ಉಕ್ರೇನ್ :
ಅಧಿಕೃತವಾಗಿ ಉಕ್ರೇನ್ ಯುರೋಪಿಯನ್ ಒಕ್ಕೂಟಕ್ಕೆ ಸೇರ್ಪಡೆಯಾಗಿದ್ದು, ಈ ಮೂಲಕ ರಷ್ಯಾ ವಿರುದ್ಧದ 16 ದಿನ ಎದೆಗುಂದದೆ ಹೋರಾಡಿ ಉಕ್ರೇನ್ ಗೆ ಆನೆ ಬಲ ಸಿಕ್ಕಿದಂತಾಗಿದೆ.
ಯೆಸ್, ಅಧಿಕೃತವಾಗಿ ಉಕ್ರೇನ್ ಯುರೋಪಿಯನ್ ಒಕ್ಕೂಟಕ್ಕೆ ಸೇರ್ಪಡೆಯಾಗಿದೆ.
ಯುರೋಪಿಯನ್ ಒಕ್ಕೂಟಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆ ಉಕ್ರೇನ್ ಅರ್ಜಿ ಸಲ್ಲಿಸಿತ್ತು. ಉಕ್ರೇನ್ ಮನವಿಯನ್ನು ಯುರೋಪಿಯನ್ ಒಕ್ಕೂಟ ಒಪ್ಪಿಕೊಂಡಿದೆ. ಈ ಮೂಲಕ ಅಧಿಕೃತವಾಗಿ ಉಕ್ರೇನ್ ಯುರೋಪಿಯನ್ ಒಕ್ಕೂಟಕ್ಕೆ ಸೇರ್ಪಡೆಯಾಗಿದೆ.
ಉಕ್ರೇನ್ ಯುರೋಪಿಯನ್ ಒಕ್ಕೂಟ ಸೇರ್ಪಡೆಯಾಗುವದನ್ನು ವಿರೋಧಿಸಿ ರಷ್ಯಾ ಕಳೆದ 16 ದಿನಗಳಿಂದ ಯುದ್ಧ ನಡೆಸಿದೆ. ಭೀಕರ ಯುದ್ದಕ್ಕೆ ಉಕ್ರೇನ್ ತತ್ತರಿಸಿ ಹೋಗಿದೆ. ರಷ್ಯಾಸೇನೆ ದಾಳಿಗೆ ಉಕ್ರೇನ್ ರಣರಂಗವಾಗಿದೆ. ದಿನನಿತ್ಯ ಗುಂಡು, ಬಾಂಬ್ ಗಳ ಮೊರೆತ, ರಕ್ತದ ಹೊಳೆ ಹರಿಯುತ್ತಿದೆ.
ಇನ್ನೂ, ಕಾದು ನೋಡುವ ತಂತ್ರ ಅನುಸರಿಸಿದ್ದ ಯರೋಪಿಯನ್ ಒಕ್ಕೂಟ ಕೊನೆಗೂ ಉಕ್ರೇನ್ ಮನವಿಯನ್ನು ಒಪ್ಪಿಕೊಂಡಿದೆ. ಅಧಿಕೃತವಾಗಿ ಉಕ್ರೇನ್ ಯುರೋಪಿಯನ್ ಒಕ್ಕೂಟಕ್ಕೆ ಸೇರ್ಪಡೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
