‘ಆರ್​ಆರ್​ಆರ್’ ಚಿತ್ರದ ಒಟ್ಟಾರೆ ಕಲೆಕ್ಷನ್ ಎಷ್ಟು? ಇಲ್ಲಿದೆ ಪೂರ್ಣ ವಿವರ

RRR :

 ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಚಿತ್ರ ಇದುವರೆಗೆ ಒಟ್ಟಾರೆ 1046 ಕೋಟಿ ರೂ ಬಾಚಿಕೊಂಡಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕಲೆಕ್ಷನ್ ತಗ್ಗಲಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಇದುವರೆಗಿನ ಗಳಿಕೆಯ ಲೆಕ್ಕಾಚಾರ ಇಲ್ಲಿದೆ.ಎಲ್ಲೆಡೆ ‘ಕೆಜಿಎಫ್ ಚಾಪ್ಟರ್ 2’  ಅಬ್ಬರ ಜೋರಾಗಿದೆ. ದೊಡ್ಡ ಮಟ್ಟದಲ್ಲಿ ಚಿತ್ರ ರಿಲೀಸ್ ಆಗಿದ್ದು, ಬಹಳಷ್ಟು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.
ವಿಶ್ವಾದ್ಯಂತ ಚಿತ್ರ ಪ್ರದರ್ಶನವಾಗುತ್ತಿರುವ ಸ್ಕ್ರೀನ್​ಗಳ ಸಂಖ್ಯೆ 10,000 ದಾಟಿದೆ.ಕೆಲವು ವರದಿಗಳ ಪ್ರಕಾರ ತಮಿಳುನಾಡು ಸೇರಿದಂತೆ ಹಲವೆಡೆ ಸ್ಕ್ರೀನ್​ಗಳ ಸಂಖ್ಯೆಯಲ್ಲಿ ಏರಿಕೆಯಾಗುವ ನಿರೀಕ್ಷೆ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಚಿತ್ರದ ಸ್ಕ್ರೀನ್​ಗಳ ಸಂಖ್ಯೆ ಹೆಚ್ಚಲಿದೆ ಎಂದು ವರದಿಗಳು ಹೇಳಿವೆ. ಈ ನಡುವೆ ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ತನ್ನ ಪ್ರದರ್ಶನ ಮುಂದುವರೆಸ
ಹಿಂದಿ ಸೇರಿದಂತೆ ಇತರ ಭಾಷೆಗಳಲ್ಲಿ ಚಿತ್ರದ ಕಲೆಕ್ಷನ್ ಸಹಜವಾಗಿಯೇ ತಗ್ಗಿದೆ. ಆದರೆ ತೆಲುಗು ರಾಜ್ಯಗಳಲ್ಲಿ ಕಲೆಕ್ಷನ್ ಉತ್ತಮವಾಗಿ ಮುಂದುವರೆದಿದೆ. ಚಿತ್ರವು ಇದುವರೆಗೆ ಒಟ್ಟಾರೆ 1046 ಕೋಟಿ ರೂ ಗಳಿಸಿದ್ದು, ಒಟ್ಟಾರೆ ಗಲ್ಲಾಪೆಟ್ಟಿಗೆ ಲೆಕ್ಕಾಚಾರ ಇಲ್ಲಿದೆ.
ತಮಿಳು ಹಾಗೂ ತೆಲುಗು ಭಾಷಿಕ ರಾಜ್ಯಗಳಲ್ಲಿ ವಿಜಯ್ ನಟನೆಯ ‘ಬೀಸ್ಟ್’ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಇದರಿಂದ ‘ಆರ್​ಆರ್​ಆರ್​’ ಚಿತ್ರಮಂದಿರಗಳ ಸಂಖ್ಯೆ ಕಡಿಮೆಯಾಗಿತ್ತು. ಇದೀಗ ಕನ್ನಡ ಹಾಗೂ ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಹುತೇಕ ‘ಕೆಜಿಎಫ್ ಚಾಪ್ಟರ್ 2’ ಪ್ರದರ್ಶನವಾಗುತ್ತಿದೆ. ಹೀಗಾಗಿ ‘ಆರ್​ಆರ್​ಆರ್’ ಚಿತ್ರದ ಸ್ಕ್ರೀನ್​ಗಳ ಸಂಖ್ಯೆ ತಗ್ಗಿದೆ.

ಗೆಲುವಿನ ಓಟ ಮುಂದುವರೆಸುತ್ತಾ ಹೈದರಾಬಾದ್?: ಕೆಕೆಆರ್​ಗಿಂದು ಮತ್ತೊಂದು ಸವಾಲು

 

‘ಆರ್​ಆರ್​ಆರ್​’ ಕಲೆಕ್ಷನ್ ಹೇಗಿದೆ?

ತೆರೆಕಂಡ 20ನೇ ದಿನ ರಾಜಮೌಳಿ ನಿರ್ದೇಶನದ ಚಿತ್ರ ‘ಆರ್​ಆರ್​ಆರ್​’ ಹಿಂದಿಯಲ್ಲಿ 3 ಕೋಟಿ ರೂ ಗಳಿಸಿದೆ. ಈ ಮೂಲಕ ಕಲೆಕ್ಷನ್ 238 ಕೋಟಿ ರೂಗೆ ತಲುಪಿದೆ. ಈ ಬಗ್ಗೆ ಬಾಕ್ಸಾಫೀಸ್ ವಿಶ್ಲೇಶಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದು, ಮೂರನೇ ವಾರದಲ್ಲಿ- ಶುಕ್ರವಾರ ₹ 5 ಕೋಟಿ, ಶನಿವಾರ ₹ 7.50 ಕೋಟಿ, ಭಾನುವಾರ ₹ 10.50 ಕೋಟಿ, ಸೋಮವಾರ ₹ 3.50 ಕೋಟಿ, ಮಂಗಳವಾರ ₹ 3 ಕೋಟಿಗಳನ್ನು ಚಿತ್ರ ಗಳಿಸಿದೆ.

ಕರ್ನಾಟಕದಲ್ಲಿ ಏ. 18ರವರೆಗೆ ಕರ್ನಾಟಕದಲ್ಲಿ ಮಳೆ; ಕರಾವಳಿಯಲ್ಲಿ ಆರೆಂಜ್ ಅಲರ್ಟ್​ ಘೋಷಣೆ

ವಿಶ್ವಾದ್ಯಂತ ‘ಆರ್​ಆರ್​ಆರ್​’ ಕಲೆಕ್ಷನ್ ಎಷ್ಟಾಗಿದೆ? ಮುಂದೆ ಏನಾಗಬಹುದು?

ವಿಶ್ವಾದ್ಯಂತ ‘ಆರ್​ಆರ್​ಆರ್’ ಚಿತ್ರದ ಕಲೆಕ್ಷನ್ 1046.71 ಕೋಟಿ ರೂಗೆ ತಲುಪಿದೆ. ಈ ಬಗ್ಗೆ ಬಾಕ್ಸಾಫೀಸ್ ವಿಶ್ಲೇಷಕ ಮನೋಬಲ ವಿಜಯಬಾಲನ್ ಟ್ವೀಟ್ ಮಾಡಿದ್ದು, ಚಿತ್ರದ ಕಲೆಕ್ಷನ್ ಇನ್ನು ಮುಂದೆ ಕಡಿಮೆಯಾಗಬಹುದು ಎಂದು ಬರೆದಿದ್ದಾರೆ. ಆದರೆ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಚಿತ್ರ ಇನ್ನಷ್ಟು ದಿನ ಉತ್ತಮ ಕಲೆಕ್ಷನ್ ಮಾಡಬಹುದು. ಒಟ್ಟಾರೆ ‘ಬಾಹುಬಲಿ 2’ ರೆಕಾರ್ಡ್​ಅನ್ನು ‘ಆರ್​ಆರ್​ಆರ್​’ಗೆ ಬ್ರೇಕ್ ಮಾಡಲು ಸಾಧ್ಯವಾಗದಿದ್ದರೂ ಭಾರತೀಯ ಚಿತ್ರರಂಗದ ಮಟ್ಟಿಗೆ ಇದು ದೊಡ್ಡ ಮೊತ್ತವನ್ನೇ ಬಾಚಿಕೊಂಡಿದೆ ಎನ್ನಬಹುದು. ಸದ್ಯ ‘ಕೆಜಿಎಫ್ 2’ ಎಷ್ಟು ಗಳಿಸಬಹುದು ಎನ್ನುವುದರ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ.

‘ಆರ್​ಆರ್​ಆರ್’ ಚಿತ್ರವು ಸುಮಾರು 500 ಕೋಟಿ ರೂ ವೆಚ್ಚದಲ್ಲಿ ತಯಾರಾಗಿತ್ತು. ಆಲಿಯಾ ಭಟ್, ಅಜಯ್ ದೇವಗನ್ ಮೊದಲಾದ ತಾರೆಯರು ಕಾಣಿಸಿಕೊಂಡಿದ್ದು ಚಿತ್ರಕ್ಕೆ ಪ್ಲಸ್ ಆಗಿತ್ತು. ಜತೆಗೆ ದೇಶಭಕ್ತಿಯ ಕತಾವಸ್ತು ಜನರಿಗೆ ಕನೆಕ್ಟ್ ಆಗಿತ್ತು.

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link