ಬೆಂಗಳೂರು:

ಹಿಜಾಬ್ ಅನುಮತಿ ಕೋರಿ ಸಲ್ಲಿಸಲಾಗಿದ್ದಂತ ಅರ್ಜಿಯ ಕಾಯ್ದಿರಿಸಿದ್ದಂತ ತೀರ್ಪನ್ನು ಹೈಕೋರ್ಟ್ ಇಂದು ಪ್ರಕಟಿಸಿದೆ. ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ ಎಂಬುದಾಗಿ ಹೇಳುವ ಮೂಲಕ, ಐತಿಹಾಸಿಕ ತೀರ್ಪು ನೀಡಿದೆ.
ಈ ಸಂದರ್ಭದಲ್ಲಿಯೇ ಹೈಕೋರ್ಟ್ ಮೆಟ್ಟಿಲೇರಿದ್ದಂತ ವಿದ್ಯಾರ್ಥಿನಿಯರಿಗೆ ಶಾಸಕ ರಘಪತಿ ಭಟ್ ಏನ್ ಹೇಳಿದ್ರು ಅಂತ ಮುಂದೆ ಓದಿ..
ಈ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕೋರ್ಟ್ ಆದೇಶ ಪಾಲಿಸಿ, ನಾಳೆಯಿಂದ ಕಾಲೇಜಿಗೆ ಬನ್ನಿ. ನೀವು ಕೋರ್ಟ್ ಗೆ ಹೋದವರು ಎಂಬ ಭೇದ-ಭಾವ ಮಾಡೋದಿಲ್ಲ. ಹಿಜಾಬ್ ಗಲಾಟೆಯಿಂದ ಪಾಠ ಮಿಸ್ ಆಗಿದೆ ಎಂಬುದಾಗಿ ವಿದ್ಯಾರ್ಥಿನಿಯರಿಗೆ ಕೋರಿಕೊಂಡಿದ್ದಾರೆ.
ಅಲ್ಲದೇ ಹಿಜಾಬ್ ಗಲಾಟೆಯಿಂದ ತರಗತಿಗೆ ಬಾರದೇ ಪಾಠಗಳು ಮಿಸ್ ಆಗಿವೆ. ಆ ಮಿಸ್ ಆದಂತ ತರಗತಿಗಳ ನೋಟ್ಸ್ ನಿಮಗೆ ನೀಡಲಾಗುತ್ತದೆ. ಈಗಾಗಲೇ ಹೈಕೋರ್ಟ್ ಗೆ ಹೋಗಿ ಹಿಜಾಬ್ ವಿವಾದವಾಗಿದೆ.
ಮತ್ತೆ ಸುಪ್ರೀಂ ಕೋರ್ಟ್ ಗೆ ಹೋಗಿ ದೇಶಾದ್ಯಂತ ವಿವಾದ ಮಾಡಬೇಡಿ. ಮತಾಂದ ಶಕ್ತಿಗಳ ಮಾತಿಗೆ ನೀವು ಬಲಿಯಾಗಬೇಡಿ ಎಂಬುದಾಗಿ ಶಾಸಕ ರಘುವತಿ ಭಟ್ ವಿದ್ಯಾರ್ಥಿನಿಯರಲ್ಲಿ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








