ಬೆಂಗಳೂರು:
ಬೆಂಗಳೂರು, ಮಾ.24- ಎಪ್ಪತ್ತು ವರ್ಷ ಮೇಲ್ಪಟ್ಟ ನಿವೃತ್ತ ಸರ್ಕಾರಿ ನೌಕರ ಪಿಂಚಣಿಯನ್ನು ಹೆಚ್ಚಳ ಮಾಡಲು ಏಳನೇ ವೇತನ ಆಯೋಗದ ಅಧ್ಯಯನದ ವೇಳೆ ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಪಾಕ್ ಗೆ ನಿದ್ದೆಗೆಡಿಸುವ ಸುದ್ದಿ, ಭಾರತದ ಈ ‘ಬಾಹುಬಲಿ’ ಮಿಸೈಲ್ ಪರೀಕ್ಷೆ ಯಶಸ್ವಿ
ವಿಧಾನ ಪರಿಷತ್ ನ ಪ್ರಶ್ನೋತ್ತರ ಅವಯಲ್ಲಿ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಪ್ರಶ್ನೆಗೆ ಉತ್ತರಿಸಿದ ಅವರು, ರಾಷ್ಟ್ರೀಯ ಮತ್ತು ರಾಜ್ಯ ವೇತನ ಆಯೋಗಗಳ ಶಿಫಾರಸ್ಸಿನ ಮೇಲೆ 80 ವರ್ಷ ಮೇಲ್ಪಟ್ಟ ನಿವೃತ್ತ ಸರ್ಕಾರಿ ನೌಕರರಿಗೆ ಪಿಂಚಣಿಯಲ್ಲಿ ಶೇ.20, ಶೇ.30, ಶೇ.40, ಶೇ.50ರಷ್ಟು ಮೂಲ ಪಿಂಚಣಿ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. 70 ವರ್ಷ ಮೇಲ್ಪಟ್ಟವರಿಗೂ ಈ ಸೌಲಭ್ಯ ವಿಸ್ತರಿಸಲು ಏಳನೇ ವೇತನ ಆಯೋಗದ ವರದಿ ಬಳಿಕ ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ