ಹೈದರಾಬಾದ್:

ಸೌತ್ ಬ್ಯೂಟಿ ಸಮಂತಾ ಸದ್ಯ ತಮ್ಮ ವೃತ್ತಿಜೀವನದ ಅತ್ಯುತ್ತಮ ಹಂತದಲ್ಲಿದ್ದಾರೆ. ದಕ್ಷಿಣ ಭಾರತದ ರಾಣಿ ಜೇನು ಎಂದೇ ಕರೆಸಿಕೊಳ್ಳುವ ನಟಿಗೆ ಅಪಾರ ಅಭಿಮಾನಿಗಳಿದ್ದಾರೆ. ಹಿಂದಿಯ ಫ್ಯಾಮಿಲಿ ಮ್ಯಾನ್ 2 ಚಿತ್ರದ ಯಶಸ್ಸು ಮತ್ತು ಅಲ್ಲು ಅರ್ಜುನ್ ಅವರ ಪುಷ್ಪಾದಲ್ಲಿನ ಐಟಂ ಸಾಂಗ್ ಬಳಿಕ ಉತ್ತರ ಭಾರತದಲ್ಲಿಯೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಸಾಲು ಸಾಲು ಯಶಸ್ಸಿನ ಜತೆಗೆ ಸಮಂತಾರ ಸಂಭಾವನೆ ಕೂಡ ಭಾರೀ ಚರ್ಚೆಗೆ ಕಾರಣವಾಗಿದೆ.
ಇತ್ತೀಚಿನ ವರದಿಗಳ ಪ್ರಕಾರ, ನಯನತಾರಾ ನಂತರ ಸಮಂತಾ ದಕ್ಷಿಣ ಭಾರತದ ಎರಡನೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಬ್ಯಾಕ್ ಟು ಬ್ಯಾಕ್ ಯಶಸ್ಸಿನ ನಂತರ, ಓ ಬೇಬಿ ನಟಿ ತನ್ನ ಸಂಭಾವನೆಯನ್ನು ಹೆಚ್ಚಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಅನೇಕ ವರದಿಗಳ ಪ್ರಕಾರ, ಸಮಂತಾ ತನ್ನ ಸಿನಿಮಾಗಳಿಗೆ 3 ರಿಂದ 5 ಕೋಟಿ ರೂ. ತೆಗೆದುಕೊಳ್ಳುತ್ತಾರಂತೆ. ಅಲ್ಲದೆ, ಸಂಭಾವನೆಯು ಪ್ರೊಡಕ್ಷನ್ ಹೌಸ್ ಮತ್ತು ಇತರ ಹಲವು ಅಂಶಗಳನ್ನು ಅವಲಂಬಿಸಿದ್ದು, ಅದಕ್ಕೆ ಅನುಗುಣವಾಗಿ ಸಂಭಾವನೆಯನ್ನು ಪಡೆಯುತ್ತಾರಂತೆ. ಪುಷ್ಪ: ದಿ ರೈಸ್ ಚಿತ್ರದಲ್ಲಿನ ವಿಶೇಷ ಹಾಡಿಗೆ ಸಮಂತಾ 5 ಕೋಟಿ ರೂ.ಗಳನ್ನು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿನಿಮಾ ವಿಚಾರಕ್ಕೆ ಬಂದರೆ, ಸಮಂತಾ ತನ್ನ ಮುಂದಿನ ಚಿತ್ರವಾದ ಕಾತುವಾಕುಲಾ ರೆಂಡು ಕಾದಲ್ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ವಿಘ್ನೇಶ್ ಶಿವನ್ ನಿರ್ದೇಶನದ ಈ ಚಿತ್ರದಲ್ಲಿ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾತುವಾಕುಲ ರೆಂಡು ಕಾದಲ್ ಏಪ್ರಿಲ್ 28 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಕಾತುವಾಕುಲ ರೆಂಡು ಕಾದಲ್ ನಂತರ, ಗುಣಶೇಖರ್ ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ಶಾಕುಂತಲಂ ಚಿತ್ರದಲ್ಲಿ ನಟಿಸಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.
ಇದರೊಂದಿಗೆ ತಮಿಳು ಮತ್ತು ತೆಲುಗು ದ್ವಿಭಾಷಾ ಸಿನಿಮಾ ಯಶೋಧಾದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ಗೂ ಪದಾರ್ಪಣೆ ಮಾಡಿರುವ ಸಮಂತಾ ಫಿಲಿಪ್ ಜಾನ್ ನಿರ್ದೇಶನದ ಅರೆಂಜ್ಮೆಂಟ್ಸ್ ಆಫ್ ಲವ್ ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








