ದಾಂಡೇಲಿ:
ಕರ್ನಾಟಕದ ಪ್ರವಾಸಕ್ಕೆಂದು ದಾಂಡೇಲಿಗೆ ಬಂದಿದ್ದಾಗ ಬಿರಂಪಾಲಿ- ಅಕೋರ್ಡಾ ಎಂಬಲ್ಲಿ ಛತ್ತೀಸ್ಗಢದ ಯುವತಿಯೊಬ್ಬರು ಸಾವನ್ನಪ್ಪಿದ್ದಾರೆ.
ಛತ್ತಿಸಗಢದ ದೇವಿಕಾ ಸಂಜಯ್ ವಾಸವಣೆ (25) ಮೃತಪಟ್ಟ ಯುವತಿ. ಸೈಕ್ಲಿಂಗ್ ಮಾಡುವಾಗ (Cycling) ಆಯತಪ್ಪಿ ಮರಕ್ಕೆ ಢಿಕ್ಕಿ ಹೊಡೆದು ದೇವಿಕಾ ಸಂಜಯ್ ವಾಸವಣೆ ಸಾವಿಗೀಡಾಗಿದ್ದಾರೆ. ಈ ವೇಳೆ ತಲೆಯ ಭಾಗಕ್ಕೆ ಪೆಟ್ಟಾಗಿ ಮೂಗಿನಿಂದ ರಕ್ತ ಸ್ರಾವವಾಗಿದ್ದು, ಯುವತಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ
ಹಿಡನ್ ವ್ಯಾಲಿ ಹೋಮ್ ಸ್ಟೇನಲ್ಲಿ ಸ್ನೇಹಿತರ ಜತೆ ದೇವಿಕಾ ತಂಗಿದ್ದರು. ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ದೇವಿಕಾ ಧಾರವಾಡಕ್ಕೆ ಸೆಮಿನಾರ್ಗಾಗಿ ಬಂದಿದ್ದರು. ರಜಾ ದಿನದ ಕಾರಣ ಧಾರವಾಡದಿಂದ ದಾಂಡೇಲಿಗೆ ಪ್ರವಾಸಕ್ಕೆ ಆಗಮಿಸಿದ್ದರು.
ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ. ದಾಂಡೇಲಿ ಸರಕಾರಿ ಆಸ್ಪತ್ರೆಯಲ್ಲಿ ನಡೆದ ಯುವತಿಯ ಮರಣೋತ್ತರ ಪರೀಕ್ಷೆ ನಡೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ