ನವದೆಹಲಿ:
ಕೇಂದ್ರೀಯ ಸಶಸ್ತ್ರ ಸೇನಾ ಪಡೆಗಳ (ಸಿಎಪಿಎಫ್) ಯೋಧರು ವರ್ಷದಲ್ಲಿ ತಮ್ಮ ಕುಟುಂಬದೊಂದಿಗೆ ಕನಿಷ್ಠ 100 ದಿನಗಳನ್ನು ಕಳೆಯುವಂತೆ ಮಾಡುವ ಹೊಸ ಚಿಂತನೆಯನ್ನು ಕೇಂದ್ರ ಗೃಹ ಇಲಾಖೆ ನಿರ್ಧರಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪರಿಕಲ್ಪನೆಯ ಅಡಿಯಲ್ಲಿ, ಸಿಎಪಿಎಫ್ ಯೋಧರು ತಮ್ಮ ಕುಟುಂಬದೊಂದಿಗೆ ಕನಿಷ್ಠ 100 ದಿನಗಳನ್ನು ಕಳೆಯಲು ಅವಕಾಶ ಮಾಡಿಕೊಡುವ ಮಹತ್ವಾಕಾಂಕ್ಷೆಯ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಕಾರ್ಯಗತಗೊಳಿಸುವ ಸಾಧ್ಯತೆಯಿದೆ, ಸಮಗ್ರ ನೀತಿಯ ಬಾಹ್ಯರೇಖೆಗಳನ್ನು ರೂಪಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದಲ್ಲಿ ಬೀದಿ ಬದಿ ಮಕ್ಕಳ ಸಂಖ್ಯೆ ಎಷ್ಟು? ಎನ್ಪಿಸಿಆರ್ ವರದಿ ಹೇಳುವುದೇನು?
ಈ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಸಶಸ್ತ್ರ ಸೇನಾ ಪಡೆಗಳ ಅಧೀನದಲ್ಲಿ ಬರುವ ಎಲ್ಲಾ ಪಡೆಗಳಿಗೂ ಅನ್ವಯಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಈಗಿರುವ ನಿಯಮಗಳಲ್ಲಿ ಬದಲಾವಣೆ ತರಲು ತೀರ್ಮಾನಿಸಲಾಗಿದೆ. ಕಲ್ಯಾಣ ಕ್ರಮವನ್ನು ಹೇಗೆ ಕಾರ್ಯಗತಗೊಳಿಸಬಹುದು ಎಂಬುದರ ಕುರಿತು ಗೃಹ ಸಚಿವಾಲಯವು ಮುಂದಿನ ತಿಂಗಳೊಳಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ.
ಒಂದು ವರ್ಷದಲ್ಲಿ ತಮ್ಮ ಪಡೆಗಳಿಗೆ 60-65 ದಿನಗಳ ರಜೆಯನ್ನು ನೀಡಲು ಪಡೆ ಸಮರ್ಥವಾಗಿದೆ, ಆದರೆ ಕ್ಯಾಶುಯಲ್ ರಜೆ ಅಂಶವನ್ನು 15 ದಿನಗಳಿಂದ 28-30 ದಿನಗಳವರೆಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ತರಲು ಸಾಧ್ಯವಾದರೆ, ಸೈನಿಕರಿಗೆ 100 ದಿನಗಳ ರಜೆ ನೀಡಬಹುದುಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ವಿಮಾನ ಸಂಚಾರ ಪುನರಾರಂಭ; ವಾರಕ್ಕೆ 3,250 ಟ್ರಿಪ್ ಪ್ರಯಾಣ
ಹೊಸ ಪ್ರಸ್ತಾವನೆ ಸಿದ್ಧಪಡಿಸುವ ಸಲುವಾಗಿ ಈಗಾಗಲೇ ಹಲವಾರು ಸುತ್ತಿನ ಸಭೆಗಳು ನಡೆದಿದ್ದುಈ ಸೌಲಭ್ಯ ಜಾರಿಗೊಳಿಸಲು ಇರುವ ಆಡಳಿತಾತ್ಮಕ ಅಡಚಣೆಗಳನ್ನು ನಿರ್ಮೂಲನೆ ಮಾಡುವ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ. ಸಿಎಪಿಎಫ್ ನ ನಾನಾ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 10 ಲಕ್ಷ ಯೋಧರ ಮೇಲಿರುವ ದೈನಂದಿನ ಕರ್ತವ್ಯದ ಒತ್ತಡವನ್ನು ಇಳಿಸಿ, ಅವರ ಸಂತೋಷದ ಸಮಯವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ