ಅಮೆರಿಕ ಮುಟ್ಟಿ ನೋಡಿಕೊಳ್ಳುವಂತಹ ತಿರುಗೇಟು ಕೊಟ್ಟ ಭಾರತ!

ಭಾರತದಲ್ಲಿನ ಮಾನವ ಹಕ್ಕು ಉಲ್ಲಂಘನೆ ಬಗ್ಗೆ ಮಾತಾಡಿದ್ದ ಅಮೆರಿಕದ ಸ್ಟೇಟ್‌ ಸೆಕ್ರಟರಿ ಆಂಟನಿ ಬ್ಲಿಂಕೆನ್‌ಗೆ ತಿರುಗೇಟು ನಿಡೀರೋ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ನಾವು ಕೂಡ ಅಮೇರಿಕದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿ ಬಗ್ಗೆ ಅಭಿಪ್ರಾಯ ಹೊಂದಿದ್ದೇವೆ ಅಂತ ಹೇಳಿದ್ದಾರೆ.

ವಾಷಿಂಗ್ಟನ್‌ನ ಸುದ್ಧಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವ್ರು, 2+2 ಮಾತುಕತೆಯಲ್ಲಿ ʼಮಾನವ ಹಕ್ಕುಗಳುʼ ಚರ್ಚೆಯ ವಿಷಯವಾಗಿರ್ಲಿಲ್ಲ. ಆದ್ರೆ ನಮ್ಮ ಬಗ್ಗೆ ಅಭಿಪ್ರಾಯಗಳನ್ನ ಹೊಂದೋದಕ್ಕೆ ಎಲ್ಲರೂ ಸ್ವತಂತ್ರರು. ಇನ್ನು ಅದೇ ರೀತಿ ನಮಗೂ ಕೂಡ ಅವ್ರ ಅಭಿಪ್ರಾಯಗಳ ಬಗ್ಗೆ, ಆಸಕ್ತಿಗಳ ಬಗ್ಗೆ, ಲಾಬಿಗಳ ಬಗ್ಗೆ ಮತ್ತು ಅವ್ರನ್ನ ಆ ರೀತಿ ಮಾತಾಡೋಕೆ ಪ್ರಚೋದಿಸುವ ವೋಟ್‌ ಬ್ಯಾಂಕ್‌ಗಳ ಬಗ್ಗೆ ಅಭಿಪ್ರಾಯ ಹೊಂದೋದಕ್ಕೆ ಸಮಾನವಾದ ಹಕ್ಕಿದೆ.

ರಷ್ಯಾದ ಬೃಹತ್ ಯುದ್ಧನೌಕೆಯ ಮೇಲೆ ಅಪ್ಪಳಿಸಿದ ಉಕ್ರೇನ್ ಕ್ಷಿಪಣಿಗಳು: ಸಾವಿರಾರು ಸೈನಿಕರ ಸಾವಿನ ಶಂಕೆ

 ಈ ಬಗ್ಗೆ ಚರ್ಚೆ ಆಗುತ್ತೋ ಆವಾಗಾವಾಗ ನಾವು ಕೂಡ ನಮ್ಮ ಅಭಿಪ್ರಾಯ ಮಂಡಿಸೋಕೆ ಹಿಂಜರೆಯಲ್ಲ. ನಾವೂ ಕೂಡ ಅಮೆರಿಕ ಸೇರಿದಂತೆ ಇತರೆ ದೇಶಗಳ ಮಾನವ ಹಕ್ಕುಗಳ ಪರಿಸ್ಥಿತಿ ಬಗ್ಗೆ ಮಾತಾಡ್ತೀವಿ ಅಂತ ಜೈಶಂಕರ್​​ ಹೇಳಿದ್ದಾರೆ. ಇನ್ನು ಇದೇ ಸಮಯದಲ್ಲಿ ಅವ್ರು ಯುಕ್ರೇನ್‌ ವಿಚಾರವಾಗಿ ರಷ್ಯಾ ಮೇಲೆ ಭಾರತ ಮತ್ತು ಚೀನಾ ತೆಗೆದುಕೊಂಡಿರೋ ನಿಲುವಗಳಲ್ಲಿ ಭಿನ್ನತೆ ಇರೋದನ್ನ ಅಮೆರಿಕ ಗುರುತಿಸುತ್ತೆ ಅಂತಾನೂ ಹೇಳಿದ್ದಾರೆ.

“ಇನ್ನೂ ನಿಮ್ಗೆ ಅವಕಾಶವಿದೆ, ನಮ್ಮ ಭವಿಷ್ಯ ಹಾಳಾಗದಂತೆ ಕಾಪಾಡಿ” : ಸಿಎಂ ಬಳಿ ಹೈಕೋರ್ಟ್ ಮೆಟ್ಟಿಲೇರಿದ್ದ ಮುಸ್ಲಿಂ ವಿದ್ಯಾರ್ಥಿನಿ ಮನವಿ

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ