15 ವರ್ಷಗಳಲ್ಲೇ ಸಿಎಂ ಆಗುತ್ತಿರುವ ಮೊದಲ ಶಾಸಕ

ಉತ್ತರಪ್ರದೇಶ:

ಕಳೆದ 15 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಉತ್ತರಪ್ರದೇಶವು “ಶಾಸಕ’ರೊಬ್ಬರನ್ನು “ಮುಖ್ಯಮಂತ್ರಿ’ಯಾಗಿ ಪಡೆಯುತ್ತಿದೆ.

ಹೌದು 2017ರಲ್ಲಿ ಯೋಗಿ ಆದಿತ್ಯನಾಥ್‌ ಅವರು ಉತ್ತರಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರುವಾಗ ಅವರು ಅದಾಗಲೇ 5 ಬಾರಿ ಲೋಕಸಭೆ ಸಂಸದರಾಗಿ ಆಯ್ಕೆ ಗೊಂಡಿದ್ದರು.

    ಅನಂತರ ಅವರು ವಿಧಾನಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿ ಬಂದರು. ಅದಕ್ಕೂ ಮೊದಲು ಮುಖ್ಯಮಂತ್ರಿಯಾಗಿದ್ದ ಎಸ್‌ಪಿ ನಾಯಕ ಅಖೀಲೇಶ್‌ ಯಾದವ್‌ ಅವರೂ ಎಂಎಲ್‌ಸಿ ಆಗಿಯೇ ಸಿಎಂ ಆದವರು. ಬಿಎಸ್‌ಪಿ ನಾಯಕಿ ಮಾಯಾವತಿ ಅವರೂ ಇದೇ ರೀತಿ ಪರಿಷತ್‌ ಬಾಗಿಲಿನಿಂದ ಪಟ್ಟಕ್ಕೇರಿದವರು.

ಆದರೆ, ಈಗ ಮೊದಲ ಬಾರಿಗೆ ಯೋಗಿ ಅವರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ, ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಬಿಜೆಪಿಯ ಸಿಎಂ ಅಭ್ಯರ್ಥಿಯಾಗಿದ್ದ ಯೋಗಿ ಹಾಗೂ ಎಸ್‌ಪಿ ಸಿಎಂ ಅಭ್ಯರ್ಥಿಯಾಗಿದ್ದ ಅಖೀಲೇಶ್‌ ಇಬ್ಬರೂ ಈ ಚುನಾವಣೆಯಲ್ಲಿ ವಿಧಾನಸಭಾ ಕ್ಷೇತ್ರಗಳಿಂದ ಕಣಕ್ಕಿಳಿದಿದ್ದರು. ವಿಶೇಷವೆಂದರೆ, ಇವರಿಬ್ಬರೂ ಗೆಲುವು ಸಾಧಿಸಿದ್ದಾರೆ.

2017ರಲ್ಲಿ ವಿಧಾನಪರಿಷತ್‌ನಿಂದ ಆಯ್ಕೆಗೊಂಡ ಉತ್ತರಪ್ರದೇಶದ ನಾಲ್ಕನೇ ಸಿಎಂ ಎಂಬ ಖ್ಯಾತಿಗೆ ಯೋಗಿ ಪಾತ್ರರಾಗಿದ್ದರು. 1999ಕ್ಕಿಂತ ಹಿಂದೆ ಉ.ಪ್ರದೇಶದಲ್ಲಿ ಎಂಎಲ್‌ಸಿಯೊಬ್ಬರು ಸಿಎಂ ಆಗಿದ್ದಿಲ್ಲ. 1999ರಲ್ಲಿ ಬಿಜೆಪಿಯ ರಾಮ್‌ ಪ್ರಕಾಶ್‌ ಗುಪ್ತಾ ಅವರು ರಾಜ್ಯದ ಮೊದಲ ಎಂಎಲ್‌ಸಿ ಸಿಎಂ ಆದರು. ಆದರೆ, ಅವರು ಒಂದು ವರ್ಷವೂ ಅಧಿಕಾರ ಪೂರ್ಣಗೊಳಿಸಲಿಲ್ಲ.

             ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link