‘ಹೈಕೋರ್ಟ್ ಆದೇಶ’ಕ್ಕೂ ಡೋಂಟ್ ಕೇರ್: ರಾಜ್ಯದ ಹಲವೆಡೆ ‘ಹಿಜಾಬ್ ಧರಿಸಿ’ಯೇ ‘SSLC ಪರೀಕ್ಷೆ’ ಬರೆದ ವಿದ್ಯಾರ್ಥಿಗಳು

ಬೆಂಗಳೂರು:

ರಾಜ್ಯಾಧ್ಯಂತ ಇಂದು ಹಿಜಾಬ್ ಸಂಘರ್ಷದ ನಡುವೆಯೂ ಎಸ್ ಎಸ್ ಎಲ್ ಸಿ ಪರೀಕ್ಷೆ  ಸುಸೂತ್ರವಾಗಿ ನಡೆದಿದೆ. ಕರ್ನಾಟಕ ಹೈಕೋರ್ಟ್ ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ ಎಂಬುದಾಗಿ ಮಹತ್ವದ ಆದೇಶ ನಂತ್ರ, ಶಿಕ್ಷಣ ಇಲಾಖೆ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಮವಸ್ತ್ರ ಕಡ್ಡಾಯಗೊಳಿಸಿತ್ತು.

ಈ ನಡುವೆಯೂ ಕೋರ್ಟ್ ಆದೇಶಕ್ಕೂ ಡೋಂಟ್ ಕೇರ್ ಎನ್ನುವಂತೆ ಮೊದಲ ದಿನ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಹಿಜಾಬ್ ಧರಿಸಿಯೇ ಪರೀಕ್ಷೆಯನ್ನು ವಿದ್ಯಾರ್ಥಿಗಳು ಬರೆದಿದ್ದಾರೆ.

ಏಪ್ರಿಲ್ 1 ರಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಅಮಿತ್ ಶಾ ಭೇಟಿ

ಹೌದು.. ರಾಜ್ಯದ ಕೆಲ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದಾಗ, ತರಗತಿ ಪ್ರವೇಶದ ನಂತ್ರ ಹಿಜಾಬ್ ತೆಗೆಸಲಾಗಿದೆ. ಆ ಬಳಿಕ ಪರೀಕ್ಷೆಗೆ ಅನುಮತಿಸಲಾಗಿದೆ. ಮತ್ತೆ ಕೆಲ ಜಿಲ್ಲೆಗಳಲ್ಲಿ ಹಿಜಾಬ್ ಧರಿಸಿಯೇ ಮೊದಲ ದಿನದ ಪರೀಕ್ಷೆ ಎಂದು ಹೇಳಿ, ನಂತ್ರದ ಪರೀಕ್ಷೆಯಂದು ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗದಂತೆ ವಿನಾಯ್ತಿ ನೀಡಿ ಪರೀಕ್ಷೆ ಬರೆಯೋದಕ್ಕೂ ಅವಕಾಶ ನೀಡಲಾಗಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಬಾಲಕಿಯ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢ ಶಾಲಾ ಪರೀಕ್ಷಾ ಕೇಂದ್ರ ನಿಗದಿ ಪಡಿಸಲಾಗಿತ್ತು. ಈ ಪರೀಕ್ಷಾ ಕೇಂದ್ರಕ್ಕೆ ಶಾಲಾ ಸಮವಸ್ತ್ರದ ದುಪ್ಪಟ್ಟವನ್ನೇ ಹಿಜಾಬ್ ಆಗಿ ಹಾಕಿಕೊಂಡು ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು ಕಂಡು ಬಂದಿತು.

ತಿಗಳರನ್ನು ಪ್ರವರ್ಗ-1ಕ್ಕೆ ಸೇರಿಸಲು ಪ್ರಾಮಾಣಿಕ ಪ್ರಯತ್ನ: ಅಶ್ವತ್ಥನಾರಾಯಣ ಭರವಸೆ

ಬೆಂಗಳೂರಿನ  ಶಿವಾಜಿನಗರದ ಬಳಿಯ ಸರ್ಕಾರಿ ವಿಕೆಓ ಶಾಲೆಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯೊಬ್ಬರು ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯೋದಕ್ಕೆ ಆಗಮಿಸಿದ್ದಳು. ಈ ವೇಳೆ ಪರೀಕ್ಷಾ ಕೇಂದ್ರದ ಹೊರಗೆ ಪ್ರಶ್ನಿಸಿದಾಗ, ನಮಗೆ ಗೊತ್ತೇ ಇಲ್ಲ. ಹಿಜಾಬ್ ಅದಕ್ಕೆ ಹಾಕಿಕೊಂಡು ಬಂದಿದ್ದೇವೆ. ಪೋಷಕರು ಹಿಜಾಬ್ ಧರಿಸಿ ಪರೀಕ್ಷೆ ಬರೆಯೋದಕ್ಕೆ ಅವಕಾಶ ನೀಡದಿದ್ದರೇ ತೆಗೆದು ಬರೆಯುವಂತೆ ಹೇಳಿದ್ದಾರೆ ಎಂದಾಗ, ಹಿಜಾಬ್ ತೆಗೆದು ಪರೀಕ್ಷೆ ಬರೆಯೋದಕ್ಕೆ ಅವಕಾಶ ಮಾಡಿಕೊಡಲಾಯಿತು.

ಶಿಕ್ಷಣ ಸಚಿವರ ತವರು ಕ್ಷೇತ್ರ ತುಮಕೂರಿನಲ್ಲಿಯೂ ಹಿಜಾಬ್ ಧರಿಸಿಯೇ ಪರೀಕ್ಷಾ ಕೊಠಡಿಯನ್ನು ವಿದ್ಯಾರ್ಥಿನಿಯರು ಪ್ರವೇಶಿಸಿದ್ದು ಕಂಡು ಬಂದಿದೆ. ತಿಪಟೂರಿನ ಬಾಲಕರ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದ ಕೊಠಡಿಗೆ ಹಿಜಾಬ್ ಧರಿಸಿಯೇ ವಿದ್ಯಾರ್ಥಿನಿಯರು ಪ್ರವೇಶಿಸಿದ್ದಾರೆ. ಇದನ್ನು ಗಮನಿಸಿದಂತ ಪ್ರಾಂಶುಪಾಲರು, ಹಿಜಾಬ್ ತೆಗೆಸಿದ್ದಾರೆ.

ಭಾರತದಲ್ಲಿ ಬೀದಿ ಬದಿ ಮಕ್ಕಳ ಸಂಖ್ಯೆ ಎಷ್ಟು? ಎನ್‌ಪಿಸಿಆರ್ ವರದಿ ಹೇಳುವುದೇನು?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಹಿಜಾಬ್ ಧರಿಸಿ ಬಂದಂತ ವಿದ್ಯಾರ್ಥಿನಿಯರು, ಪರೀಕ್ಷಾ ಕೊಠಡಿ ಪ್ರವೇಶದ ವೇಳೆ, ಹಿಜಾಬ್ ತೆಗೆದು ಪರೀಕ್ಷೆ ಬರೆದದ್ದು ಕಂಡು ಬಂದಿದೆ. ಹಿಜಾಬ್ ಸಮವಸ್ತ್ರ ಹೊಂದಿರುವ ವಿದ್ಯಾರ್ಥಿನಿಯರು, ಶಾಲಾ ಮುಖ್ಯಸ್ಥರ ಅನುಮತಿ ಪಡೆದು, ಇಂದಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದಾರೆ.

ಹಿಜಾಬ್ ಸಂಘರ್ಷಕ್ಕೆ ಕಾರಣವಾದಂತ ಉಡುಪಿ ಜಿಲ್ಲೆಯಲ್ಲಿಯೂ ಇಂದು ಹಿಜಾಬ್ ಗೊಂದಲವಿಲ್ಲದೇ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆದಿದೆ. ಪರೀಕ್ಷಾ ಕೇಂದ್ರದವರೆಗೆ ಹಿಜಾಬ್ ಧರಿಸಿ ಬಂದಂತ ವಿದ್ಯಾರ್ಥಿನಿಯರು, ಕೊಠಡಿ ಪ್ರವೇಶದ ವೇಳೆ ಹಿಜಾಬ್ ತೆಗೆದು, ಪರೀಕ್ಷೆಗೆ ಹಾಜರಾಗಿದ್ದಾರೆ.

ಯೋಧರಿಗೆ ವರ್ಷಕ್ಕೆ ಕನಿಷ್ಟ 100 ರಜೆ ಚಿಂತನೆ

ಈ ಮೂಲಕ ರಾಜ್ಯಾಧ್ಯಂತ ಕೆಲವೆಡೆ ಮೊದಲ ದಿನದ ಇಂದಿನ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಹಿಜಾಬ್ ಧರಿಸಿ ಕೆಲವೆಡೆ ಬರೆದ್ರೇ, ಮತ್ತೆ ಕೆಲವೆಡೆ ಹಿಜಾಬ್ ತೆಗೆದು ಯಾವುದೇ ಗೊಂದಲವಿಲ್ಲದಂತೆ ಪರೀಕ್ಷೆ ಬರೆಯಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link