ಬಟ್ಟೆಯೊಳಗೆ 52 ಹಲ್ಲಿ ಮತ್ತು ಹಾವುಗಳನ್ನು ಅಡಗಿಸಿಟ್ಟುಕೊಂಡು ಗಡಿ ದಾಟುತ್ತಿದ್ದ ವ್ಯಕ್ತಿಯ ಬಂಧನ

ಕ್ಯಾಲಿಫೋರ್ನಿಯಾದಲ್ಲಿ ಯುಎಸ್ ಗಡಿ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ 30 ವರ್ಷದ ವ್ಯಕ್ತಿಯೊಬ್ಬ ತನ್ನ ಬಟ್ಟೆಯಲ್ಲಿ 52 ಹಲ್ಲಿಗಳು ಮತ್ತು ಹಾವುಗಳನ್ನು ಅಡಗಿಸಿಟ್ಟುಕೊಂಡು ಹೊರಟ ಘಟನೆ ನಡೆದಿದೆ.

 

ಕ್ಯಾಲಿಫೋರ್ನಿಯಾದಲ್ಲಿ  ಯುಎಸ್ ಗಡಿ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ 30 ವರ್ಷದ ವ್ಯಕ್ತಿಯೊಬ್ಬ ತನ್ನ ಬಟ್ಟೆಯಲ್ಲಿ 52 ಹಲ್ಲಿ ಮತ್ತು ಹಾವುಗಳನ್ನು  ಅಡಗಿಸಿಟ್ಟುಕೊಂಡು ಹೊರಟ ಘಟನೆ ನಡೆದಿದೆ.ಸದ್ಯ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ.

ವ್ಯಕ್ತಿ ಫೆ. 25 ರಂದು ಮೆಕ್ಸಿಕೋದಿಂದ ಸ್ಯಾನ್ ಯಸಿಡ್ರೊ ಗಡಿ ದಾಟಲು ಹೊರಟಿದ್ದು, ಈ ವೇಳೆ ಹೆಚ್ಚುವರಿ ತಪಾಸಣೆಗಾಗಿ ಅವರನ್ನು ಎಳೆದಾಗ ಹಲ್ಲಿ ಮತ್ತು ಹಾವುಗಳು ಕಂಡುಬಂದಿದೆ.

ಆ ವ್ಯಕ್ತಿ ಟ್ರಕ್ ಅನ್ನು ಓಡಿಸುತ್ತಿದ್ದ ಎಂದು ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ಹೇಳಿಕೆಯಲ್ಲಿ ತಿಳಿಸಿದೆ. ಒಂಬತ್ತು ಹಾವುಗಳು ಮತ್ತು 43 ಕೊಂಬಿನ ಹಲ್ಲಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ಕೆಲವು ಜಾತಿಗಳು ಅಳಿವಿನಂಚಿನಲ್ಲಿರುವವು ಎಂದು ಪರಿಗಣಿಸಲಾಗಿದೆ.

ಕಳ್ಳಸಾಗಾಣಿಕೆ ಮಾಡಲು ಜನರು ವಿವಿಧ ರೀತಿಯ ತಂತ್ರಗಳನ್ನು ಉಪಯೋಗಿಸುತ್ತಾರೆ. ಆದರೆ ಬಾರ್ಡರ್​ಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ. ಹೀಗಾಗಿ ಅಷ್ಟು ಸುಲಭವಾಗಿ ಪ್ರಾಣಿಗಳನ್ನಾಗಲೀ ಅಥವಾ ವ್ಯಕ್ತಿಗಳನ್ನಾಗಲೀ ಕಳ್ಳ ಸಾಗಾಣಿಕೆ ಮಾಡಲು ಸಾಧ್ಯವಿಲ್ಲ ಎಂದು ಸ್ಯಾನ್ ಡಿಯಾಗೋದಲ್ಲಿನ ಕ್ಷೇತ್ರ ಕಾರ್ಯಾಚರಣೆಗಳ ಕಸ್ಟಮ್ಸ್ ಮತ್ತು ಗಡಿ ಸಂರಕ್ಷಣಾ ನಿರ್ದೇಶಕ ಸಿಡ್ನಿ ಅಕಿ ತಿಳಿಸಿದ್ದಾರೆ.

ಸದ್ಯ ಆತನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಆತ ಜಾಕೆಟ್, ಪ್ಯಾಂಟ್ ಪಾಕೆಟ್‌ಗಳು ಮತ್ತು ತೊಡೆಸಂದು ಪ್ರದೇಶದಲ್ಲಿ ಸಣ್ಣ ಚೀಲಗಳಲ್ಲಿ 52 ಹಲ್ಲಿಗಳು ಮತ್ತು ಹಾವುಗಳನ್ನು ಅಡಗಿಸಿಟ್ಟುಕೊಂಡಿದ್ದನು ಎಂದು ಯುಎಸ್ ಗಡಿ ಏಜೆಂಟರು ತಿಳಸಿದ್ದಾರೆ. ವ್ಯಕ್ತಿಯ ಬಟ್ಟೆಯ ಒಳಗೆ ಹಾವು, ಹಲ್ಲಿಗಳನ್ನು ನೋಡಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಸದ್ಯ ಈ ವಿಚಾರ ಎಲ್ಲೆಡೆ ವೈರಲ್​ ಆಗಿದೆ.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link