5ನೇ ದಿನ ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿದ RRR

RRR:

ಮೂವಿ ಮಾಂತ್ರಿಕ ರಾಜಮೌಳಿ ನಿರ್ದೇಶನದ ಸಿನಿಮಾ RRR ಸಿನಿಮಾ ಬೇಜಾನ್ ಸದ್ದು ಮಾಡುತ್ತಿದೆ. ಬಾಕ್ಸಾಫೀಸ್‌ನಲ್ಲಿ ಹೊಸ ಹೊಸ ದಾಖಲೆಗಳನ್ನೂ ಸೃಷ್ಟಿಮಾಡುತ್ತಿದೆ. ಸಿನಿಮಾ ಬಿಡುಗಡೆಯಾದಲ್ಲಿಂದ ಇಲ್ಲಿವರೆಗೂ RRR ಬರೆದ ದಾಖಲೆ ಒಂದೆರಡಲ್ಲ. ಮೊದಲ ಮೂರು ದಿನ ಭರ್ಜರಿ ಗಳಿಕ ಕಂಡ ಬಳಿಕವೂ ಈ ಸಿನಿಮಾ ದಾಖಲೆ ಬರೆಯುತ್ತಿದೆ.

‘ಬಾಹುಬಲಿ’ ಬಳಿಕ ರಾಜಮೌಳಿ ನಿರ್ದೇಶನದ ಮತ್ತೊಂದು ಸಿನಿಮಾ RRR ಬಾಕ್ಸಾಫೀಸ್‌ನಲ್ಲೂ ಜಾದು ಮಾಡುತ್ತಿದೆ. ಈ ಸಿನಿಮಾ ರಾಜಮೌಳಿ ಬರೆದ ‘ಬಾಹುಬಲಿ’ ದಾಖಲೆಯನ್ನು ಅಳಿಸಿ ಹಾಕುತ್ತಾ? ಎನ್ನುವ ಕುತೂಹಲವಿದೆ. ಈ ಕಾರಣಕ್ಕೆ ಪ್ರತಿ ದಿನದ ಗಳಿಕೆ ಕೂಡ ಸಿನಿಮಂದಿಯಲ್ಲಿ ಕುತೂಹಲ ಕೆರಳಿಸುತ್ತಿದೆ.

ಮೊದಲು ರಾಹುಲ್ ಗಾಂಧಿ, ನಂತರ ಅಮಿತ್ ಶಾ ಸಿದ್ದಗಂಗಾ ಮಠಕ್ಕೆ ಭೇಟಿ

RRR ನಾಲ್ಕೇ ದಿನಕ್ಕೆ 500 ಕೋಟಿ ಗಳಿಕೆ ಮಾಡಿತ್ತು. ಹೀಗಾಗಿ ಐದನೇ ದಿನದಿಂದ ಸಿನಿಮಾದ ಕಲೆಕ್ಷನ್ ಎಷ್ಟಾಗುತ್ತೆ ಎನ್ನುವುದು ಕುತೂಹಲ ಕೆರಳಿಸಿದೆ. ಹಿಂದಿ, ತೆಲುಗು ಹಾಗೂ ವಿದೇಶದಲ್ಲೂ ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ. ಈ ಕಾರಣಕ್ಕೆ ಸಿನಿಮಾ ಗಳಿಕೆ ಮೇಲೆ ಇಡೀ ವಿಶ್ವವೇ ಕಣ್ಣಿಟ್ಟಿದ್ದಾರೆ. RRR ಇಡೀ ವಿಶ್ವದಲ್ಲಿ ಗಳಿಸಿದ್ದು ಎಷ್ಟು? ಹಿಂದಿ ಬಾಕ್ಸಾಪೀಸ್‌ ಗಳಿಕೆ ಎಷ್ಟು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

          ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ RRR 100 ಕೋಟಿ

          ರಾಜಮೌಳಿ ನಿರ್ದೇಶನದ RRR ಸಿನಿಮಾ ಹೊಸ ದಾಖಲೆಯನ್ನು ಸೃಷ್ಟಿಸುತ್ತಿದೆ. ಬಾಲಿವುಡ್‌ನಲ್ಲಿ ಬಾಕ್ಸಾಫೀಸ್‌ನಲ್ಲಿ RRR ಅಂದುಕೊಂಡಿದ್ದಕ್ಕಿಂತ ಹೆಚ್ಚು ಸದ್ದು ಮಾಡದೇ ಹೋದರೂ, ಐದನೇ ದಿನಕ್ಕೆ ನೂರು ಕೋಟಿ ಲಗ್ಗೆ ಇಡಲಿದೆ ಎಂದು ಅಂದಾಜಿಸಲಾಗಿದೆ. ಹಿಂದಿಯಲ್ಲಿ ಮೊದಲ ದಿನ 19 ಕೋಟಿ ಗಳಿಸಿತ್ತು. ಎರಡನೇ ದಿನ 24 ಕೋಟಿ, ಮೂರನೇ ದಿನ 31.50 ಕೋಟಿ ಹಾಗೂ ನಾಲ್ಕನೇ ದಿನ 17 ಕೋಟಿ ಲೂಟಿ ಮಾಡಿದೆ. ಒಟ್ಟು 91.50 ಕೋಟಿ ಇದೂವರೆಗೂ ಗಳಿಸಿದೆ. ಐದನೇ ದಿನ (ಮಾರ್ಚ್ 29)ದಂದು 10 ಕೋಟಿಗೂ ಅಧಿಕ ಗಳಿಸುತ್ತೆ ಎಂದು ಹೇಳಲಾಗಿದ್ದು, ಕೇವಲ ಹಿಂದಿ ವರ್ಷನ್ 100 ಕೋಟಿ ಗಳಿಸಲಿದೆ.

 

                RRR ವರ್ಲ್ಡ್‌ ವೈಡ್ ಕಲೆಕ್ಷನ್ ಎಷ್ಟು?

ರಾಜಮೌಳಿಯ RRR ಸಿನಿಮಾ ವಿಶ್ವದಾದ್ಯಂತ ಕೂಡ ಅದ್ಭುತ ಗಳಿಕೆ ಕಂಡಿದೆ. ಎಲ್ಲೆಲ್ಲಿ RRR ಸಿನಿಮಾ ರಿಲೀಸ್ ಆಗಿದೆಯೋ ಅಲ್ಲೆಲ್ಲಾ ಸಿನಿಮಾ ಚಿಂದಿ ಉಡಾಯಿಸುತ್ತಿದೆ. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ ವಿಶ್ವದಾದ್ಯಂತ ಸಿನಿಮಾ ಗ್ರಾಸ್ ಕಲೆಕ್ಷನ್ 565 ಕೋಟಿ ಎನ್ನಲಾಗಿದೆ.

ಆಂಧ್ರ-ತೆಲಂಗಾಣ 232.65 ಕೋಟಿ
ತಮಿಳುನಾಡು 18.90 ಕೋಟಿ
ಕೇರಳ 5.35 ಕೋಟಿ
ಹಿಂದಿ 45 ಕೋಟಿ
ವಿದೇಶ 63.80 ಕೋಟಿ
ರೆಸ್ಟ್ ಆಫ್ ಕರ್ನಾಟಕ 04.20 ಕೋಟಿ
ಒಟ್ಟು 392.20 ಕೋಟಿ (Profit) Gross(565) ಕೋಟಿ

ಎರಡು ವರ್ಷ ನಂತರ ರಾಜ್ಯದ ಜನತೆ ಖುಷಿಪಡುವ ಸಂಗತಿ: 25 ಜಿಲ್ಲೆಗಳಲ್ಲಿ ಶೂನ್ಯ ಕೋವಿಡ್ ಕೇಸ್ ಗಳು ದಾಖಲು

              RRR ಕರ್ನಾಟಕ ಗಳಿಕೆಯೆಷ್ಟು?

ರಾಜಮೌಳಿ ಸಿನಿಮಾ ಕರ್ನಾಟಕದಲ್ಲಿ ಉತ್ತಮ ಗಳಿಕೆ ಕಾಣುತ್ತೆ. ಬಾಹುಬಲಿ ಕೂಡ ಅದ್ಭುತ ಕಲೆಕ್ಷನ್ ಮಾಡಿತ್ತು. ಕರ್ನಾಟಕದಲ್ಲಿ ನಾಲ್ಕು ದಿನದ ಗಳಿಕೆ ಕೂಡ ಜೋರಾಗಿದೆ. ಮೊದಲ ದಿನ ಗ್ರಾಸ್ ಕಲೆಕ್ಷನ್ 16 ಕೋಟಿ ಗಳಿಸಿದ್ದರೂ, ನಾಲ್ಕು ದಿನಕ್ಕೆ 22 ಕೋಟಿ ನಿರ್ಮಾಪಕರ ಜೇಬು ಸೇರಿದೆ ಎನ್ನಲಾಗಿದೆ. ಇನ್ನು ಐದನೇ ದಿನ ಕೂಡ ಬಾಕ್ಸಾಫೀಸ್ ಕಲೆಕ್ಷನ್ ಜೋರಾಗೇ ಇದೆ ಎನ್ನಲಾಗಿದೆ.

 

                4ನೇ ದಿನದ RRR ಸ್ಕೋರ್ ಏನು?

         RRR ಸಿನಿಮಾ ಬಾಲಿವುಡ್ ಸಿನಿಪ್ರಿಯರಿಗೆ ತುಂಬಾನೇ ಇಷ್ಟ ಆಗಿದೆ. ಹೀಗಾಗಿ ಜನರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. 4ನೇ ದಿನ ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ 17 ಕೋಟಿ ಗಳಿಸಿದೆ. ಸೋಮವಾರ( ಮಾರ್ಚ್ 28) ರಂದು ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಲಿಸ್ಟ್ ಸೇರಿದೆ. ಬಿಡುಗಡೆಯಾದ ನಾಲ್ಕೇ ದಿನ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ 15.05 ಕೋಟಿ, ಸೂರ್ಯವಂಶಿ 14.51 ಕೋಟಿ, ಗಂಗೂಬಾಯಿ ಕಾಠಿಯಾವಾಡಿ- 8.19 ಕೋಟಿ ಗಳಿಕೆ ಕಂಡು ನಾಲ್ಕನೇ ಸ್ಥಾನದಲ್ಲಿದೆ.

ಏಪ್ರಿಲ್ 1 ರಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಅಮಿತ್ ಶಾ ಭೇಟಿ

         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap