ಬೆಂಗಳೂರು :

ಪಡಿತರ ತೆಗೆದುಕೊಳ್ಳು ಹೋದಾಗ ಕೆಲವು ಸಲ ಬಯೋಮೆಟ್ರಿಕ್ ಬರಲ್ಲ ಆಗ ಪಡಿತರ ಸಿಗುವುದಿಲ್ಲ ಅಲ್ಲವೆ ಈ ವಿಚಾರದ ಬಗ್ಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿರುವುದು ಏನೆಂದರೆ ಬಯೋಮೆಟ್ರಿಕ್ ಇಲ್ಲದಿದ್ದರೂ ಪಡಿತರ ನೀಡಲಾಗುವುದು ಎಂದು ಹೇಳಿದ್ದಾರೆ.
ರವಿ ಪ್ರಶ್ನೆಗೆ ಉತ್ತರಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವೃದ್ಧರು ಸೇರಿದಂತೆ ಕೆಲವು ಕಾರ್ಮಿಕರ ಬೆರಳು ಸವೆದು ಬಯೋಮೆಟ್ರಿಕ್ ಪಡೆಯಲು ಸಾಧ್ಯವಾಗದ ಕಾರಣ ಅಂತವರಿಗೆ ಬಯೋಮೆಟ್ರಿಕ್ ಹೊರತುಪಡಿಸಿ ಮೊಬೈಲ್ ನಂಬರ್ ಗೆ ಒಟಿಪಿ ಮೂಲಕ ಶೇ. 2 ರಷ್ಟು ಪ್ರಮಾಣದಲ್ಲಿ ಪಡಿತರ ಹಂಚಿಕೆ ಮಾಡಲಾಗುತ್ತಿದ್ದು, ಈ ಪ್ರಮಾಣ ವೃದ್ಧಿಗೆ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








