‘ಇದು ನಮ್ಮ ಪಕ್ಷದ ಅಥವಾ ನಮ್ಮ ವೈಯಕ್ತಿಕ ವಿಚಾರವೂ ಅಲ್ಲ. ರಾಷ್ಟ್ರದಲ್ಲಿ ಆಗುತ್ತಿರುವ ಬಿಜೆಪಿ ಆಳ್ವಿಕೆ : ಡಿ.ಕೆ. ಶಿವಕುಮಾರ್

            ‘ಇದು ನಮ್ಮ ಪಕ್ಷದ ಅಥವಾ ನಮ್ಮ ವೈಯಕ್ತಿಕ ವಿಚಾರವೂ ಅಲ್ಲ. ರಾಷ್ಟ್ರದಲ್ಲಿ ಆಗುತ್ತಿರುವ ಬಿಜೆಪಿ ಆಳ್ವಿಕೆ ಬಗ್ಗೆ ಜನ ನೊಂದಿದ್ದಾರೆ.ರಾಜ್ಯದಲ್ಲಿ 2 ಲಕ್ಷ ನೋಂದಾಯಿತ ಗುತ್ತಿಗೆದಾರರಿದ್ದು, ಹಳ್ಳಿಗಳಲ್ಲಿ ನೋಂದಣಿ ಆಗದ ಸಾಕಷ್ಟು ಗುತ್ತಿಗೆದಾರರು ಇದ್ದಾರೆ. ಅವರ ಪರಿಸ್ಥಿತಿಯೂ ಇದೇ ಆಗಿದೆ.ಕಳೆದ ವರ್ಷ ಜೂನ್ 7 ರಂದು ಕೆಂಪಣ್ಣನವರು ಪ್ರಧಾನಿಗಳಿಗೆ ಪತ್ರ ಬರೆದ ನಂತರ ಏನೆಲ್ಲಾ ಆಗಿದೆ ಎಂದು ನೋಡಿದ್ದೀರಿ. ಪ್ರಧಾನಿಗಳು ಈ 40% ಕಮಿಷನ್ ವಿಚಾರವಾಗಿ ಒಂದು ಚೂರು ಚಿಂತನೆ ಮಾಡಿದ್ದರೆ vishayada ಗಂಭೀರತೆ ಈ ಮಟ್ಟಕ್ಕೆ ಹೋಗುತ್ತಿರಲಿಲ್ಲ.

ಸಂತೋಷ್ ಪಾಟೀಲ್ ಅವರು ಕೂಡ ಪತ್ರ ಬರೆದಿದ್ದು, ಮಾಧ್ಯಮಗಳಿಗೆ ಹೇಳಿಕೆ ಕೊಟ್ಟು, ಸ್ವತಃ ಬಿಜೆಪಿ ಕಾರ್ಯಕರ್ತನಿಗೆ ಯಾವ ರೀತಿ ತೊಂದರೆ ಆಗಿದೆ ಎಂದು ಸರ್ಕಾರದ ಗಮನ ಸೆಳೆದಿದ್ದರು.ಅವರ ಧರ್ಮಪತ್ನಿ ನೋವು ತೋಡಿಕೊಂಡಿದ್ದು, ಪಂಚಾಯ್ತಿ ಅಧ್ಯಕ್ಷರು ಸಚಿವರು ಕಾಮಗಾರಿ ನಡೆಸಲು ಸೂಚನೆ ಕೊಟ್ಟ ಬಗ್ಗೆ ಹೇಳಿದ್ದಾರೆ.ಈ 40% ಕಮಿಷನ್ ವಿಚಾರವನ್ನು ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ತನಿಖೆ ಮಾಡಬೇಕು. ಎಫ್ ಐಆರ್ ನಲ್ಲಿ 40 % ಲಂಚದ ಕಿರುಕುಳ ವಿಚಾರ ಸ್ಪಷ್ಟವಾಗಿದೆ.

ಬಾಕ್ಸ್‌ ಆಫೀಸ್‌ನಲ್ಲಿ ಇತಿಹಾಸ ಬರೆದ ‘ಕೆಜಿಎಫ್ ಚಾಪ್ಟರ್ 2’.. ಫಸ್ಟ್ ಡೇ ಕಲೆಕ್ಷನ್‌ ಏಷ್ಟು  ಕೋಟಿ ?

ಈ ಎಫ್ ಐಆರ್ ನಲ್ಲಿ ನೀವು ಯಾಕೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಪ್ರಕರಣ ಸೇರಿಸಿಲ್ಲ? ಯಾಕೆ ಮುಚ್ಚಿಟ್ಟಿದ್ದೀರಿ? ನೀವೇ ಸಚಿವರು ಯಾವುದೇ ತಪ್ಪು ಮಾಡಿಲ್ಲ ಎಂದು ನ್ಯಾಯಾಧೀಶರಂತೆ ತೀರ್ಪು ನೀಡುತ್ತಿದ್ದೀರಿ? ಎಂದು ನಾನು ಸಿಎಂ ಅವರನ್ನು ಪ್ರಶ್ನಿಸಲು ಬಯಸುತ್ತೇನೆ.

ಇಡೀ ದೇಶ ನೋಡುತ್ತಿದೆ. ದೇಶದಲ್ಲೇ ಕರ್ನಾಟಕ ಭ್ರಷ್ಟಾಚಾರದ ಮಹಾ ರಾಜಧಾನಿ ಆಗಿದೆ. ನೀವು ನಿಮ್ಮ ಅಧಿಕಾರದ ಅವಧಿಯಲ್ಲಿ ನೈತಿಕ ಪೊಲೀಸ್ ಗಿರಿಗೆ ಬೆಂಬಲ ಕೊಟ್ಟಿರಿ, ನಂತರ ನಡೆದ ಘಟನೆಗಳು, ಯಾರು ಏನೆಲ್ಲ ಹೇಳಿದ್ದಾರೆ ಎಂದು ನೀವೂ ನೋಡಿದ್ದೀರಿ. ಆ ಮೂಲಕ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹಾಳು ಮಾಡುತ್ತಿದ್ದೀರಿ.

ಭ್ರಷ್ಟಾಚಾರದ ಬಗ್ಗೆ ಪ್ರಧಾನಿಗಳು, ನಡ್ಡಾ ಅವರು ಪ್ರಶ್ನಿಸದೆ, ಸಮ್ಮತಿ ನೀಡಿದ್ದೀರಿ. ಸದನದಲ್ಲಿ ಸಿದ್ದರಾಮಯ್ಯ ಅವರು ಈ ವಿಚಾರವಾಗಿ ಗೊತ್ತುವಳಿ ಸೂಚನೆ ನೀಡಿದಾಗ ಚರ್ಚೆಗೆ ಅವಕಾಶ ಕೊಟ್ಟಿದ್ದರೆ, ಈ ಬಗ್ಗೆ ಮನವರಿಕೆ ಮಾಡಿಕೊಡುತ್ತಿದ್ದೆವು. ಆದರೆ ಕಾಗೇರಿ ಅವರು ಸರ್ಕಾರದ ಒತ್ತಡದ ಮೇಲೆ ವಿಚಾರವನ್ನು ಪಕ್ಕಕ್ಕೆ ಸರಿಸಿ ಚರ್ಚೆಗೆ ಅವಕಾಶ ನೀಡಲಿಲ್ಲ.

ಗೆಲುವಿನ ಓಟ ಮುಂದುವರೆಸುತ್ತಾ ಹೈದರಾಬಾದ್?: ಕೆಕೆಆರ್​ಗಿಂದು ಮತ್ತೊಂದು ಸವಾಲು

     ಅದರ ಪರಿಣಾಮ ಇಂದು ಬಿಜೆಪಿ ಕಾರ್ಯಕರ್ತನ ಜೀವ ಬಲಿಯಾಗಿದೆ. ನಾವು 3 ದಿನಗಳಿಂದ ಸಚಿವರ ರಾಜೀನಾಮೆ ಬಗ್ಗೆ ಮಾತನಾಡಿಲ್ಲ. ಮೊದಲು ಭ್ರಷ್ಟಾಚಾರ ಆರೋಪದಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ.ಇವುಗಳಿಗಾಗಿ ನಾವು ನಾಳೆಯಿಂದ ಜಿಲ್ಲಾ ಮಟ್ಟದಲ್ಲಿ 9 ತಂಡಗಳಲ್ಲಿ ವಿವಿಧ ಜಿಲ್ಲೆಗಳಿಗೆ ಹೋಗಿ 40% ಲಂಚದ ವಿಚಾರವಾಗಿ ಬೆಳಕು ಚೆಲ್ಲುವ ಕಾರ್ಯಕ್ರಮ ಮಾಡುತ್ತೇವೆ.

ನಂತರ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಈ ರಾಜ್ಯವನ್ನು ಭ್ರಷ್ಟಾಚಾರದ ರಾಜಧಾನಿಯಾಗಿ ಮಾಡಿರುವ ಬಗ್ಗೆ ಅರಿವು ಮೂಡಿಸಲಾಗುವುದು. ಇದು ನಮ್ಮ ಮುಂದಿನ ಹೋರಾಟ.ಮುಖ್ಯಮಂತ್ರಿಗಳು ಹಾಗೂ ಯಡಿಯೂರಪ್ಪನವರು ಈಗಲೇ ತೀರ್ಪು ನೀಡುತ್ತಿದ್ದಾರೆ. ಮೃತನ ಕುಟುಂಬ ಸದಸ್ಯರು ಯಡಿಯೂರಪ್ಪನವರಿಂದ ನ್ಯಾಯ ಸಿಗುವ ನಿರೀಕ್ಷೆಯಲ್ಲಿದ್ದು, ಆದರೆ ಯಡಿಯೂರಪ್ಪನವರು 3 ತಿಂಗಳಲ್ಲಿ ಈಶ್ವರಪ್ಪನವರು ಮತ್ತೆ ಮಂತ್ರಿಯಾಗುತ್ತಾರೆ ಎಂದು ಹೇಳುತ್ತಿದ್ದಾರೆ. ಇವರಿಂದ ನ್ಯಾಯ ಸಿಗುವುದಿಲ್ಲ, ಹೈಕೋರ್ಟ್ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ಈ ಪ್ರಕರಣದ ತನಿಖೆ ನಡೆಯಬೇಕು.

ಸಚಿವರ ರಕ್ಷಣೆಗೆ ನಿಂತು ಸಿಎಂ ಬೊಮ್ಮಾಯಿ ಅವರು ಬಹುದೊಡ್ಡ ಅಪರಾಧ ಮಾಡುತ್ತಿದ್ದಾರೆ: ಡಿ.ಕೆ. ಶಿವಕುಮಾರ್

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link