RRR 1000cr: ಸಾವಿರ ಕೋಟಿ ಕ್ಲಬ್ ಸೇರಿದ RRR: ‘ದಂಗಲ್’ ದಾಖಲೆ ಮುರಿಯಲು ಇನ್ನೆಷ್ಟು ಬೇಕು?

RRR:

ರಾಜಮೌಳಿ ತಮ್ಮ ಟಾರ್ಗೆಟ್ ರೀಚ್ ಆಗಿದ್ದಾರೆ. ಮತ್ತೊಂದು ಸಿನಿಮಾ ವಿಶ್ವದ ಬಾಕ್ಸಾಫೀಸ್‌ನಲ್ಲಿ 1000 ಕೋಟಿ ಲೂಟಿ ಮಾಡಿದೆ. ಈ ಮೂಲಕ ಹೊಸದೊಂದು ದಾಖಲೆಯನ್ನು ಜಕ್ಕಣ್ಣ ಸೃಷ್ಟಿ ಮಾಡಿದ್ದಾರೆ. ಒಬ್ಬನೇ ನಿರ್ದೇಶಕನ ಎರಡು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ 1000 ಕೋಟಿ ಕ್ಲಬ್ ಸೇರಿದ್ದು ಇತಿಹಾಸ.

ರಾಜಮೌಳಿ, ಜೂ.ಎನ್‌ಟಿಆರ್, ರಾಮ್ ಚರಣ್ ತೇಜಾ ಈ ಮೂವರ ಕಾಂಬಿನೇಷನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜಾದು ಮಾಡಿದೆ. ಆದರೆ, ‘ಬಾಹುಬಲಿ 2’ ದಾಖಲೆಯನ್ನು ಮುರಿಯಲು ಇನ್ನೂ ಸಾಧ್ಯವಾಗಿಲ್ಲ. ‘ಬಾಹುಬಲಿ 2’ ದಾಖಲೆ ಸೈಡಿಗಟ್ಟಲು RRR ಚಿತ್ರಕ್ಕೆ ಇನ್ನೂ 900 ಕೋಟಿ ಲೂಟಿ ಮಾಡಬೇಕಿದೆ.

ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದ ಆರ್​​ಸಿಬಿ: ಪಾತಾಳದಲ್ಲಿ ಸಿಎಸ್​ಕೆ, ಮುಂಬೈ

1000 ಕೋಟಿ ಕ್ಲಬ್ ಸೇರಿದ RRR

RRR ವಿಶ್ವದಲ್ಲಿ ಹಲವು ದಾಖಲೆಗಳನ್ನು ಮಾಡಿದೆ. ಬಾಕ್ಸಾಫೀಸ್‌ನಲ್ಲಿ ಗುದ್ದಾಡಲು ಬಾಲಿವುಡ್‌ ಪರದಾಡುವಾಗ RRR ಸಿನಿಮಾ 1000 ಕೋಟಿ ಕ್ಲಬ್ ಸೇರಿರುವುದು ಕಡಿಮೆ ಏನಲ್ಲಾ. ಈ ಮೂಲಕ ರಾಜಮೌಳಿ ಹಾಲಿವುಡ್ ಸಿನಿಮಾಗಳಿಗೆ ಪೈಪೋಟಿ ನೀಡಬಲ್ಲ ಏಕೈಕ ನಿರ್ದೇಶಕ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

RRR ಸಿನಿಮಾ ರಿಲೀಸ್ ಆಗಿ ಇಂದಿಗೆ 16 ದಿನಗಳಾಗಿವೆ. ಇಷ್ಟು ದಿನಗಳಲ್ಲಿ ರಾಜಮೌಳಿ ಸಿನಿಮಾ ಬಾಚಿದ್ದು 1000 ಕೋಟಿ. ಇದು ಆಮೀರ್ ಖಾನ್ ‘ದಂಗಲ್’ ದಾಖಲೆಯನ್ನು ಮುರಿಯುವುದಕ್ಕೆ ಇನ್ನೂ 1050 ಕೋಟಿಯ ಅಗತ್ಯವಿದೆ. ಆದರೆ, ಇಷ್ಟು ದೊಡ್ಡ ಮೊತ್ತವನ್ನು RRR ಕಲೆ ಹಾಕುತ್ತಾ? ಅನ್ನೋದು ಈಗ ಯಕ್ಷ ಪ್ರಶ್ನೆಯಾಗಿದೆ.

ಹೈದರಾಬಾದ್ ತಂಡಕ್ಕೆ ಗುಜರಾತ್ ಸವಾಲು! ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್ XI?

1000 ಕೋಟಿ ಗಳಿಸಿದ ಮೂರನೇ ಸಿನಿಮಾ RRR

ಭಾರತೀಯ ಸಿನಿಮಾಗಳು ಸಾವಿರ ಕೋಟಿ ಗಡಿ ಮುಟ್ಟಿದ ಉದಾಹರಣೆಗಳೇ ಇಲ್ಲ. ಆದರೆ ‘ಬಾಹುಬಲಿ 2’ ಕೇವಲ ಭಾರತದಲ್ಲಿ 1000 ಕೋಟಿ ಗಡಿ ದಾಟುವ ಮೂಲಕ ಸಾವಿರ ಕೋಟಿ ಕ್ಲಬ್ ಸೇರಿದ ಮೊದಲ ಸಿನಿಮಾ ಎನಿಸಿಕೊಂಡಿದೆ. ಇನ್ನು ಈ ದಾಖಲೆಯನ್ನು ಮತ್ತೆ RRR ಮುರಿಯುತ್ತಾ ಅನ್ನೋದು ಕೂಡ ಅಷ್ಟೇ ಕುತೂಹಲ ಕೆರಳಿಸಿದೆ.

ಆಮಿರ್ ಖಾನ್ ನಟಿಸಿದ್ದ ‘ದಂಗಲ್’ ಸಿನಿಮಾ ವಿಶ್ವದಾದಂತ 2024 ಕೋಟಿ ಗಳಿಸಿತ್ತು. ಇದೂವರೆಗೂ ಭಾರತೀಯ ಸಿನಿಮಾ ಇಷ್ಟು ದೊಡ್ಡ ಮಟ್ಟದ ಸಾಧನೆಯನ್ನು ಮಾಡಿಲ್ಲ. ಸಾವಿರ ಕೋಟಿ ದಾಟಿದ ಮೂರು ಸಿನಿಮಾಗಳಲ್ಲಿ ‘ದಂಗಲ್’, ‘ಬಾಹುಬಲಿ 2’ ಹಾಗೂ ‘RRR’ ಸೇರಿಕೊಂಡಿವೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ