ಹಾವೇರಿ:
ಯೂಕ್ರೇನ್ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಇದೇ 2ರಂದು ಮೃತಪಟ್ಟ ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಮೃತದೇಹ 20 ದಿನಗಳ ಬಳಿಕ ತಾಯ್ನಾಡನ್ನು ಸೇರಿದೆ. ಇದಾಗಲೇ ಮೃತದೇಹ ಬೆಂಗಳೂರಿನಿಂದ ನವೀನ್ ಗ್ರಾಮಕ್ಕೆ ತೆರಳುತ್ತಿದ್ದು ಬೆಳಗ್ಗೆ 10 ಗಂಟೆ ಸುಮಾರಿಗೆ ಗ್ರಾಮವನ್ನು ತಲುಪಲಿದೆ.
ಒಂದೆಡೆ ಪಾರ್ಥಿವ ಶರೀರವನ್ನು ಬರಮಾಡಿಕೊಳ್ಳಲು ಗ್ರಾಮಸ್ಥರು ಸಜ್ಜಾಗಿದ್ದರೆ, ಮನೆ ಮಗನನ್ನು ಕಳೆದುಕೊಂಡಿರುವ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಆದರೆ ಈ ನೋವಿನ ನಡುವೆಯೇ ಕುಟುಂಬಸ್ಥರು ಶ್ಲಾಘನಾರ್ಹ ನಿರ್ಧಾರ ತೆಗೆದುಕೊಂಡಿದ್ದಾರೆ.
Naveen ಮೃತದೇಹ ವೈದ್ಯಕೀಯ ಕಾಲೇಜಿಗೆ ದಾನ ನೀಡಲು ಕುಟುಂಬಸ್ಥರು ನಿರ್ಧಾರ
ನವೀನ್ ಡಾಕ್ಟರ್ ಆಗಬೇಕೆಂಬ ಹಂಬಲದಿಂದ ಎಂಬಿಬಿಎಸ್ ಓದಲು ಯೂಕ್ರೇನ್ಗೆ ಹೋಗಿದ್ದ. ಮಗ ಡಾಕ್ಟರ್ ಆಗುವ ಬದಲು ಅಲ್ಲಿಯೇ ಬಲಿಯಾದ. ಈ ನಡುವೆಯೇ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಕುಟುಂಬಸ್ಥರು ಮೃತ ದೇಹವನ್ನು ದಾವಣಗೆರೆ ಎಸ್ ಎಸ್ ಮೆಡಿಕಲ್ ಕಾಲೇಜು ಹಸ್ತಾಂತರ ಮಾಡಲು ನಿರ್ಧರಿಸಿದ್ದಾರೆ.
ಪಾರ್ಥಿವ ಶರೀರ ಬರಮಾಡಿಕೊಳ್ಳಲು ನವೀನ್ ಮನೆ ಮುಂದೆ ಶಾಮಿಯಾನ ಬ್ಯಾರಿಕೇಡ್ ಹಾಕಿ ಸಕಲ ಸಿದ್ಧತೆ ಮಾಡಲಾಗಿದೆ. ಇಂದು ಚಳಗೇರಿ ಗ್ರಾಮದಲ್ಲಿ ನವೀನ್ ಅಂತಿಮ ದರ್ಶನ ಮಾಡಲು ಮನೆ ಮುಂದೆ 4 ಗಂಟೆಗಳ ಕಾಲ ಪಾರ್ಥಿವ ಶರೀರಕ್ಕೆ ಗೌರವ ಸೂಚಿಸಲು ವ್ಯವಸ್ಥೆ ಮಾಡಲಾಗಿದೆ. ಬಳಿಕ ಲಿಂಗಾಯತ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನಡೆಯಲಿದೆ.
ಇದಾದ ಬಳಿಕ ನಂತರ ಮೃತ ದೇಹವನ್ನು ದಾವಣಗೆರೆ ಎಸ್ ಎಸ್ ಮೆಡಿಕಲ್ ಕಾಲೇಜು ಹಸ್ತಾಂತರ ಮಾಡಲಾಗುತ್ತದೆ. ನವೀನ್ ಕುಟುಬಂಸ್ಥರ ಆಸೆಯದಂತೆ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಲು ಮೃತದೇಹ ದಾನ ಮಾಡಲು ಕುಟುಂಬಸ್ಥರು ನಿರ್ಧಾರ ತೆಗೆದುಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ