ಆದಾಯ ತೆರಿಗೆಯಿಂದ್ಲೇ ಭರ್ತಿಯಾಗಿದೆ ಕೇಂದ್ರದ ಖಜಾನೆ; ಇತಿಹಾಸದಲ್ಲೇ ಅತ್ಯಧಿಕ ಕಲೆಕ್ಷನ್‌

ರಾಜ್ಯ:

ಆದಾಯ ತೆರಿಗೆ ಇಲಾಖೆ ತನ್ನ ಇತಿಹಾಸದಲ್ಲಿಯೇ ಅತ್ಯಧಿಕ ತೆರಿಗೆ ಸಂಗ್ರಹ ಮಾಡಿದೆ. ಸಿಬಿಡಿಟಿ ಅಧ್ಯಕ್ಷ ಜೆ.ಬಿ. ಮಹಪಾತ್ರ ಈ ವಿಷಯ ತಿಳಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದಲ್ಲಿ ನೇರ ತೆರಿಗೆ ಸಂಗ್ರಹದಲ್ಲಿ ಶೇ.48ರಷ್ಟು ಹೆಚ್ಚಳವಾಗಿದೆ. ಮುಂಗಡ ತೆರಿಗೆ ಪಾವತಿ ಶೇ.41ರಷ್ಟು ಹೆಚ್ಚಾಗಿರುವುದು ವಿಶೇಷ.

ಈವರೆಗಿನ ನಿವ್ವಳ ನೇರ ತೆರಿಗೆ ಸಂಗ್ರಹ 13.63 ಲಕ್ಷ ಕೋಟಿ ರೂಪಾಯಿ ಇದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಮೊತ್ತ ಶೇ.48ರಷ್ಟು ಅಧಿಕ. ವಾರ್ಷಿಕ ಆಧಾರದ ಮೇಲೆ ತೆರಿಗೆ ಸಂಗ್ರಹ 2020-21ರ ಇದೇ ಅವಧಿಗಿಂತ ಶೇ.48.4ರಷ್ಟು ಹೆಚ್ಚಾಗಿದೆ. 2019-20 ಕ್ಕಿಂತ ಶೇ.42.5 ರಷ್ಟು ಹೆಚ್ಚು ತೆರಿಗೆ ಸಂಗ್ರಹವಾಗಿದೆ. 2018-19ಕ್ಕಿಂತ ಶೇ.35ರಷ್ಟು ಅಧಿಕ ತೆರಿಗೆ ಸರ್ಕಾರದ ಬೊಕ್ಕಸ ಸೇರಿದೆ.

 ಏ. 1 ರಿಂದಲೇ ಆಯವ್ಯಯ ಘೋಷಣೆಗಳ ಅನುಷ್ಠಾನಕ್ಕೆ ಸಿಎಂ ಸೂಚನೆ

ಈ ಹಿಂದಿನ ಅತ್ಯಧಿಕ ತೆರಿಗೆ ಸಂಗ್ರಹದ ಮೊತ್ತಕ್ಕಿಂತ 2.5 ಲಕ್ಷ ಕೋಟಿ ರೂಪಾಯಿಯಷ್ಟು ಹಚ್ಚುವರಿ ಟ್ಯಾಕ್ಸ್‌ ಅನ್ನು ಸರ್ಕಾರ ವಸೂಲಿ ಮಾಡಿದೆ. ವೈಯಕ್ತಿಕ ಆದಾಯದ ಮೇಲಿನ ತೆರಿಗೆ, ಕಂಪನಿಗಳು ಮಾಡಿದ ಲಾಭದ ಮೇಲಿನ ತೆರಿಗೆ, ಸಂಪತ್ತಿನ ಮೇಲಿನ ತೆರಿಗೆ, ಉತ್ತರಾಧಿಕಾರ ತೆರಿಗೆ ಮತ್ತು ಉಡುಗೊರೆ ತೆರಿಗೆಯನ್ನು ಇದು ಒಳಗೊಂಡಿರುತ್ತದೆ.

ನೇರ ತೆರಿಗೆ ಸಂಗ್ರಹವು 2021-22ರ ಬಜೆಟ್‌ನಲ್ಲಿ ನಿಗದಿಪಡಿಸಲಾದ 11.08 ಲಕ್ಷ ಕೋಟಿ ರೂಪಾಯಿಯ ಗುರಿಯನ್ನು ದಾಟಿರುವುದು ವಿಶೇಷ. ಶೇ.40.75ರಷ್ಟು ಏರಿಕೆಯೊಂದಿಗೆ 6.62 ಲಕ್ಷ ಕೋಟಿ ರೂಪಾಯಿ ಮುಂಗಡ ತೆರಿಗೆ ಸಂಗ್ರಹವಾಗಿದೆ.

ಅದರ ನಾಲ್ಕನೇ ಕಂತನ್ನು ಠೇವಣಿ ಮಾಡಲು ಮಾರ್ಚ್ 15 ಕೊನೆಯ ದಿನಾಂಕವಾಗಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು 1.87 ಲಕ್ಷ ಕೋಟಿ ರೂಪಾಯಿಯನ್ನು ತೆರಿಗೆ ಮರುಪಾವತಿಯಾಗಿ ಬಿಡುಗಡೆ ಮಾಡಲಾಗಿದೆ.

ಆದಾಯಕ್ಕಿಂತ ನೂರಾರು ಪಟ್ಟು ಅಕ್ರಮ ಸಂಪತ್ತು: 18 ಸರ್ಕಾರಿ ಅಧಿಕಾರಿಗಳ ಕರಾಳ ಮುಖ ಬಿಚ್ಚಿಟ್ಟ ಎಸಿಬಿ

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link