ಭಾರತದಲ್ಲಿ ಮತ್ತೆ ಹೆಚ್ಚಿದ ಕೊರೊನಾ ಆತಂಕ..!

ನವದೆಹಲಿ:

  ಮಾ.17- ನೆರೆಯ ಚೀನಾ ಹಾಗೂ ಏಷ್ಯಾ ರಾಷ್ಟ್ರಗಳಲ್ಲಿ ಕೊರೊನಾ ನಾಲ್ಕನೆ ಅಲೆ ಸ್ಫೋಟಗೊಂಡಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ತಜ್ಞರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ನಮಗಿದು ಎಚ್ಚರಿಕೆ ಗಂಟೆಯಾಗಿದ್ದು, ಜನನಿಬಿಡ ಸ್ಥಳಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ತರ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಂದ್ರ ಆರೋಗ್ಯ ಇಲಾಖೆ ರಾಜ್ಯಗಳಿಗೆ ಸಲಹೆ ನೀಡಿದೆ.

 ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ಕಳೆದ ರಾತ್ರಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅಂತಾರಾಷ್ಟ್ರೀಯ ವಿಮಾನಗಳ ಪ್ರವೇಶಕ್ಕೆ ಅವಕಾಶ ನೀಡುವ ಕುರಿತಂತೆ ಪರಾಮರ್ಶೆ ನಡೆಸಿರುವ ಸಂದರ್ಭದಲ್ಲಿಯೇ ಮತ್ತೆ ದೇಶದಲ್ಲಿ ಕೊರೊನಾ ಹೆಚ್ಚಳವಾಗುವ ಸಾಧ್ಯತೆಯನ್ನು ತಿಳಿಸಲಾಗಿದ್ದು, ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಕೆಲವು ಮಾರ್ಗ ಸೂಚಿಗಳನ್ನು ಹಿಂಪಡೆಯದಿರಲು ಸೂಚಿಸಲಾಗಿದೆ.

ಕೋವಿಡ್ ಸಂಪೂರ್ಣವಾಗಿ ಹೋಗಿಲ್ಲ, ಲಸಿಕಾಕರಣದಿಂದ ನಿಯಂತ್ರಣಕ್ಕೆ ಬಂದಿದೆ:ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

ಈಗಾಗಲೇ ವಿಶ್ವಸಂಸ್ಥೆ ಕೂಡ ಇದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಲಸಿಕೆ ನೀಡುವ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವಂತೆ ಮತ್ತು ಚೀನಾಗೆ ಸಂಪರ್ಕ ಬೆಳೆಸುವವರ ಬಗ್ಗೆ ತೀವ್ರ ನಿಗಾ ಇಡುವಂತೆ ಸೂಚಿಸಲಾಗಿದೆ. ಇದರ ನಡುವೆಯೇ ಎರಡು ವರ್ಷಗಳ ನಂತರ ನಿನ್ನೆಯಷ್ಟೇ ಪ್ರವಾಸಿಗರ ವೀಸಾಗಳನ್ನು ಮಾ.27ರಿಂದ ಪ್ರಾರಂಭಿಸಲು ವಿದೇಶಾಂಗ ಇಲಾಖೆ ನಿರ್ಧರಿಸಿತ್ತು. ಆದರೆ, ಮತ್ತೆ ನಿಲ್ಲಿಸುವ ಸಾಧ್ಯತೆ ಇದೆ.

ಈಗಷ್ಟೇ ಭಾರತ ಒಮಿಕ್ರಾನ್‍ನಿಂದ ಚೇತರಿಸಿಕೊಳ್ಳುವ ಸಂದರ್ಭದಲ್ಲೆ ಎಚ್ಚರಿಕೆ ಗಂಟೆ ಭಾರಿಸಿರುವುದು ಆತಂಕ ಹೆಚ್ಚಿಸಿದೆ. ಐರೋಪ್ಯ ರಾಷ್ಟ್ರಗಳು ಕೂಡ ತುರ್ತು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

‘ವಂಶ ರಾಜಕಾರಣ’ಕ್ಕೆ ‘ಪ್ರಧಾನಿ ಮೋದಿ’ ಬ್ರೇಕ್: ‘ರಾಜ್ಯ ಕೇಸರಿಪಡೆ’ಯಲ್ಲಿ ಹೆಚ್ಚಿದ ಆತಂಕ.!

ಹಲವು ರಾಷ್ಟ್ರಗಳು ಮಾಸ್ಕ್ ಫ್ರೀ ಘೋಷಣೆ ಮಾಡಿದ್ದು, ಈಗ ನಿಬಂರ್ಧಗಳನ್ನು ಪುನರ್ ವಿಸಲು ಮುಂದಾಗಿವೆ. ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ತಪಾಸಣೆಗೊಳಪಡಿಸಿವುದೂ ಸೇರಿದಂತೆ ಆರೋಗ್ಯ ವಿಷಯದಲ್ಲಿ ಯಾವುದೇ ರೀತಿಯ ವಿನಾಯ್ತಿ ನೀಡದಿರಲು ಕಟ್ಟಪ್ಪಣೆ ಮಾಡಲಾಗಿದೆ.

ಹಲವು ರಾಷ್ಟ್ರಗಳು ಈಗಾಗಲೇ ತರ್ತು ಸಭೆಗಳನ್ನು ನಡೆಸಿದ್ದು, ಚೀನಾ ಹಾಗೂ ಏಷ್ಯಾ ಭಾಗದಿಂದ ಬರುವ ವಿಮಾನಗಳನ್ನು ತಡೆಯುವ ಎಲ್ಲಾ ಸಾಧ್ಯತೆಗಳಿವೆ. ಚೀನಾ ಮತ್ತು ಕೊರಿಯಾದಲ್ಲಿ ಕೊರೊಲಾ ವಿಪರೀತ ಮಟ್ಟಕ್ಕೆ ಏರಿರುವುದರಿಂದ ಭಾರತಕ್ಕೆ ಹೊಸ ಆತಂಕ ಕಾಡುತ್ತಿದೆ. ಭಾರತ ಸರ್ಕಾರ ಸದ್ಯದಲ್ಲೇ ಸಭೆ ನಡೆಸಲಿದ್ದು, ಮತ್ತೊಂದು ಮಾರ್ಗಸೂಚಿಗಳು ಬರುವ ನಿರೀಕ್ಷೆಯೂ ಹೆಚ್ಚಾಗಿದೆ.

         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link