತಿ ಸಭೆ ಅಪೂರ್ಣವಾಗಿದೆ. ಯುದ್ಧ ಮುಂದುವರೆದಿದ್ದು, ರಷ್ಯಾ ಸೇನೆಗೆ ಉಕ್ರೇನ್ ಪ್ರಬಲ ಪ್ರತಿರೋಧವನ್ನೇ ತೋರುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ